ಶಿವಮೊಗ್ಗದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ

KannadaprabhaNewsNetwork |  
Published : Jun 27, 2025, 12:49 AM IST
ಕರ್ಣಾಟಕ ಬ್ಯಾಂಕಿನ 953ನೇ ಶಾಖೆಯಾಗಿ ಆರಂಭಗೊಂಡ ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ್ ಶಾಖೆಯ ಉದ್ಘಾಟನೆಯನ್ನು  ಉದ್ಯಮಿ ಹಾಗೂ ಕರ್ನಾಟಕ ಬ್ಯಾಂಕ್ ನ ಮಾಜಿ ನಿರ್ದೇಶಕ ಕಿಮ್ಮನೆ ಜಯರಾಮ್ ನೆರವೇರಿಸಿದರು. | Kannada Prabha

ಸಾರಾಂಶ

ಇಡೀ ದೇಶದಲ್ಲಿಯೇ ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಪರಂಪರೆಯನ್ನು ಮಾತ್ರವಲ್ಲ ಅಭಿವೃದ್ಧಿಗೆ ವಿಫುಲ ಅವಕಾಶವಿರುವ ಶಿವಮೊಗ್ಗ ಜಿಲ್ಲೆಗೆ ಇಲ್ಲಿನ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆಗ ಈ ಜಿಲ್ಲೆಯು ದೇಶದ ಮುಂಚೂಣಿ ನಗರದ ಸಾಲಿಗೆ ಬಂದು ನಿಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ಉದ್ಯಮಿ ಹಾಗೂ ಕರ್ಣಾಟಕ ಬ್ಯಾಂಕ್ ನ ಮಾಜಿ ನಿರ್ದೇಶಕ ಕಿಮ್ಮನೆ ಜಯರಾಮ್ ಅಭಿಪ್ರಾಯಪಟ್ಟರು.

ಶಿವಮೊಗ್ಗ: ಇಡೀ ದೇಶದಲ್ಲಿಯೇ ಪ್ರಾಕೃತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಪರಂಪರೆಯನ್ನು ಮಾತ್ರವಲ್ಲ ಅಭಿವೃದ್ಧಿಗೆ ವಿಫುಲ ಅವಕಾಶವಿರುವ ಶಿವಮೊಗ್ಗ ಜಿಲ್ಲೆಗೆ ಇಲ್ಲಿನ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆಗ ಈ ಜಿಲ್ಲೆಯು ದೇಶದ ಮುಂಚೂಣಿ ನಗರದ ಸಾಲಿಗೆ ಬಂದು ನಿಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ಉದ್ಯಮಿ ಹಾಗೂ ಕರ್ಣಾಟಕ ಬ್ಯಾಂಕ್ ನ ಮಾಜಿ ನಿರ್ದೇಶಕ ಕಿಮ್ಮನೆ ಜಯರಾಮ್ ಅಭಿಪ್ರಾಯಪಟ್ಟರು.

ಗುರುವಾರ ಕರ್ನಾಟಕ ಬ್ಯಾಂಕಿನ 963ನೇ ಶಾಖೆಯಾಗಿ ಆರಂಭಗೊಂಡ ರಾಮಣ್ಣ ಶ್ರೇಷ್ಟಿ ಪಾರ್ಕ್ ಶಾಖೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಇಲ್ಲಿನ ಅಭಿವೃದ್ಧಿ ಕಂಡು ಅನೇಕರು ಆಶ್ಚರ್ಯ ಚಕಿತರಾಗಿದ್ದಾರೆ. ಸ್ವಚ್ಛತಾ ನಗರಿ ಎಂದು ಬಣ್ಣಿಸುತ್ತಿದ್ದಾರೆ. ನಾನು ಅನೇಕ ನಗರಗಳನ್ನು ನೋಡಿದ್ದು, ಶಿವಮೊಗ್ಗ ನನ್ನ ಊರು ಎನ್ನಲು ನನಗೆ ಹೆಮ್ಮೆ ಎನಿಸುತ್ತದೆ. ಮುಂದಿನ ಕೆಲವೇ ತಿಂಗಳಲ್ಲಿ ಇಲ್ಲಿ ಮಹತ್ವದ ಬದಲಾವಣೆಯಾಗುವುದು, ಅಂತಾರಾಷ್ಟ್ರೀಯ ಭೂಪಟದಲ್ಲಿ ಶಿವಮೊಗ್ಗ ಗುರುತಿಸಲ್ಪಡುವುದು ಖಚಿತ ಎಂದರು.ಪ್ರವಾಸೋಧ್ಯಮಕ್ಕೆ ಈ ಜಿಲ್ಲೆಯಲ್ಲಿ ಅಪಾರ ಅವಕಾಶವಿದ್ದು, ಉತ್ತಮ ಸಂಪರ್ಕ ಕೂಡ ಹೊಂದಿರುವ ಇಲ್ಲಿನ ಈ ಅವಕಾಶವನ್ನು ಇನ್ನಷ್ಟು ಬಳಸಿಕೊಳ್ಳಬೇಕಾಗಿದೆ ಎಂದರು.ಕರ್ಣಾಟಕ ಬ್ಯಾಂಕ್ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಸಾಧಿಸಿದೆ ಮತ್ತು ಸಾಧಿಸುತ್ತಿದೆ. ಇದಕ್ಕೆ ಬ್ಯಾಂಕಿನ ಸಿಬ್ಬಂದಿ ವರ್ಗ, ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿಯೇ ನೇರ ಕಾರಣ. ಅವರು ಗ್ರಾಹಕರ ಜೊತೆ ಅತ್ಯಂತ ನಿಕಟವಾದ ಸಂಪರ್ಕ, ಸಂವಹನ ಹೊಂದಿದ್ದು, ಒಂದು ಕುಟುಂಬದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ವಿಚಾರದಲ್ಲಿಯೂ ಅವರ ಪಾಲೋ ಅಪ್ ಅನುಕರಣೀಯ. ನಾನು ಎಷ್ಟೋ ಬ್ಯಾಂಕ್‌ಗಳಲ್ಲಿ ವ್ಯವಹರಿಸಿದ್ದೇನೆ. ಆದರೆ ಕರ್ಣಾಟಕ ಬ್ಯಾಂಕ್ ನೀಡುವ ತ್ವರಿ ಸೇವೆ ಮಹತ್ವದ್ದು ಎನಿಸುತ್ತದೆ ಎಂದು ಶ್ಲಾಘಿಸಿದರು.ಹಿರಿಯ ಗ್ರಾಹಕ ಡಾ.ಪಿ.ನಾರಾಯಣ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕ್ ವ್ಯವಸ್ಥೆಯಲ್ಲಿನ ಮಾನವೀಯ ಸಂಬಂಧವೇ ಇದಕ್ಕೆ ಮುಖ್ಯ ಕಾರಣ. ಸಿಬ್ಬಂದಿಗಳ ನಿಸ್ವಾರ್ಥ ಮತ್ತು ಗ್ರಾಹಕ ಸೇವಾ ಮನೋಭಾವ ಈ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.ಬ್ಯಾಂಕಿನ ಜನರಲ್ ಮ್ಯಾನೇಜರ್ ಎಸ್.ರವಿಚಂದ್ರನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ತನ್ನ ಸಿಬ್ಬಂದಿಗಳ ಸೇವಾ ಮನೋಭಾವ, ಗ್ರಾಹಕರ ಪ್ರೀತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ಇಂದು 1.80 ಲಕ್ಷ ಕೋಟಿ ರು. ವಹಿವಾಟು ದಾಟಿ ಮುಂದಡಿಯಿಡುತ್ತಿದೆ. ಇಂದು 1963ನೇ ಶಾಖೆಯಾಗಿ ಇದು ಲೋಕಾರ್ಪಣೆಗೊಳ್ಳುತ್ತಿದೆ. ಶಿವಮೊಗ್ಗ ವಿಭಾಗದಲ್ಲಿ 85ನೇ ಶಾಖೆಯಾಗಿ ಸೇರ್ಪಡೆಗೊಳ್ಳುತ್ತಿದೆ ಎಂದರು.ಶಿವಮೊಗ್ಗ ವಿಭಾಗೀಯ ಎಜಿಎಂ ಎಚ್.ಎ.ನಾಗರಾಜ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಸ್ಟರ್ ಹೆಡ್ ಗಣೇಶ್ ಕುಮಾರ್.ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ಎಸ್.ನಾಗೇಂದ್ರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ