ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಚ್‌ಎಂಟಿ ಕಂಪನಿ ಬಿಡುಗಡೆ ಮಾಡಿರುವ ತ್ರಿವರ್ಣ ಧ್ವಜ ಸಹಿತ ಗಂಡಭೇರುಂಡ ಇರುವ ವಿಶೇಷ ಆವೃತ್ತಿಯ ಕೈಗಡಿಯಾರಗಳಿಗೆ ಸಾರ್ವಜನಿಕರು ಸುಮಾರು ಎರಡೂವರೆ ಕಿ.ಮೀ. ಸಾಲುಗಟ್ಟಿ ನಿಂತು ಖರೀದಿಸಿದ್ದಾರೆ.
ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಚ್‌ಎಂಟಿ ಕಂಪನಿ ಬಿಡುಗಡೆ ಮಾಡಿರುವ ತ್ರಿವರ್ಣ ಧ್ವಜ ಸಹಿತ ಗಂಡಭೇರುಂಡ ಇರುವ ವಿಶೇಷ ಆವೃತ್ತಿಯ ಕೈಗಡಿಯಾರಗಳಿಗೆ ಸಾರ್ವಜನಿಕರು ಸುಮಾರು ಎರಡೂವರೆ ಕಿ.ಮೀ. ಸಾಲುಗಟ್ಟಿ ನಿಂತು ಖರೀದಿಸಿದ್ದಾರೆ.
ನಗರದ ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಕಾರ್ಖಾನೆ
ನಗರದ ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಕಾರ್ಖಾನೆ ಆವರಣದ ಮಳಿಗೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಖರೀದಿ ಮಾಡಿದರು. ಪ್ರಮುಖವಾಗಿ ಜಾಲಹಳ್ಳಿ ಮತ್ತು ಮೇಕ್ರಿ ಸರ್ಕಲ್ ಸಮೀಪದಲ್ಲಿರುವ ಎಚ್ಎಂಟಿ ಭವನದ ಮಳಿಗೆಯಲ್ಲಿದ್ದ ಎಲ್ಲ ವಾಚುಗಳು ಒಂದೇ ದಿನಕ್ಕೆ ಖಾಲಿಯಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿಸಿದ ಎಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್, ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಸೀಮಿತ ಸರಣಿಯ ವಿಶೇಷ ಗಡಿಯಾರಗಳನ್ನು ಬಿಡುಗಡೆ ಮಾಡಲಾಗಿತ್ತು. ತ್ರಿವರ್ಣ ಧ್ವಜ ಇರುವ ವಿಶೇಷ ವಾಚ್ ಗಳು ಹಾಗೂ ಗಂಡಭೇರುಂಡ ಕೈ ಗಡಿಯಾರಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಮತ್ತಷ್ಟು ವಾಚ್ ಗಳನ್ನು ತಯಾರಿಸಿ ಬಿಡುಗಡೆ ಮಾಡಲಾಗುವುದು ಹಾಗೂ ಅತ್ಯುತ್ತಮ ಗುಣಮಟ್ಟದ ಆಟೋಮ್ಯಾಟಿಕ್ ವಾಚ್‌ಗಳನ್ನು ಕೂಡ ಮಾರಾಟಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಿಲೋಮಿಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಎಚ್ಎಂಟಿ ಗಡಿಯಾರ ಖರೀದಿಗೆ ಸಾರ್ವಜನಿಕರು ಬಂದಿದ್ದನ್ನು ನೋಡಿ ಬಹಳ ಸಂತೋಷವಾಗಿದೆ. ನಾವೆಲ್ಲರೂ ಚಿಕ್ಕವರಿದ್ದಾಗಿನಿಂದಲೂ ಎಚ್ಎಂಟಿ ವಾಚುಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಈ ಕಾರ್ಖಾನೆಗೆ ಮರುಜೀವ ನೀಡಲು ಪ್ರಯತ್ನ ಮಾಡುತ್ತಿದ್ದೇವೆ.
