ಸೇವಾಲಾಲ್‌ ಮಹಾಮಠ ಅಭಿವೃದ್ಧಿಗೆ ಎಲ್ಲರ ಶ್ರಮ ಅಗತ್ಯ

KannadaprabhaNewsNetwork |  
Published : Nov 18, 2026, 01:45 AM IST
ಕ್ಯಾಪ್ಷನ16ಕೆಡಿವಿಜಿ36, 37 ನ್ಯಾಮತಿ ತಾ. ಸೂರಗೊಂಡನಕೊಪ್ಪದಲ್ಲಿ ಶಾಸಕ ಪ್ರಭು ಬಿ. ಚವ್ಹಾಣ ನೇತೃತ್ವದಲ್ಲಿ ಸಾಮಾನ್ಯ, ಸರ್ವ ಸದಸ್ಯರ ಸಭೆ ಜರುಗಿತು. | Kannada Prabha

ಸಾರಾಂಶ

ಜಿಲ್ಲೆಯ ನ್ಯಾಮತಿ ತಾಲೂಕಿನ ಭಾಯಾಗಡ್, ಸುರಗೊಂಡನಕೊಪ್ಪದಲ್ಲಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠದಲ್ಲಿ ಭಾನುವಾರ ನೂತನ ಅಧ್ಯಕ್ಷ, ಮಾಜಿ ಸಚಿವ ಹಾಗೂ ಔರಾದ್ (ಬಿ) ಶಾಸಕ ಪ್ರಭು ಬಿ. ಚವ್ಹಾಣ ನೇತೃತ್ವದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ನಡೆಯಿತು.

- ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠದ ಸಾಮಾನ್ಯ ಸಭೆಯಲ್ಲಿ ಪ್ರಭು ಚವ್ಹಾಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ/ ನ್ಯಾಮತಿ

ಜಿಲ್ಲೆಯ ನ್ಯಾಮತಿ ತಾಲೂಕಿನ ಭಾಯಾಗಡ್, ಸುರಗೊಂಡನಕೊಪ್ಪದಲ್ಲಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾಮಠದಲ್ಲಿ ಭಾನುವಾರ ನೂತನ ಅಧ್ಯಕ್ಷ, ಮಾಜಿ ಸಚಿವ ಹಾಗೂ ಔರಾದ್ (ಬಿ) ಶಾಸಕ ಪ್ರಭು ಬಿ. ಚವ್ಹಾಣ ನೇತೃತ್ವದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ನಡೆಯಿತು.

ಸಭೆಯಲ್ಲಿ ಅಧ್ಯಕ್ಷ ಪ್ರಭು ಬಿ. ಚವ್ಹಾಣ ಮಾತನಾಡಿ, ಮಹಾಮಠದ ಅಭಿವೃದ್ಧಿ ಒಬ್ಬರಿಂದ ಅಥವಾ ಒಬ್ಬರ ಪ್ರಯತ್ನದಿಂದ ಮಾತ್ರ ಸಾಧ್ಯವಿಲ್ಲ. ಸಮಿತಿಯ ಪ್ರತಿಯೊಬ್ಬ ಪದಾಧಿಕಾರಿ, ನಿರ್ದೇಶಕ, ಸದಸ್ಯರು ಹಾಗೂ ಸಮಸ್ತ ಬಂಜಾರ ಸಮಾಜದ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಎಲ್ಲರ ಸಲಹೆ, ಸಹಕಾರ ಮತ್ತು ಒಗ್ಗಟ್ಟಿನೊಂದಿಗೆ ಮಠದ ಅಭಿವೃದ್ಧಿಗೆ ಶ್ರಮಿಸಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಠವನ್ನು ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸೋಣ ಎಂದರು.

ಸಂತ ಸೇವಾಲಾಲ್ ಅವರ ತತ್ವಾದರ್ಶಗಳು, ಸೇವಾ ಮನೋಭಾವ ಹಾಗೂ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೆಕಿದೆ. ಅವರ ಜನ್ಮಸ್ಥಾನವನ್ನು ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲ, ಶಿಕ್ಷಣ, ಸಂಸ್ಕೃತಿ, ಸೇವೆ ಮತ್ತು ಸಾಮಾಜಿಕ ಜಾಗೃತಿಯ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಭಕ್ತರಿಗೆ ಅಗತ್ಯವಿರುವ ಮೂಲಸೌಕರ್ಯ, ವಸತಿ, ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಹಾಗೂ ಇತರ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ನಿರ್ದೇಶಕ ಹಿರಾ ನಾಯಕ್, ಎಡಿಸಿ ಎಲ್.ನಾಗರಾಜ್ ನಾಯ್ಕ, ತಾಂಡ ನಿಗಮದ ಎಂ.ಡಿ. ಚಂದ್ರನಾಯ್ಕ, ಭೋಜಾ ನಾಯಕ್, ಬೋಪಾಲ್ ನಾಯಕ್, ಲಕ್ಷ್ಮಣ್ ನಾಯಕ್, ಅನಿಲ್ ಕುಮಾರ್, ಪುಷ್ಪಾಬಾಯಿ, ಅಮರನಾಥ್ ಪಾಂಡು, ಮಂಜಾ ನಾಯಕ್, ಹನುಮಾ ನಾಯಕ್, ಕುಮಾರ್ ನಾಯಕ್, ಅನುಸೂಯಾ ಜಾದವ್, ಕುಮಾರ್ ನಾಯಕ್ ವಕೀಲರು, ಮಲ್ಲಿಕಾರ್ಜುನ್ ನಾಯಕ್, ಮಹದೇವ ನಾಯಕ್, ಜಯಪ್ಪ ಲಮಾಣಿ, ಮೂನಪ್ಪ ನಾಯಕ್, ಬಾಸು ನಾಯಕ್, ಜಯ ನಾಯಕ್, ರವಿಕಾಂತ್ ಅಂಗಡಿ, ಶಾಂತರಾಜು, ಮಂಜುನಾಥ್ ಧನ್ ಸಿಂಗ್ ಪವಾರ್, ಕುಬೇಂದ್ರ ನಾಯಕ್, ಮಹೇಶ್ವರ ನಾಯಕ್, ಕೃಷ್ಣ ಚೌಹಾಣ್, ಡಾ. ಡಿ.ಸೀತಾ ನಾಯಕ್, ನಾಗರಾಜ್ ನಾಯಕ್, ಹೂವಪ್ಪ ರಾಥೋಡ್, ಸಾಕಮ್ಮ ಬಾಯಿ, ಲಕ್ಷ್ಮಣ ನಾಯಕ್, ಶ್ರೀರಾಮ್ ನಾಯಕ್, ಅಶ್ವಿತಾ, ವಿಜಯಲಕ್ಷ್ಮಿ, ಲಕ್ಷ್ಮಿಬಾಯಿ, ಅಂಜುಬಾಯಿ ರಾಥೋಡ್ ಸೇರಿದಂತೆ ಕಾರ್ಯಕಾರಿ ಸಮಿತಿ ಹಾಗೂ ಆಡಳಿತ ಮಂಡಳಿಯ ಎಲ್ಲ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

- - -

-16ಕೆಡಿವಿಜಿ36, 37 ನ್ಯಾಮತಿ ತಾ. ಸೂರಗೊಂಡನಕೊಪ್ಪದಲ್ಲಿ ಶಾಸಕ ಪ್ರಭು ಬಿ. ಚವ್ಹಾಣ ನೇತೃತ್ವದಲ್ಲಿ ಸಾಮಾನ್ಯ, ಸರ್ವ ಸದಸ್ಯರ ಸಭೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಬೃಹತ್‌ ಜಾಥಾ
ಜಿಪಂ-ತಾಪಂ ಚುನಾವಣೆಯತ್ತ ರಾಜಕೀಯ ಪಕ್ಷಗಳ ಚಿತ್ತ