ಸಂವಿಧಾನದ ಆಶಯದಂತೆ ಎಲ್ಲರಿಗೂ ಸವಲತ್ತು ಒದಗಿಸಬೇಕು: ಪೂರ್ಣಿಮಾ

KannadaprabhaNewsNetwork |  
Published : Jan 28, 2026, 02:15 AM IST
26ಕೆಕೆಡಿಯು1.ಎ. | Kannada Prabha

ಸಾರಾಂಶ

ಕಡೂರುಸಂವಿಧಾನದ ಆಶಯದಂತೆ ಶಿಕ್ಷಣ ಕ್ಷೇತ್ರದಲ್ಲಿ, ಗುಣಮಟ್ಟ, ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು,ರೈತರ ಕಲ್ಯಾಣಕ್ಕಾಗಿ ಬೆ‍ಳೆ ವಿಮೆ, ಮಾರುಕಟ್ಟೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆ ಆಗಬೇಕಿದೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಸಂವಿಧಾನದ ಆಶಯದಂತೆ ಶಿಕ್ಷಣ ಕ್ಷೇತ್ರದಲ್ಲಿ, ಗುಣಮಟ್ಟ, ಪ್ರಾಥಮಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು,ರೈತರ ಕಲ್ಯಾಣಕ್ಕಾಗಿ ಬೆ‍ಳೆ ವಿಮೆ, ಮಾರುಕಟ್ಟೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆ ಆಗಬೇಕಿದೆ ಎಂದು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹೇಳಿದರು.

ಸೋಮವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಭ ಭಾರತದ ಸಂವಿಧಾನ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಭೃಾತೃತ್ವದ ಅಂಶಗಳಿಂದ ಸಂವಿಧಾನ ನಿರ್ಮಾಣವಾಗಿದೆ. ಸಂವಿಧಾನದ ಮೂಲಕ ಅಧಿಕಾರ ಪಡೆವ ನಾವು ಜೊತೆಯಲ್ಲಿ ಅಭಿವೃದ್ಧಿಯತ್ತ ಗಮನ ಹರಿಸುವುದು ನಮ್ಮೆಲ್ಲರ ಕರ್ತವ್ಯ. ಡಾ.ಬಿ.ಆರ್. ಅಂಬೇಡ್ಕರ್ ಪರಿಶ್ರಮದಿಂದ 1950ರ ಜ. 26 ರಂದು ಸಂಪೂರ್ಣ ಸಾರ್ವಭೌಮತ್ವದ ಸಂವಿಧಾನ ಜಾರಿಗೆ ಬಂದಿದೆ.

ಮೌಲ್ಯಗಳ ಗಟ್ಟಿ ಅಡಿಪಾಯದ ಮೇಲೆ ಸಶಕ್ತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರ ಹೊಮ್ಮಿದೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ವಿಶೇಷತೆ ಜನರು ಹಕ್ಕಿನ ಪ್ರತಿಪಾದನೆ ಜೊತೆಗೆ ಕರ್ತವ್ಯ ನಿರ್ವಹಣೆಗೂ ಮುಂದಾದಾಗ ದೇಶ ಮುನ್ನಡೆ ಸಾಧಿಸಬಲ್ಲದು. ಪ್ರತಿಯೊಬ್ಬ ನಾಗರಿಕನ ಬದುಕೂ ಬದಲಾವಣೆಗೆ ಒಳಗೊಂಡಾಗ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ. ಧರ್ಮ ನಿರಪೇಕ್ಷ ಸಮಾಜ ಕಟ್ಟುವಲ್ಲಿ ನೆರವಾದ ಸಂವಿಧಾನವನ್ನು ಸ್ಮರಿಸುವ ದಿನವಾದ ಇಂದು ನಾವೆಲ್ಲರೂ ಅದರ ಆಶಯಕ್ಕೆ ತಕ್ಕಂತೆ ಬಾಳೋಣ ಎಂದರು. ಗಣರಾಜ್ಯೋತ್ಸವ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದೊಡ್ಡ ಸವಾಲುಗಳನ್ನು ಎದುರಿಸಿ ಭಾರತ ಲಿಖಿತ ಸಂವಿಧಾನ ಪಡೆದಿದೆ. ಜಾತಿ, ಧರ್ಮ, ಜೀವನ ಪದ್ಧತಿ, ಪ್ರಾದೇಶಿಕ ಅಸಮತೋಲನದಿಂದ ಕೂಡಿದ್ದ ದೇಶವನ್ನು ಒಗ್ಗೂಡಿಸುವುದನ್ನು ಅತ್ಯಂತ ಜವಾಬ್ದಾರಿಯುತ ಕೆಲಸವಾಗಿತ್ತು. ಎಲ್ಲ ವರ್ಗಗಳ, ರಾಜ್ಯಗಳ ಹಿತ ಬಯಸುವ, ಸಮಾನತೆ, ನ್ಯಾಯ ಎಲ್ಲರಿಗೂ ದೊರೆಯಬೇಕೆಂಬ ಆಶಯದಿಂದ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನ ನಾಡಿಗೆ ವಿಜ್ಞಾನ, ತಂತ್ರಜ್ಞಾನ, ಆಹಾರ, ಸಂಶೋಧನೆ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಲು ನೆರ ವಾಗಿದೆ. ದೇಶ ಸಶಕ್ತವಾಗಲು ದುಡಿದ ಎಲ್ಲ ಮಹನೀಯರು ಅಭಿನಂದನೆಗೆ ಮತ್ತು ಸ್ಮರಣೆಗೆ ಅರ್ಹರಾಗಿದ್ದು, ಎಲ್ಲರೂ ಸಂವಿ ಧಾನವನ್ನು ರಕ್ಷಿಸುವ, ಗೌರವಿಸುವ ಮೂಲಕ ದೇಶಾಭಿಮಾನ ಮೆರೆಯೋಣ ಎಂದು ಹೇಳಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಮಾತನಾಡಿ, ಜನರ ಪಾಲ್ಗೊಳ್ಳುವಿಕೆ ಮೇಲೆ ಸಂವಿಧಾನದ ಯಶಸ್ಸು ನಿರ್ಧಾರವಾಗುತ್ತದೆ. ಪರಿಸರ, ಸಾಮಾಜಿಕ ಆಸ್ತಿ ರಕ್ಷಣೆ ಮೂಲಕ ನಮ್ಮ ಕರ್ತವ್ಯ ಪಾಲಿಸೋಣ ಎಂದರು. ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿದರು. ಪೊಲೀಸ್ ಸಿಬ್ಬಂದಿ ಬದಲಾದ ಟೋಪಿ, ನಿವೃತ್ತ ಸೈನಿಕರು, ನಿವೇದಿತಾ ವಾಕ್-ಶ್ರವಣ ದೋಷದ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದು ಜನರ ಗಮನ ಸೆಳೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧಕರು. ಕಳೆದ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಡೂರು-ಬೀರೂರು ಶೈಕ್ಷಣಿಕ ವಲಯಗಳ ತಲಾ 3 ಮಕ್ಕಳಿಗೆ ಪುರಸ್ಕಲಾಯಿತು. ಪ್ರಭಂಧ ಸ್ಪರ್ಧೆಯಲ್ಲಿ ವಿಜೇತರು, ಪಥ ಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಕಡೂರು ಬಿಇಒ ಎಂ.ಎಚ್.ತಿಮ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಕೆ.ಎಸ್, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ ದತ್ತಾತ್ರಿ, ಲೋಕೋಪಯೋಗಿ ಎಇಇ ಬಸವರಾಜ ನಾಯ್ಕ, ಸಿಪಿಐ ಎಂ.ರಫೀಕ್, ಪುರಸಭೆ ಮಾಜಿ ಅಧ್ಯಕ್ಷ ಎನ್.ಬಷೀರ್ ಸಾಬ್, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿದ್ದರು. 26ಕೆಕೆಡಿಯು1.

ಕಡೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ 77ನೇ ಗಣರಾಜ್ಯದಿನದಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೆ.ಎಸ್.ಆನಂದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ