ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದ ಜನರ ಸ್ವಾವಲಂಬಿ ಬದುಕಿಗೆ ಆರ್ಥಿಕ ಅನುಕೂಲಗಳನ್ನು ಕಲ್ಪಿಸಿ ಕೊಡುವಲ್ಲಿ ಸಂಘ ಪ್ರಮುಖ ಪಾತ್ರ ವಹಿಸಿದೆ ಎಂದರು.
ದೇವರಹಿಪ್ಪರಗಿ ಸಂಘ ಕಳೆದ 25 ವರ್ಷದಲ್ಲಿ ಅನೇಕ ಏಳುಬೀಳುಗಳ ಮಧ್ಯೆ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆದಿದೆ. 1904ರಲ್ಲಿ ಆರಂಭವಾದ ಸಹಕಾರ ಚಳವಳಿ ಈವರೆಗೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಬಡವರ, ಸಾಮಾನ್ಯ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ರಾಜಕೀಯ ಬೆಳವಣಿಗೆಗೆ ಪ್ರೇರಣಾ ಶಕ್ತಿಯಾಗಿದೆ. ಎಲ್ಲಾ ಹಿರಿಯ ಸದಸ್ಯರ ಪರಿಶ್ರಮ ಹಾಗೂ ಸಹಕಾರದಿಂದ ಪಟ್ಟಣದಲ್ಲಿ ಸಾಕಷ್ಟು ಪತ್ತಿನ ಸಂಘಗಳಿದ್ದರೂ ಬಡ ಕುಟುಂಬಗಳಿಗೆ, ವ್ಯಾಪಾರ ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಜೊತೆಗೆ ಸಂಘ ಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಹಿರಿಯರು ಪ್ರಾಂಜಲ ಮನಸ್ಸಿನಿಂದ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ವ್ಯಾಪಾರಸ್ಥರಿಗೆ ಸಕಾಲಕ್ಕೆ ಸಾಲ ನೀಡುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿ ಬ್ಯಾಂಕ್ ಏಳಿಗೆಗೆ ಸಹಕರಿಸಬೇಕು. ಸಂಘ ಕಳೆದ 25 ವರ್ಷಗಳಿಂದ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವುದು ಪ್ರಶಂಸನೀಯ. ಸಂಘ ಅಧ್ಯಕ್ಷರು ಯುವ ಮುಖಂಡರಾದ ರಾಜೀವ್ ಗುತ್ತೇದಾರ ಹಾಗೂ ಸದಸ್ಯರ ಸಹಕಾರದಿಂದ ಮುಂದೆ ಶತಮಾನೋತ್ಸವ ಆಚರಿಸಲಿ ಎಂದರು.
ಸಂಘದ ಅಧ್ಯಕ್ಷ ರಾಜೀವ್ ಗುತ್ತೇದಾರ ಮಾತನಾಡಿ, ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘ 2000ರಲ್ಲಿ ಪ್ರಾರಂಭವಾಗಿ 25 ವರ್ಷ ಯಶಸ್ವಿಯಾಗಿ ಪೂರೈಸಿ ₹150 ಕೋಟಿ ರೂ ದುಡಿಯುತ್ತಿದೆ. ಸತತ ಲಾಭಾಂಶದಿಂದ ಗ್ರಾಹಕರ ವಿಶ್ವಾಸದೊಂದಿಗೆ ಮುನ್ನಡೆದಿದೆ. ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಿಸಿದೆ. ಸಾವಿರಾರು ಜನರಿಗೆ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ. ಹಿರಿಯ ಸದಸ್ಯರ ವಿಶ್ವಾಸ, ಸಹಕಾರದಿಂದ ಸಂಘ ಬೆಳೆದು ಬಂದಿದೆ. ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ದುಡಿಯುವ ಮೂಲಕ ಇನ್ನೂ ಹೆಚ್ಚಿನ ಸೇವೆಯನ್ನು ಸಾರ್ವಜನಿಕರಿಗೆ ನೀಡಲಿದ್ದೇವೆ ಎಂದು ಹೇಳಿದರು.ಹೊರ್ತಿ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ಸಹಕಾರ ತತ್ವಗಳ ಪಾಲನೆ ಬಗ್ಗೆ ಮಾತನಾಡಿದರು. ಜಡಿಮಠದ ಜಡೇಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷ ಹಸನಸಾಬ ವಡ್ಡೋಡಗಿ ವೇದಿಕೆ ಮೇಲಿದ್ದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಬೆಳ್ಳಿ ಸಂಭ್ರಮದ ಸವಿ ನೆನಪಿನ ಕಾಣಿಕೆ ವಿತರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಹಿರೇಕುರುಬರ ಸ್ವಾಗತಿಸಿದರು.
ವಿಜಯಪುರ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ವಿವಿಧ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಗುರುಶಾಂತ ನಿಡೋಣಿ, ಶಂಕರ ಕನಸೆ, ಭೀಮರಾಯ ಬಿರಾದಾರ, ರಾಜಶೇಖರ ಒಂಟೆತ್ತಿನ, ಶಾಂತಪ್ಪ ಬಿರಾದಾರ, ಪಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ, ಮುಖಂಡರಾದ ದೇವೇಂದ್ರಪ್ಪ ಗುತ್ತೆದಾರ, ಸೋಮನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಜ್ಞಾನೇಶ್ವರ ಸುಗತೇಕರ, ರಿಯಾಜಅಹ್ಮದ ತಾಂಬೋಳಿ, ಬಸೀರಅಹ್ಮದ ಬೇಪಾರಿ, ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಆರ್.ಆರ್.ನಾಯಕ, ಸಿದ್ದಪ್ಪ ಅಡಕಿ, ಅಶೋಕ ಮಶಾನವರ, ಗುರುಬಾಳ ಯರಗಲ್, ಸಿದ್ದಪ್ಪ ಮಸಬಿನಾಳ, ಸುಧೀರ ಈಳಗೇರ, ಕೇಸು ರಾಠೋಡ, ಮಡಿವಾಳಪ್ಪ ವಾಲಿಕಾರ, ಕಾಶೀಬಾಯಿ ಕಕ್ಕಳಮೇಲಿ, ಕಸ್ತೂರಿಬಾಯಿ ಮೂಲಿಮನಿ ಸೇರಿ ಆಡಳಿತ ಮಂಡಳಿ ಸದಸ್ಯರು, ಪಟ್ಟಣದ ಪ್ರಮುಖರು, ಗಣ್ಯರು, ಸಿಬ್ಬಂದಿ, ಪಿಗ್ಮಿ ಸಂಗ್ರಹಕಾರರು ಹಾಗೂ ಇತರರಿದ್ದರು.