ಕನ್ನಡಪ್ರಭ ವಾರ್ತೆ ಗುಡಿಬಂಡೆ
ನೂತನ ಅಧ್ಯಕ್ಷೆ ಅನುರಾಧ ಆನಂದ್ ರವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಗಡಿಭಾಗವಾದ ಗುಡಿಬಂಡೆಯಲ್ಲಿ ಈಗಾಗಲೇ ಕನ್ನಡ ಉನ್ನತ ಸ್ಥಾನದಲ್ಲಿದೆ. ಈ ಭಾಗದಲ್ಲಿ ಆಡು ಭಾಷೆ, ವ್ಯಾವಹಾರಿಕ ಭಾಷೆ ತೆಲುಗು ಆದರೂ ಸಹ, ಕನ್ನಡ ಭಾಷೆಗೆ ಯಾವುದೇ ಧಕ್ಕೆಯಿಲ್ಲ. ಕನ್ನಡಪರ ಸಂಘಟನೆಗಳು ಈ ಭಾಗದಲ್ಲಿ ಕನ್ನಡ ಭಾಷೆಯ ಹಿರಿಮೆ ಸಾರುವಂತಹ ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಳ್ಳುತ್ತಿರುತ್ತಾರೆ. ಈ ಕೆಲಸ ತಾತ್ಕಾಲಿಕವಾಗಿ ಅಥವಾ ಸಂದರ್ಭಗಳಿಗೆ ತಕ್ಕಂತಿರಬಾರದು, ಬದಲಿಗೆ ಇದು ನಿರಂತರವಾಗಿ ನಡೆಯುತ್ತಿರಬೇಕು. ನನ್ನ ಮೇಲಿನ ನಂಬಿಕೆಯಿಂದ ಇದೀಗ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷೆಯಾಗಿ ಹೊಸ ಜವಾಬ್ದಾರಿಯನ್ನು ನೀಡಿದ್ದು, ಈ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಯೂಥ್ ಕಾಂಗ್ರೆಸ್ ಅಧ್ಯಕ್ಷ ಅಂಬರೀಶ್ ಮಾತನಾಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನುರಾಧಾರವರಿಗೆ ಅಭಿನಂದಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಬಿ.ಮಂಜುನಾಥ್, ಪಪಂ ಅಧ್ಯಕ್ಷ ವಿಕಾಸ್, ಸದಸ್ಯೆ ಮಂಜುಳಾ, ಬಿ.ಆರ್.ಸಿ ಸಂಯೋಜಕಿ ಗಂಗರತ್ನಮ್ಮ, ಕರ್ನಾಟಕ ರಕ್ಷಣಾ ವೇದಿಕೆಯ ಆನಂದ್, ಶ್ರೀನಿವಾಸ್ ಯಾದವ್, ಜಯ ಕರ್ನಾಟಕ ಸಂಘಟನೆಯ ಅಂಬಿಕಾ, ಕಸಾಪ ಸಂಘಟನೆಯ ವಾಹಿನಿ ಸುರೇಶ್, ವೀಣಾ, ಅನಿತಾ, ಭಾರತಿ, ಶ್ರೀನಿವಾಸ್ ಗಾಂಧಿ, ಶಿಕ್ಷಕರಾದ ಮಹಾಲಕ್ಷ್ಮೀ, ಅರುಣ, ಕನ್ನಡಾಭಿಮಾನಿ ಪುನೀತ್ ಕನ್ನಡಿಗ ಸೇರಿದಂತೆ ಹಲವರು ಇದ್ದರು.