ಪರಿಸರ ಸಂರಕ್ಷಣೆಗೆ ಎಲ್ಲರ ಸಹಭಾಗಿತ್ವ ತುಂಬಾ ಅಗತ್ಯ: ಡಾ.ಕೆ.ಎನ್. ಬಸವರಾಜ

KannadaprabhaNewsNetwork | Published : Jun 12, 2024 12:35 AM

ಸಾರಾಂಶ

ಅರಣ್ಯ ಇಲಾಖೆ ವತಿಯಿಂದ ಈ ವರ್ಷ 3.30 ಲಕ್ಷ ಸಸಿಗಳನ್ನೂ ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಒಂದು ಸಸಿಗೆ 3 ರಿಂದ 6 ರೂಪಾಯಿವರೆಗೆ ಕೊಡಲಾಗುತ್ತಿದೆ. ಇಲಾಖೆ ವತಿಯಿಂದಲೂ 1 ಲಕ್ಷ ಸಸಿಗಳನ್ನೂ ನೆಡಲಾಗುತ್ತಿದೆ. ಇಂದು ಜಾಗತೀಕರಣ ತಾಪಮಾನ ವ್ಯತ್ಯಾಸವಾಗುತ್ತಿದೆ ಹಾಗೂ ತಾಪಮಾನ ಏರುತ್ತಿದೆ. ಪ್ರಕೃತಿ ಮಾಡುವುದನ್ನು ಮನುಷ್ಯ ಯಾವಗಲೂ ಮಾಡಲಾರ.

ಕನ್ನಡಪ್ರಭ ವಾರ್ತೆ ಮೈಸೂರು

ರೋಟರಿ ಕ್ಲಬ್ ಸಂಸ್ಥೆಗಳ ವಲಯ- 8 ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ 1000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ನಗರದ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೋಟರಿ ಇಂಟರ್ ನ್ಯಾಷನಲ್ 3181ರ ಜಿಲ್ಲೆಯ ಜಿಲ್ಲಾ ಗವರ್ನರ್ ವಿಕ್ರಮದತ್ತ ಮಾತನಾಡಿ, ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ. ರೋಟರಿ ಸಂಸ್ಥೆಯೂ ಪರಿಸರದ ಬಗ್ಗೆ ಸದಾ ಕಾಳಜಿ ಹೊಂದಿ ಉತ್ತಮ ಸೇವೆಯನ್ನು ಮಾಡುತ್ತಿದೆ. ಎಲ್ಲರನ್ನೂ ಮತ್ತು ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಈ ಸೇವಾ ಕಾರ್ಯವನ್ನೂ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಎನ್. ಬಸವರಾಜ ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಈ ವರ್ಷ 3.30 ಲಕ್ಷ ಸಸಿಗಳನ್ನೂ ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಒಂದು ಸಸಿಗೆ 3 ರಿಂದ 6 ರೂಪಾಯಿವರೆಗೆ ಕೊಡಲಾಗುತ್ತಿದೆ. ಇಲಾಖೆ ವತಿಯಿಂದಲೂ 1 ಲಕ್ಷ ಸಸಿಗಳನ್ನೂ ನೆಡಲಾಗುತ್ತಿದೆ ಎಂದರು.

ಇಂದು ಜಾಗತೀಕರಣ ತಾಪಮಾನ ವ್ಯತ್ಯಾಸವಾಗುತ್ತಿದೆ ಹಾಗೂ ತಾಪಮಾನ ಏರುತ್ತಿದೆ. ಪ್ರಕೃತಿ ಮಾಡುವುದನ್ನು ಮನುಷ್ಯ ಯಾವಗಲೂ ಮಾಡಲಾರ. 3 ವಾರದ ಹಿಂದೆ ಇದ್ದ ಚಾಮುಂಡಿಬೆಟ್ಟದ ವಾತಾವರಣ ಇಂದು ಮಳೆಯಿಂದಾಗಿ ಸಂಪೂರ್ಣ ಬದಲಾಗಿದೆ. ಕೇವಲ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಟ್ಟರೆ ಪರಿಸರದ ಸಂರಕ್ಷಣೆ ಸಾಧ್ಯವಿಲ್ಲ. ಇದಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು. ಎಲ್ಲರ ಸಹಭಾಗಿತ್ವ ತುಂಬಾ ಅಗತ್ಯ ಎಂದರು.

ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಎಲ್. ರವಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ಸಹಾಯಕ ಗರ್ವನರ್ ಎಂ. ರಾಜೀವ್, ಕೇಶವಪ್ರಕಾಶ್, ವಲಯ ಸೇನಾನಿ ಎಂ. ಮೋಹನ್, ಕೆ.ಎನ್. ಸಂತೋಷ್, ಎನ್. ಕಿರಣ್, ಎಂ.ಎಸ್. ಉಮಾಶಂಕರ್ ಆರಾಧ್ಯ, ಮುರಳೀಧರ್, ಗೋವರ್ಧನ್ ಯಾದವ್, ಪ್ರಭಾಕರ್, ವನ್ಯಜೀವಿ ಛಾಯಾಗ್ರಾಹಕ ದಿನೇಶ್ ಬಸವಪಟ್ಟಣ, ದಿಲೀಪ್ ಆರಾಧ್ಯ ಮೊದಲಾದವರು ಇದ್ದರು.

Share this article