ಪ್ರತಿಯೊಬ್ಬರೂ ಭಾರತ ಮಾತೆಯ ರಕ್ಷಣೆ, ಒಗ್ಗಟ್ಟಿಗಾಗಿ ಶ್ರಮಿಸಬೇಕು

KannadaprabhaNewsNetwork |  
Published : Oct 13, 2026, 02:15 AM IST
ರಾಣಿಬೆನ್ನೂರು ನಗರದ ಸ್ಟೇಷನ್ ರಸ್ತೆ ಕರ್ನಾಟಕ ಸಂಘದ ಆಲೂರು ವೆಂಕಟರಾಯರ ರಂಗಮAದಿರದಲ್ಲಿ ಏರ್ಪಡಿಸಿದ್ದ ನಾಡಹಬ್ಬ ಕಾರ್ಯಕ್ರಮವನ್ನು ರಾಷ್ಟ್ರೀಯ ನಾಟಕಕಾರ ಮತ್ತು ರಂಗಾಯಣದ ನಿಕಟ ಪೂರ್ವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪ್ರತಿಯೊಬ್ಬರೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಭಾರತ ಮಾತೆಯ ರಕ್ಷಣೆ ಮತ್ತು ಒಗ್ಗಟ್ಟಿಗಾಗಿ ಶ್ರಮಿಸಬೇಕು ಎಂದು ರಾಷ್ಟ್ರೀಯ ನಾಟಕಕಾರ ಮತ್ತು ರಂಗಾಯಣದ ನಿಕಟ ಪೂರ್ವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ರಾಣಿಬೆನ್ನೂರು: ಪ್ರತಿಯೊಬ್ಬರೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಭಾರತ ಮಾತೆಯ ರಕ್ಷಣೆ ಮತ್ತು ಒಗ್ಗಟ್ಟಿಗಾಗಿ ಶ್ರಮಿಸಬೇಕು ಎಂದು ರಾಷ್ಟ್ರೀಯ ನಾಟಕಕಾರ ಮತ್ತು ರಂಗಾಯಣದ ನಿಕಟ ಪೂರ್ವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ನಗರದ ಸ್ಟೇಷನ್ ರಸ್ತೆ ಕರ್ನಾಟಕ ಸಂಘದ ಆಲೂರು ವೆಂಕಟರಾಯರ ರಂಗಮಂದಿರದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯರ ಸಂಸ್ಕೃತಿ, ಸಂಸ್ಕಾರ ಮತ್ತು ಸನಾತನ ಧರ್ಮವು ಋಷಿಮುನಿಗಳು ಹಾಗೂ ತಪಸ್ವಿಗಳ ಮೂಲಕ ನಿರ್ಮಾಣವಾಗಿದೆ. ದೇಶದ ಇತಿಹಾಸದಲ್ಲಿ ನಡೆದ ಕೆಲವು ಪ್ರಮಾದಗಳು ಮತ್ತು ವಿಭಜನೆಗಳು ಹಿಂದೂ ಸಮಾಜದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಉಂಟು ಮಾಡಿದೆ. ಮಹಾತ್ಮ ಗಾಂಧೀಜಿಯವರ ರಾಜಕೀಯ ಧೋರಣೆಗಳು ಮತ್ತು ಮುಸ್ಲಿಂ ತುಷ್ಟೀಕರಣದ ರಾಜನೀತಿಯು ದೇಶದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಾಲ ಗಂಗಾಧರ ತಿಲಕ, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಖುದಿರಾಮ ಬೋಸ್, ನೀರಾ ಆರ್ಯ ಸಾಕಷ್ಟು ಕೊಡುಗೆ ನೀಡಿದ್ದು ಆದರೆ ಅವರ ಬಗ್ಗೆ ವಿಸ್ತ್ರತ ಮಾಹಿತಿ ಇಲ್ಲವಾಗಿದೆ. ಏಕೆಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಪ್ರಾರಂಭದಿಂದ ಸುಮಾರು ಏಳು ಅವಧಿಯವರೆಗೆ ಮುಸಲ್ಮಾನ ಸಮಾಜಕ್ಕೆ ಸೇರಿದವರೇ ಶಿಕ್ಷಣ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿಯೇ ಘಜನಿ ಮೊಹಮ್ಮದ್, ಬಾಬರ್, ಔರಂಗಜೇಬ, ಅಕ್ಬರ್ ಬಗ್ಗೆ ನಮ್ಮ ಪಠ್ಯಗಳ ಮಕ್ಕಳಿಗೆ ಬೋಧನೆ ಮಾಡಲಾಗಿದೆ. ಸ್ವಾತಂತ್ರ್ಯ ದೊರೆತಾಗ ಗುಪ್ತ ಮತದಾನದ ಮೂಲಕ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿ ನಂತರ ಅವರನ್ನು ದೇಶದ ಪ್ರಧಾನಿಯನ್ನು ಆಯ್ಕೆ ಮಾಡಲು ಚಾಲನೆ ನೀಡಲಾಗಿತ್ತು. ಈ ಚುನಾವಣೆಗೆ ಸರ್ದಾರ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು ಹಾಗೂ ಆಚಾರ್ಯ ಕೃಪಲಾನಿ ಸ್ಪರ್ಧೆ ಮಾಡಿದ್ದರು. ಕಾರ‍್ಯಕಾರಿ ಸಮಿತಿಯಲ್ಲಿನ 18 ಸದಸ್ಯರಿಗೆ ಮತದಾನ ಮಾಡುವ ಹಕ್ಕಿತ್ತು. ಗುಪ್ತ ಮತದಾನ ನಡೆಸಿದಾಗ ಸರ್ದಾರ ವಲ್ಲಭಭಾಯಿ ಪಟೇಲ್‌ರಿಗೆ 15, ನೆಹರುಗೆ 2 ಹಾಗೂ ಕೃಪಲಾನಿಗೆ 1 ಮತ ಲಭಿಸಿತ್ತು. ಆದರೆ ಇದನ್ನು ಅರಿತ ನೆಹರು ಮಹಾತ್ಮ ಗಾಂಧಿ ಬಳಿ ತೆರಳಿ ತಮ್ಮ ಆಯ್ಕೆ ಮಾಡಲು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಅದರಂತೆ ಗಾಂಧಿ ಅವರು ಪಟೇಲ್‌ರನ್ನು ಕರೆದು ಅವರಿಂದ ವಚನ ಪಡೆದು ನೆಹರು ಆಯ್ಕೆ ಘೋಷಿಸುವಂತೆ ಸೂಚಿಸಿದರು. ಇದು ಆ ಕಾಲ ಘಟ್ಟದಲ್ಲಿ ನಡೆದ ವೋಟ್ ಚೋರಿಯಾಗಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವವರೆಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಮೋದಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದರು. ಇತ್ತೀಚಿನ ದಿನಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ಹಾಗೂ ವಿದೇಶಿ ಅನುದಾನದ ಮೂಲಕ ನಡೆಯುವ ಪ್ರತಿಭಟನೆಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿ, ನಾಡಹಬ್ಬದ ಅಂಗವಾಗಿ ಕೇವಲ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದೇವೆ. ಇತಿಹಾಸದಲ್ಲಿ ಬಿಟ್ಟು ಹೋದ ಸಂಗತಿಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ ಎಂದರು.

ಪತ್ರಕರ್ತ ಬಸವರಾಜ ಸರೂರ ಮಾತನಾಡಿ, ಇಲ್ಲಿನ ಕರ್ನಾಟಕ ಸಂಘವು ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸುತ್ತಾ ಬಂದಿದೆ. ಇಲ್ಲಿ ಕಾರ್ಯಕ್ರಮ ನೀಡಿ ಹೋದ ಅನೇಕರು ನಂತರ ಪ್ರಸಿದ್ಧಿ ಪಡೆದಿದ್ದಾರೆ ಎಂದರು.

ಪರ್ತಕರ್ತ ವಿ.ಬಿ. ಕೇಶವಮೂರ್ತಿ ಮಾತನಾಡಿ, ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಕರ್ನಾಟಕ ಸಂಘದ ಜತೆಗಿನ ತಮ್ಮ ಒಡನಾಟದ ಅನುಭವ ಮೆಲಕು ಹಾಕಿದರು. ಕೆ.ಎನ್. ಷಣ್ಮುಖ, ಅಭಿನಂದನ ಜೋಶಿ, ಸತ್ಯನಾರಾಯಣ ಹೊಳೆಬಾಗಿಲ, ಸಂದೀಪ ದೀಕ್ಷಿತ್, ಮಹೇಶ ನಾಡಿಗೇರ, ಲಕ್ಷ್ಮಿ ಅಡಕೆ, ವೀಣಾ ಜೋಶಿ, ಡಾ. ಸಂಜಯ ನಾಯ್ಕ, ಶ್ರೀನಿವಾಸ ಏಕಬೋಟೆ, ಸಂಗೀತಾ ವಿಶ್ವರೂಪ, ಸುಷ್ಮಿತಾ ಮಾರನಾಳ, ಇಂದಿರಾ ಜೋಶಿ, ಲಕ್ಷ್ಮಿ ಏಕಬೋಟೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ