ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಪ್ರಗತಿಪರ ಯುವ ಬಳಗ ನಮ್ಮ ನಡಿಗೆ ಸ್ವಚ್ಛತೆ ಕಡೆಗೆ ಅಭಿಯಾನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿ ಮಲ್ಲೇನಹಳ್ಳಿ ಪ್ರದೇಶ ಸೇರಿದಂತೆ ಇಡೀ ಮಲೆನಾಡು ನಿಸರ್ಗದತ್ತ ಸೌಂದರ್ಯದ ಖನಿಜ. ಅದನ್ನು ಮುಕ್ಕಾಗದಂತೆ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಗ್ರಾಮೀಣರಿಂದ ಆಗಬೇಕಾಗಿದೆ ಎಂದರು.
ನೆಲ, ಜಲ, ಭೂಮಿ, ಪ್ರಕೃತಿ ಮತ್ತು ಪರಿಸರ ಸಂರಕ್ಷಿಸುವುದು ಕೇವಲ ಸರ್ಕಾರದ ಕೆಲಸವಷ್ಟೇ ಅಲ್ಲ ಅದು ನಮ್ಮೆಲ್ಲರ ಜವಾಬ್ದಾರಿ. ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಪರಿಸರವನ್ನು ಈಗಲೇ ಉಳಿಸಲು ಮುಂದಾಗದಿದ್ದರೆ ಮುಂದೊಂದು ದಿನ ಕೊಡಗಿನಲ್ಲಾದ ಅವಘಡ ಇಲ್ಲೂ ನಡೆಯುತ್ತದೆ ಎಂದು ಎಚ್ಚರಿಸಿದರು.ಮಲೆನಾಡಿನ ಸುಂದರ ಪರಿಸರ ಮುಂದಿನ ಪೀಳಿಗೆಗೆ ಉಳಿಯಲು ನಾವು ನೆಲ, ಜಲ, ಗಾಳಿ, ಪರಿಸರದ ಬಗ್ಗೆ ಪ್ರೀತಿ ಬೆಳೆಸಿ ಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ದೇವೀರಮ್ಮ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎ.ಕುಲಶೇಖರ್ ಮಾತನಾಡಿ ಹೋಂ ಸ್ಟೇಗಳು ಹೆಚ್ಚಳವಾದ ನಂತರ ಗ್ರಾಮ ಮತ್ತು ಸುತ್ತಮುತ್ತಲ ಪರಿಸರ ಹಾಳಾಗುತ್ತಿದೆ. ಅದನ್ನು ತಡೆಗಟ್ಟುವ ಕೆಲಸವಾಗಬೇಕು ಎಂದರು.