ವೀರಲೋಕ ಪ್ರತಿಷ್ಠಾನದದಿಂದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್ಸ್) ಆಯೋಜಿಸಲಾಗಿದ್ದ ಮೂರು ದಿನಗಳ ‘ವೀರಲೋಕ ಪುಸ್ತಕ ಸಂತೆ - 6’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
-ಸಾವಿರಾರು ಸಂಖ್ಯೆಯಲ್ಲಿ ಓದುಗರು, ಸಾಹಿತ್ಯಾಸಕ್ತರು ಭಾಗಿ । ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ವಿಚಾರಗೋಷ್ಠಿಕನ್ನಡಪ್ರಭ ವಾರ್ತೆ ಬೆಂಗಳೂರು
ವೀರಲೋಕ ಪ್ರತಿಷ್ಠಾನದದಿಂದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್ಸ್) ಆಯೋಜಿಸಲಾಗಿದ್ದ ಮೂರು ದಿನಗಳ ‘ವೀರಲೋಕ ಪುಸ್ತಕ ಸಂತೆ - 6’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.ನವೆಂಬರ್ 20 ರಿಂದ 22ರವರೆಗೆ ನಡೆದ ಈ ಕನ್ನಡದ ಅಕ್ಷರ ಹಬ್ಬಕ್ಕೆ ಸಾವಿರಾರು ಓದುಗರು, ಸಾಹಿತ್ಯಾಸಕ್ತರು ಹಾಗೂ ಪುಸ್ತಕ ಪ್ರೇಮಿಗಳುಆಗಮಿಸಿ ಸಂಭ್ರಮಿಸಿದರು. ಮೂರನೇ ದಿನವಾದ ಭಾನುವಾರವೂ ಲಕ್ಷಾಂತರ ರು.ಮೌಲ್ಯದ ಪುಸ್ತಕಗಳು ಮಾರಾಟವಾದವು. ಪ್ರಕಾಶನಗಳ ಮಳಿಗೆಗಳಲ್ಲಿ ಯುವಜನತೆ ಹಾಗೂ ಕುಟುಂಬ ಸಮೇತರಾಗಿ ಆಗಮಿಸಿದ ಜನರು ತಮಗೆ ಬೇಕಾದ ಪುಸ್ತಕಗಳನ್ನು ಮುಗಿಬಿದ್ದು ಖರೀದಿಸಿದರು. ಮೂರು ದಿನಗಳ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ಸಂವಾದಗಳು, ವಿಚಾರಗೋಷ್ಠಿಗಳು ಹಾಗೂ ಹೊಸ ಕೃತಿಗಳ ಬಿಡುಗಡೆಗೊಂಡವು.
ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು, ಅಕಾಡೆಮಿ ಮುಂತಾದ ಸಂಸ್ಥೆಗಳಿಂದ ಸಾಹಿತ್ಯ ಸೃಷ್ಟಿಗೇನಾದರೂ ಪ್ರಯೋಜನವುಂಟೆ ಎಂಬ ವಿಷಯ ಕುರಿತು ಭಾನುವಾರ ನಡೆದ ಸಂವಾದದಲ್ಲಿ ರಘುನಾಥ್ ಚ.ಹ., ನೂತನ ದೋಶೆಟ್ಟಿ, ಕರ್ಕಿ ಕೃಷ್ಣಮೂರ್ತಿ ಅವರು ಪಾಲ್ಗೊಂಡಿದ್ದರು. ಸಾಹಿತ್ಯಿಕ ಸಂಸ್ಥೆಗಳು ಹುಟ್ಟಿಕೊಂಡಿರುವುದರ ಉದ್ದೇಶದ ಸ್ಪಷ್ಟತೆ ಯಾರಿಗೂ ಇಲ್ಲ. ಪುಸ್ತಕ ಪ್ರಕಟಣೆ, ಪ್ರಶಸ್ತಿ ಕೊಡುವುದಕ್ಕೆ ಮಾತ್ರ ಸೀಮಿತ ಎಂದುಕೊಂಡಿವೆ. ಸಂಸ್ಥೆಗಳು ಮೂಲ ಆಶಯದಿಂದ ದೂರ ಸರಿದಿವೆ. ಸಾಹಿತ್ಯ ಪರಿಷತ್ತು, ಅಕಾಡೆಮಿ, ಸಂಸ್ಥೆಗಳಿಂದ ಉಪಯೋಗಗಳಿವೆ ಅನ್ನುವುದಕ್ಕಿಂತ ಸರ್ಕಾರಕ್ಕೆ ಅನುಕೂಲವಿದೆ ಎನ್ನಬಹುದು. ಈಗ ಸಾಹಿತ್ಯ ಪರಿಷತ್ ಆದ್ಯತೆಗಳು ಬದಲಾಗಿವೆ. ಸಾಹಿತ್ಯ ಸಾರ್ವತ್ರಿಕವಾದಾಗ ಲಾಭ ನಷ್ಟದ ವಿಚಾರ ಬರಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಿತ್ರಸಾಹಿತಿ ಕೆ.ಕಲ್ಯಾಣ, ಹಿರಿಯ ನಟ ಸುಂದರರಾಜ್, ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್, ಹಿರಿಯ ನಿರ್ದೇಶಕ ನಾಗಾಭರಣ, ವೀರಲೋಕ ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
---ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್ಸ್) ವೀರಲೋಕ ಪ್ರತಿಷ್ಠಾನದದಿಂದ ಆಯೋಜಿಸಿದ್ದ ಮೂರು ದಿನಗಳ ‘ವೀರಲೋಕ ಪುಸ್ತಕ ಸಂತೆ - 6’ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.