ಪ್ರತಿ ಗಿಡವೂ ಔಷಧಿ ಗುಣ ಹೊಂದಿರುತ್ತೆ: ಮಹದೇವಯ್ಯ

KannadaprabhaNewsNetwork |  
Published : Mar 10, 2026, 02:15 AM IST
9ಕೆಆರ್ ಎಂಎನ್ 2.ಜೆಪಿಜಿಕುದೂರು ಗ್ರಾಮದಲ್ಲಿ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ತು ಏರ್ಪಡಿಸಿದ್ದ ವೈದ್ಯ ಸಮಾಗಮ ಮತ್ತು ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಕುದೂರು: ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಂದು ಗಿಡವೂ ಔಷಧೀಯ ಗುಣ ಹೊಂದಿವೆ. ಆದರೆ, ಅದರ ಉಪಯೋಗ ಮತ್ತು ಅದನ್ನು ಹೇಗೆ ಉಪಯೊಗಿಸಬೇಕು ಎಂಬುದನ್ನು ಖರಾರುವಕ್ಕಾದ ಅನುಭವ ಮತ್ತು ಅಧ್ಯಯನದಿಂದ ಪಾರಂಪರಿಕ ವೈದ್ಯ ಪದ್ಧತಿಯಿಂದ ಸಾಧ್ಯವಾಗಿದೆ ಎಂದು ರಾಜ್ಯ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಮಹದೇವಯ್ಯ ಹೇಳಿದರು

ಕುದೂರು: ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಂದು ಗಿಡವೂ ಔಷಧೀಯ ಗುಣ ಹೊಂದಿವೆ. ಆದರೆ, ಅದರ ಉಪಯೋಗ ಮತ್ತು ಅದನ್ನು ಹೇಗೆ ಉಪಯೊಗಿಸಬೇಕು ಎಂಬುದನ್ನು ಖರಾರುವಕ್ಕಾದ ಅನುಭವ ಮತ್ತು ಅಧ್ಯಯನದಿಂದ ಪಾರಂಪರಿಕ ವೈದ್ಯ ಪದ್ಧತಿಯಿಂದ ಸಾಧ್ಯವಾಗಿದೆ ಎಂದು ರಾಜ್ಯ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಮಹದೇವಯ್ಯ ಹೇಳಿದರು.

ಕುದೂರು ಗ್ರಾಮದಲ್ಲಿ ಪಾರಂಪರಿಕ ವೈದ್ಯ ಪರಿಷತ್‌ ಏರ್ಪಡಿಸಿದ್ದ ವೈದ್ಯ ಸಮಾವೇಶ ಉದ್ಘಾಟಿಸಿದ ಅವರು, ಪ್ರತಿಯೊಂದು ವೈದ್ಯ ಪದ್ದತಿಯೂ ಅದರದೇ ಅದ ಮಹತ್ವ ಹೊಂದಿದೆ ಎಂದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಜಿ.ಶಂಕರಪ್ಪ ಮಾತನಾಡಿ, ಕಾಲ ಬದಲಾದಂತೆ ಸಾಂಪ್ರದಾಯಿಕವಾಗಿ ಗಿಡಮೂಲಿಕೆಗಳ ಶಿಕ್ಷಣ ಪಡೆಯುತ್ತಿದ್ದ ವ್ಯವಸ್ಥೆಯನ್ನು ಇಂದು ವೈಜ್ಞಾನಿಕವಾಗಿ ಅದಕ್ಕೊಂದು ಸ್ಥಾನ ಕಲ್ಪಿಸಿ ಸರ್ಕಾರಗಳು ಶಾಸ್ತ್ರೀಯವಾಗಿ ಅಧ್ಯಯನ ಮಾಡುವಂತೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಎಂತೆಂತಹ ಕಠಿಣ ಕಾಯಿಲೆಗಳಿಗೂ ಗಿಡಮೂಲಿಕೆಗಳಿಂದ ಪರಿಣಾಮಕಾರಿ ಔಷಧ ನೀಡಲಾಗಿದೆ ಎಂದರು.

ಪಾರಂಪರಿಕ ಪರಿಷತ್‌ ಉಪಾಧ್ಯಕ್ಷ ಗುರುನಾಥ್ ಮಾತನಾಡಿ, ಸರಿಯಾದ ಮಾರ್ಗದರ್ಶನವಿಲ್ಲದೆ ಪಾರಂಪರಿಕ ವಿದ್ಯೆಯಿಂದ ತಯಾರಿಸಿದ ಅನೇಕ ಔಷಧಿಗಳನ್ನು ಕೆಲವರು ಜಗತ್ತಿನಾದ್ಯಂತ ಮಾರುಕಟ್ಟೆ ಮಾಡಬಲ್ಲಷ್ಟು ಚಾತಿಯಾಗಿದ್ದಾರೆ. ಇಂತಹ ಪದ್ಧತಿಯಿಂದ ತಯಾರಾದ ಔಷಧ ಮತ್ತು ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ನಿರ್ಮಿಸಿಕೊಟ್ಟರೆ ಭಾರತ ನಿಜವಾದ ವೈದ್ಯಾಲಯದಂತೆ ಕೆಲಸ ನಿರ್ವಹಿಸುವುದರಲ್ಲಿ ಅನುಮಾನವೇ ಇಲ್ಲ ಎಂದರು.

ತಾಲೂಕು ಘಟಕದ ಅಧ್ಯಕ್ಷ ಆರ್.ಮೋಹನ್ ಸ್ವಾಮಿ, ದಯಾನಂದ್, ವೈದ್ಯರಾದ ಗಂಗರಾಜ್, ರಾಜೇಶ್, ಶಿವಲಿಂಗಯ್ಯ, ಬಸವರಾಜ್, ಶಿವಕುಮಾರ್, ಆಂಜನಪ್ಪ, ಕೃಷ್ಣಪ್ಪ, ಮುತ್ತುರಾಜ್, ಹರೀಶ್ ಮತ್ತಿತರರು ಹಾಜರಿದ್ದರು.

9ಕೆಆರ್ ಎಂಎನ್ 2.ಜೆಪಿಜಿ

ಕುದೂರು ಗ್ರಾಮದಲ್ಲಿ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ತು ಏರ್ಪಡಿಸಿದ್ದ ವೈದ್ಯ ಸಮಾಗಮ ಮತ್ತು ತಪಾಸಣಾ ಶಿಬಿರ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆ ಕನಸು ಈಡೇರಿಸಲು ಅಧ್ಯಯನ ಅವಶ್ಯಕ : ಶ್ರೀನಿವಾಸ್
ಕೆ.ಆರ್. ಆಸ್ಪತ್ರೆಯಲ್ಲಿ 100 ಹಾಸಿಗೆವುಳ್ಳ ಐ.ಸಿ.ಯು ಘಟಕ ಸ್ಥಾಪಿಸಿ: ಕೆ. ಶಿವಕುಮಾರ್