- ಮತ್ತೆ ವಿಶ್ವಗುರು ಆಗುವತ್ತ ಭಾರತ-ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶ್ರೀಗಳು
ಅನಾದಿಯಿಂದಲೂ ಭಾರತವು ತನ್ನ ಸಂಸ್ಕಾರ, ಪರಂಪರೆಯ ಕಾರಣದಿಂದಲೇ ವಿಶ್ವಗುರುವಾಗಿದೆ. ಇದೀಗ ಮತ್ತೆ ವಿಶ್ವಗುರು ಆಗುವತ್ತ ಸಾಗುತ್ತಿದೆ. ಅಂತಹ ಭೂಮಿಯಲ್ಲಿ ಜನಿಸಿದ ಎಲ್ಲರೂ ಪುಣ್ಯವಂತರು ಎಂದು ಕಣ್ವಕುಪ್ಪೆ ಗವಿ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಹೈಸ್ಕೂಲ್ ಮೈದಾನದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಶನಿವಾರ ಸಂಜೆ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ, ವಿಶ್ವ ಹಿಂದು ಪರಿಷದ್‌ನಿಂದ ಹಮ್ಮಿಕೊಂಡಿದ್ದ ಅಂಬುಛೇದನ ಹಾಗೂ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ತಾಯಿಯು ದುಷ್ಕರನ್ನು ಸಂಹರಿಸಿ, ಪರಮ ಭಕ್ತರನ್ನು ಸಂರಕ್ಷಿಸಿದ ಪುಣ್ಯ ದಿನವೇ ವಿಜಯದಶಮಿಯಾಗಿದೆ ಎಂದು ಶ್ರೀಗಳು ತಿಳಿಸಿದರು.ಅಂಬುಛೇದನ ನೆರವೇರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸದಾ ವಿದ್ಯೆಯು ಹಣವಂತ, ಬುದ್ಧಿವಂತನಾಗಿದೆ. ಮಕ್ಕಳಿಗೆ ಮಾತೃಭಾಷೆಯ ಜೊತೆಗೆ ಇತರೆ ಭಾಷೆಗಳನ್ನೂ ಕಲಿಸಬೇಕು ಎಂದರು.
- - - -12ಕೆಡಿವಿಜಿ16: