ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಎಸ್.ಎಸ್. ರಂಗಮಂದಿರದಲ್ಲಿ ಜ.27ರಿಂದ 30 ರವರೆಗೆ ನಡೆದ ನಮ್ಮ ನಡೆಗೆ ಸರ್ವೋದಯದೆಡೆಗೆ ಜಾಥಾ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಕೃತಜ್ಞತಾ ಹಾಗೂ ಲೆಕ್ಕಪತ್ರಗಳ ಪರಿಶೀಲನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ, ರಾಜಕೀಯ ಕ್ಷೇತ್ರಗಳು ಯಶಸ್ಸಿಯಾದರೆ ಮಾತ್ರ ಸರ್ವೋದಯ ಜಾಥಾ ಯಶಸ್ವಿ ಕಾರ್ಯಕ್ರಮ ಆಗಲು ಸಾಧ್ಯ. ಯಾವುದೇ ಕಾರ್ಯಕ್ರಮ ಮಾಡಿದರೂ ಉಳಿತಾಯದ ದೃಷ್ಟಿಯನ್ನಿಟ್ಟುಕೊಂಡು ಕಾರ್ಯಕ್ರಮ ಸರಳ ಹಾಗೂ ಅರ್ಥಗರ್ಭಿತವಾಗಿ ನಡೆಯಬೇಕು. ಸರ್ವೋದಯ ಜಾಥಾ ಉದ್ದೇಶ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎನ್ನುವ ಆಶಯ ನಮ್ಮದಾಗಿತ್ತು. ಆದರೆ, ಜಾಥಾದ ದಾರಿಯುದ್ದಕ್ಕೂ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಮೊದಲ ಹೆಜ್ಜೆ ಇಡುವಾಗ ತಪ್ಪುಗಳಾಗುವುದು ಸಹಜ. ತಪ್ಪನ್ನು ತಿದ್ದುಕೊಂಡು ಸಂಘಟನೆ ಮಾಡಬೇಕಾಗಿದೆ ಎಂದರು.ಯಾವುದೇ ಪ್ರಯೋಗಗಳು ಒಂದೇ ಸಾರಿ ಯಶಸ್ಸು ಕಾಣಲು ಅಸಾಧ್ಯ. ಮತ್ತೆ ಮತ್ತೆ ಆಗ್ತಾ ಹೋದಾಗ ಪರಿವರ್ತನೆ ಆಗಲು ಸಾಧ್ಯ. ಎಲ್ಲ ಊರುಗಳಲ್ಲೂ ಗುಟ್ಕಾ ಮುಕ್ತ, ಮದ್ಯಮುಕ್ತ ಊರುಗಳಾಗಬೇಕು. ಪ್ರತಿಯೊಬ್ಬ ರೈತರು ಸಾವಯವ ಕೃಷಿರಾಗಬೇಕು. ಈ ಪಾದಯಾತ್ರೆಯಲ್ಲಿ ಅನೇಕರು ಸಹಕಾರ ಮಾಡಿದ್ದೀರಿ ಅವರಿಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಸಂಘಟನೆ ಮಾಡಿದಾಗ ಮಾತ್ರ ಯಶಸ್ವಿ ಕಾರ್ಯಕ್ರಮ ಆಗಬಲ್ಲದು ಎಂದರು.
ಸೋಮಶೇಖರಪ್ಪ ಮಾತನಾಡಿ ಬದಲಾವಣೆಯ ಬೀಜಗಳು ಅಲ್ಲಲ್ಲೇ ಬಿತ್ತಬೇಕು. ಸಾವಯವ ಹಾಗೂ ಸಹಜ ಕೃಷಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಪ್ರತಿ ಗ್ರಾಮಗಳಲ್ಲೂ ಸರ್ವೋದಯದ ಘಟಕಗಳು ಪ್ರಾರಂಭ ಆಗಬೇಕು ಎಂದರು.
ಸಭೆಯಲ್ಲಿ ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಶಂಕರಲಿಂಗಪ್ಪ, ದೇವರಹಳ್ಳಿ ಬಸವರಾಜಪ್ಪ, ಗುಳ್ಳಿಹಳ್ಳಿ ಮಲ್ಲಿಕಾರ್ಜುನಪ್ಪ ಮಾತನಾಡಿದರು.