ಪಕ್ಷದ ಅಧ್ಯಕ್ಷರಾಗಲು ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರಿಗೂ ಅವಕಾಶ

KannadaprabhaNewsNetwork |  
Published : Nov 13, 2026, 02:00 AM IST
ಕಾಂಗ್ರೆಸ್ ಪಕ್ಷದ ಸೃಜನ್ ಅಭಿಯಾನ್ ಭಾಗವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಸಾಯಿ ಗಾಂವಕರ ಅವರನ್ನು ಶಾಸಕ ವಿನಯ ಕುಲಕರ್ಣಿ ಗೌರವಿಸಿದರು.  | Kannada Prabha

ಸಾರಾಂಶ

ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ಅಧ್ಯಕ್ಷರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಪಕ್ಷದ‌ ವರಿಷ್ಠರ ಮತ್ತು ಕಾರ್ಯಕರ್ತರ‌ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು.

ಧಾರವಾಡ:

ಕಾಂಗ್ರೆಸ್ ಪಕ್ಷದ ಸೃಜನ್ ಅಭಿಯಾನ್ ಭಾಗವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯು ಬುಧವಾರ ಇಲ್ಲಿನ ಸರ್ಕಾರಿ ನೌಕರರ ಸಭಾಭವನದಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ‌ ವಿನಯ ಕುಲಕರ್ಣಿ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಅಧ್ಯಕ್ಷರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಪಕ್ಷದ‌ ವರಿಷ್ಠರ ಮತ್ತು ಕಾರ್ಯಕರ್ತರ‌ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಅದಕ್ಕಿಂತ ಹೆಚ್ಚಾಗಿ ಕ್ಷೇತ್ರದ ‌ಪ್ರತಿಯೊಬ್ಬ ಜನರ ಜೊತೆ ಸತತ ಸಂಪರ್ಕ ಸಾಧಿಸಿ, ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡಬೇಕು. ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಚತುರಮತಿ ತೋರಿಸಬೇಕು. ಈ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಆಸಕ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಸದಸ್ಯ ಸಾಯಿ ಗಾಂವಕರ ಮಾತನಾಡಿ, ಪಕ್ಷದ ಅಧ್ಯಕ್ಷರಾಗಲು ಪ್ರತಿಯೊಬ್ಬ ಕಾರ್ಯಕರ್ತರಿಗೆ ಅವಕಾಶವಿದೆ. ಆಸಕ್ತರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಒಬ್ಬರ ಹೆಸರನ್ನು 2-3 ದಿನಗಳಲ್ಲಿ ಅಖೈರುಗೊಳಿಸಲಾಗುವುದು. ಹೊಸ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ಪಕ್ಷವನ್ನು ‌ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

ಪಕ್ಷದ ವೀಕ್ಷಕರಾದ ಸ್ವಾತಿ ಮಾಳಗಿ, ಜಿಲ್ಲಾ ಅಧ್ಯಕ್ಷ ‌ಚಂದ್ರಶೇಖರ ಜುಟ್ಟಲ, ಬ್ಲಾಕ್ ಅಧ್ಯಕ್ಷ ಈಶ್ವರ ಶಿವಳ್ಳಿ, ಮಾಜಿ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಪಾರ್ಶ್ವನಾಥ ಪತ್ರಾವಳಿ, ದಶರಥರಾವ‌ ದೇಸಾಯಿ, ಸುಪ್ರಿಯ‌ ಪಾಟೀಲ, ಶಂಕರಗೌಡ ಪಾಟೀಲ, ಪರಮೇಶ್ವರ ಕಟ್ಟಿಮನಿ, ಸೋಮನಗೌಡ ಪಾಟೀಲ, ಭೀಮಪ್ಪ‌ ಕಾಸಾಯಿ, ಮಡಿವಾಳಪ್ಪ ದಿಂಡಲಕೊಪ್ಪ ಇದ್ದರು. ಪರಮೇಶ್ವರ ‌ಕಾಳೆ ನಿರೂಪಿಸಿದರು. ಫಿರೋಜ್ ನಾಯ್ಕರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌