ಮಾಗಡಿ: ಮಹಾಭಾರತದ ಕಾಲದಲ್ಲಿಯೇ ಕರ್ನಾಟಕ ಎಂಬ ಹೆಸರಿದ್ದದ್ದು ಕನ್ನಡಿಗರ ಹೆಮ್ಮೆ ಎಂದು ಮಾಗಡಿ ಕೆಎಸ್ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಪ್ರಯಾಣಿಕರು ಏರ್ಪಡಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಅಶೋಕ ಚಕ್ರವರ್ತಿ ಕಾಲದಲ್ಲಿಯೇ ಪಳಯುಳಿಕೆಗಳು ದೊರತಿದೆ. ಮಸ್ಕಿ, ಚಂದ್ರವಳ್ಳಿ ಕರ್ನಾಟಕದ ಶಿಲಾ ಲೇಖನಗಳನ್ನು ಮಾಸ್ತಿ, ದಾ.ರಾ.ಬೇಂದ, ದೇವನಾಪ್ರಿಯ ಅಶೋಕನಿಗೆ ಸಿಕ್ಕಿದೆ. ಜ್ಞಾನದಲ್ಲಿ ಕರ್ನಾಟಕದ ಶಕ್ತಿ ಅಮೋಘವಾದುದು ಎಂದು ಹೇಳಿದರು.9ನೇ ಶತಮಾನದ ಕವಿರಾಜ ಮಾರ್ಗ ಬಂತು ರಾಷ್ಟ್ರಕೂಟ ಕಾಲದ ನೃಪತುಂಗ ಅಮೋಘವರ್ಷ, ಕಾವೇರಿಯಿಂದ ಕನ್ಯಾಕುಮಾರಿ, ಗೋದಾವರಿಗೂ ಕರ್ನಾಟಕ ಬೆಳೆದಿತ್ತು. ಇಮ್ಮಡಿ ಪುಲಿಕೇಶಿ ರಾಜ್ಯವನ್ನು ವಿಸ್ತರಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೋರಾಡಿದರು. ಜಾತಿಬೇಧವಿಲ್ಲ ಎಲ್ಲರೂ ಒಂದೇ ಎಂದು ಪಂಪ, ರನ್ನ, ಕುವೆಂಪು, ದಾ.ರ.ಬೇಂದ್ರೆ, ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿ ಹೇಳಿದ್ದಾರೆ ಎಂದು ಸ್ಮರಿಸಿದರು.
ಟಿಸಿ ವೆಂಕಟೇಶ್ ಮಾತನಾಡಿ, ಸಾಹಿತಿ ದೇ.ಜವರೇಗೌಡ, ಲಿಂಗೈಕ್ಯ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಮಾಗಡಿ ತಾಲೂಕಿನಲ್ಲಿ ಜನಿಸಿರುವ 3 ಕನ್ನಡದ ಅನರ್ಘ್ಯ ರತ್ನಗಳು ಎಂದು ಹೇಳಲು ಹೆಮ್ಮೆ. ಅನ್ನ, ಆಶ್ರಯ, ನೀರು ಕೊಟ್ಟ ಮಹಾಪುರುಷ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿ ವಿಶ್ವವಿಖ್ಯಾತಿ ತಂದುಕೊಟ್ಟವರು. ಆದರೂ ಉತ್ತರ ಕರ್ನಾಟಕದ ಜನ ನೆನಪು ಮಾಡಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.ನಿರ್ವಾಹಕ ಮಾರುತಿ ಮಾತನಾಡಿ, 1956ರಲ್ಲಿ ಕರ್ನಾಟಕ ಏಕೀಕರಣವಾಯಿತು. 1953ರಲ್ಲಿ ಭಾಷಾವಾರು ಪ್ರಾಂತ್ಯ ಆಗಬೇಕೆಂದು ಆಂಧ್ರ ಪ್ರದೇಶದ ಪಟ್ಟಿ ಶ್ರೀರಾಮುಲು 58 ದಿನ ಅಮರಣಾಂತ ಸತ್ಯಾಗ್ರಹ ನಡೆಸಿ ಮಡಿದ ಕಿಚ್ಚು ಹೊತ್ತಿ ಉರಿದ ಕಾರಣ ಕೂಡಲೆ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಭಾಷಾವಾರು ಪ್ರಾಂತ್ಯ ಹಂಚಿಕೆ ಮಾಡಲು ಘೋಷಿಸಿದರು. ಆದರೂ ಕೆಲ ಭಾಗ ನಾಡಿನಿಂದ ಕೈತಪ್ಪಿ ಹೋಗಿದೆ. ಕನ್ನಡಿಗರ ಕನಸು ಈಡೇರಬೇಕಾದರೆ ಬಿಟ್ಟು ಹೋಗಿರುವ ಊರುಗಳು ನಾಡಿಗೆ ಸೇರ್ಪಡೆಯಾಗಬೇಕಿದೆ ಎಂದರು.
ಕೆಎಸ್‌ಆರ್‌ಟಿಸಿ ನಿರ್ವಾಹಕರಾದ ಹುಚ್ಚಪ್ಪ, ಲಗಾಮಪ್ಪ, ಗಿರೀಶ್ ಮುಖಂಡರಾದ ಟಿ.ಆರ್.ವೇದಮೂರ್ತಿ, ರವಿಕುಮಾರ್, ಚರಣ, ಚಂದ್ರಶೇಖರ್, ಜಗದೀಶ್, ಸುಮತಿ, ದಿವ್ಯಾಶ್ರೀ, ಸಾಗರ್, ಚೇತನ್ ಇತರರಿದ್ದರು.