ಕನ್ನಡಪ್ರಭ ವಾರ್ತೆ ದೇವನಹಳ್ಳಿ
ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಬ್ರಿಗೇಡ್ ಆರ್ಚಡ್ಸ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ೨೦೨೫- ೨೦೨೮ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಪದವಿ ಸ್ವೀಕಾರ ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ಪದಗ್ರಹಣ ಸಮಾರಂಭಗಳಿಗೆ ಪ್ರವಾಸ ಮಾಡಿದ್ದೇನೆ, ಇತರೆ ಜಿಲ್ಲೆಗಳಲ್ಲಿ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿದ್ದಾರೆ, ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಇನ್ನೂ ಸೋಲಿನ ನೋವು ಮಾಸಿಲ್ಲ, ಭಿನ್ನಾಭಿಪ್ರಾಯಗಳಿಂದ ಎದ್ದು ಕಾಣುತ್ತಿದೆ. ಇವೆಲ್ಲಾ ಆದಷ್ಟು ಬೇಗ ಸರಿಪಡಿಸಿಕೊಳ್ಳಿ, ಚುನಾವಣೆಯ ಮುಂಚೆ ಗುಂಪುಗಾರಿಕೆ ಇದ್ದರೂ ಚುನಾವಣೆಯ ನಂತರ ಎಲ್ಲರೂ ಸಂಘದ ಅಡಿಯಲ್ಲೇ ಬರುತ್ತಾರೆ, ಸಂಘದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಒಗ್ಗಟ್ಟಾಗಿ ಭಾಗಿಯಾಗಿ ಸಹಕಾರದಿಂದ ಸಂಘವನ್ನು ಮುನ್ನಡೆಸಿ ಎಂದು ಸಲಹೆ ನೀಡಿ, ಬೀದರ್ ಸಮಾವೇಶವು ಮುಖ್ಯಮಂತ್ರಿಗಳ ದಿನಾಂಕ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಪತ್ರಕರ್ತರು ಇದೇ ಮೊದಲ ಬಾರಿಗೆ ಕ್ರೀಡೆ ಆಯೋಜಿಸಿದ್ದು, ಕ್ರೀಡೆಗಳಲ್ಲಿ ಸೋಲು- ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಇಂತಹ ಕ್ರೀಡಾಕೂಟಗಳು ಮುಂದೆಯೂ ಸಹ ಇನ್ನೂ ಹೆಚ್ಚಾಗಿ ನಡೆಯಲಿ, ತಮ್ಮ ಒತ್ತಡದ ಕಾರ್ಯ ಚಟುವಟಿಕೆಯ ನಡುವೆಯೂ ಆರೋಗ್ಯದ ಕಡೆ ಗಮನ ನೀಡಲು ಇಂತಹ ದೈಹಿಕ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಎಂದರು.
೨೦೨೫- ೨೦೨೮ನೇ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಪದವಿ ಸ್ವೀಕಾರ ಮಾಡಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸಿ .ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ರಮೇಶ್, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಖಜಾಂಚಿ ಮುನಿರಾಜು, ಚುನಾವಣಾಧಿಕಾರಿಯಾದ ಹೊನ್ನಮ್ಮ, ಕ್ರೀಡಾ ಆಯೋಜಕರಾದ ವಿನಯ್ ಮತ್ತು ಜಗದೀಶ್, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.