ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಗಾಲಿಕುರ್ಚಿ, ಕಿಟ್ ವಿತರಣೆ
ಪರಿವರ್ತನಾಶೀಲ ಸಮಾಜಕ್ಕೆ ಸುಸಂಸ್ಕೃತ ಮನೋಭಾವನೆ ಮುಖ್ಯ. ಮಾನವೀಯತೆ, ನೈತಿಕ ಮೌಲ್ಯಗಳು ಇರಬೇಕು. ಆದ್ದರಿಂದ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಮಠದ ಅಧಿಕಾರಿ ದಕ್ಷಿಣಾಮೂರ್ತಿ ತಿಳಿಸಿದರು.
ಪಟ್ಟಣದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಬೆನ್ನುಹುರಿ ಅಪಘಾತ ಕ್ಕೊಳಗಾದವರಿಗೆ ಉಚಿತ ಗಾಲಿಕುರ್ಚಿ, ಕಿಟ್, ನೀರಿನ ಹಾಸಿಗೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯತೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರಬೇಕಾದ ಉತೃಷ್ಟವಾದ ಮೌಲ್ಯ. ಇದು ವ್ಯಕ್ತಿಯ ಉನ್ನತಿ ಜೊತೆಗೆ ಸಮಾಜದ ಉನ್ನತೀಕರಣಕ್ಕೂ ಸಹಕಾರಿಯಾಗುತ್ತದೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾದ್ಯವಾಗುತ್ತದೆ. ಆದ್ದರಿಂದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಬೆನ್ನುಹುರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸವಲತ್ತು ನೀಡುವ ಮೂಲಕ ಸೇವಾಭಾರತಿ, ಸೇವಾ ಧಾಮ ಸೇವೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಅತಿಥಿ ವಿಜಯ್, ವಿನಾಯಕ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
24 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಶ್ರೀ ಅಭಿನವ ವಿದ್ಯಾ ತೀರ್ಥ ಆಸ್ಪತ್ರೆಯಲ್ಲಿ ಬೆನ್ನುಹುರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉಚಿತ ಗಾಲಿ ಕುರ್ಚಿ, ಕಿಟ್, ನೀರಿನ ಹಾಸಿಗೆ ವಿತರಿಸಲಾಯಿತು.