- 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ
--- ಸಮ್ಮೇಳನದ ಲಾಂಛನದಲ್ಲಿ ಮೈಸೂರು ಮಹಾರಾಜರ ಭಾವಚಿತ್ರ
-ಶೃಂಗೇರಿ, ಬಾಳೆಹೊನ್ನೂರು, ದೇವನೂರು, ಅಮೃತಾಪುರ ಸೇರಿ ಕಾಫಿನಾಡಿನ ವೈಭವ ಜಿಲ್ಲೆಯ ಕಲೆ, ಸಾಹಿತ್ಯ ಜಾನಪದ ಮೇಳೈಸಿದೆ- ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ
- ಲಾಛನ ಕನ್ನಡದ ಶಕ್ತಿ ಸ್ವರೂಪಕನ್ನಡಪ್ರಭ ವಾರ್ತೆ ತರೀಕೆರೆ
ಪಟ್ಟಣದಲ್ಲಿ ನಡೆಯಲಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರೂ ಸಹಕರಿಸಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಮಂಗಳವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುರಸಭೆ ಮುಂಭಾಗದಲ್ಲಿ ನಡೆದ 20ನೇ ಚಿಕ್ಕ ಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದ ಬಿಡುಗಡೆ ನೆರವೇರಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಕಲೆ ಜಾನಪದ ಮುಂತಾದ ಎಲ್ಲ ಸಮಗ್ರ ಚಿತ್ರಣವಿದ್ದು ಸಮ್ಮೇಳನದ ಲಾಂಛನ ಚೆನ್ನಾಗಿ ಮೂಡಿಬಂದಿದೆ, ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಮೈಸೂರು ಮಹಾರಾಜರ ಭಾವಚಿತ್ರ ಒಳಗೊಂಡಂತೆ ಶೃಂಗೇರಿ, ಬಾಳೆಹೊನ್ನೂರು, ದೇವನೂರು, ಅಮೃತಾಪುರ, ಕಾಫಿನಾಡಿನ ವೈಭವವನ್ನು ಜಿಲ್ಲೆಯ ಕಲೆ, ಸಾಹಿತ್ಯ ಜಾನಪದ ಕಲೆ ಮುಂತಾದವನ್ನು ಪ್ರತಿನಿಧಿಸುವ ಹಾಗೆ ಲಾಂಛನ ಸಿದ್ದಪಡಿಸಲಾಗಿದೆ. ಲಾಛನ ಕನ್ನಡದ ಶಕ್ತಿ ಸ್ವರೂಪವಾದರೆ, ಸಮ್ಮೇಳನ ಕನ್ನಡದ ಹಬ್ಬವಾಗಿದೆ. ಭದ್ರಾ ನದಿ, ಕೃಷಿ, ವನಿತಾ ವಿಚಾರ ಇತ್ಯಾದಿ ವಿವಿಧ ಗೋಷ್ಠಿಗಳನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಹೇಳಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ತಾಲೂಕು ಕನ್ನಡ ಸಾಹಿತ್ಯ ಅಧ್ಯಕ್ಷರು ರವಿದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಸೈಯದ್ ಮುಹಿಬುಲ್ಲಾ, ಲೇಖಕ ತ.ಮ.ದೇವಾನಂದ್, ಟಿ.ಎನ್.ಜಗದೀಶ್, ಕೆ.ಎಸ್ .ಶಿವಣ್ಣ,ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಕುಮಾರ್, ಉಪನ್ಯಾಸಕ ದಾದಾಪೀರ್, ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.
25ಕೆಟಿಆರ್.ಕೆ.1ಃತರೀಕೆರೆಯಲ್ಲಿ ಜಿಲ್ಲಾ, ತಾಲೂಕು ಕಸಾಪದಿಂದ ನಡೆದ ಕಾರ್ಯಕ್ರಮದಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಬಿಡುಗಡೆ ಮಾಡಿದರು. ಪುರಸಭೆ ಅಧ್ಯಕ್ಷ ವಸಂತ ಕುಮಾರ್,ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್. ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ ಮತ್ತಿತರರು ಇದ್ದರು.