ಪ್ರತಿಯೊಬ್ಬರೂ ಅಂಬೇಡ್ಕರರನ್ನು ಅನುಸರಿಸಿ: ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌

KannadaprabhaNewsNetwork |  
Published : Apr 24, 2025, 11:50 PM IST
43 | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಲೇಖಕ ಸಿದ್ದಸ್ವಾಮಿ ಹಾಗೂ ಮಾಜಿ ಮೇಯರ್‌ ಪುರುಷೋತ್ತಮ್‌ ಭಾಗವಹಿಸಿದ್ದರು. ಪ್ರೊ.ಕೆ,ಎಸ್‌. ಭಗವಾನ್‌ ಅವರು ಆದಿ ಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷ ಶಿವಸ್ವಾಮಿ ಅವರನ್ನು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಅಂಗವಾಗಿ ಸತತ ಏಳು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಅಶೋಕಪುರಂನ ಅಂಬೇಡ್ಕರ್‌ ಉದ್ಯಾನವನದಲ್ಲಿ ನಡೆಯಿತು.ಆದಿ ಕರ್ನಾಟಕ ಮಹಾಸಂಸ್ಥೆ ಮತ್ತು ಅಶೋಕಪುರಂ ಅಭಿಮಾನಿಗಳ ಬಳಗವು ಹಮ್ಮಿಕೊಂಡಿದ್ದ ''''''''''''''''ಪ್ರತಿಭೆ ನಿಮ್ಮದು ವೇದಿಕೆ ನಮ್ಮದು'''''''''''''''' ಕಾರ್ಯಕ್ರಮದಲ್ಲಿ ಮಕ್ಕಳು ಚಿತ್ರ ಬರೆಯುವ ಸ್ಪರ್ಧೆ, ಲಘು ಭಾಷಣ, ಕಿರುನಾಟಕ, ಕರಾಟೆ, ಡ್ಯಾನ್ಸ್‌. ಹಾಡುಗಾರಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸುಮಾರು 60ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳನ್ನು ಗೌರವಿಸಲಾಯಿತು.ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಲಕ್ಷಿತಾ (567) ಸಿ.ಎಂ. ವಿಜಯಕುಮಾರ (522), ಯು. ಸಂಜನಾ (520), ಜೆ.ಎಚ್‌. ಪೂರ್ವಾ (503), ವಿ. ಹರ್ಷಿಣಿ (516) ಈ ಮಕ್ಕಳನ್ನು ಸಾಲುಹೊದಿಸಿ, ಹುವಿನ ಹಾರ ಹಾಕಿ, ಫಲಕ, ಪುಸ್ತಕ ಮತ್ತು ಪ್ರಶಸ್ತಿ ಪತ್ರ ನೀಡಿ ಮೆಯರ್‌ಪುರುಷೋತ್ತಮ್‌ ಹಾಗೂ ಲೇಖಕ ಸಿದ್ದಸ್ವಾಮಿ ಅವರು ಗೌರವಿಸಿದರು. ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌ ಮಾತನಾಡಿ, ಅಂಬೇಡ್ಕರ್‌ ಅವರನ್ನು ಎಲ್ಲರೂ ಅನುಸರಿಸಬೇಕು. ಹಿಂದೂ ಸಮಾಜವು ದಲಿತರು ಮತ್ತು ಶೂದ್ರರ ಮೇಲೆ ಹೇರಿರುವ ಅಸ್ಪೃಶ್ಯತೆ ತೊಡೆದು ಹಾಕಲು ಕಾನೂನನ್ನು ಮಾಡಿದರು. ಸರ್ವರಿಗೂ ಸಮಾನ ಅವಕಾಶಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಅವರ ತ್ಯಾಗ ಬಲಿಧಾನಗಳಿಂದಲೇ ನಾವು ಸ್ವತಂತ್ರ್ಯ ಪಡೆದು ನಿರ್ಭಿತಿಯಿಂದ ಕಾರ್ಯಕ್ರಮ ರೂಪಿಸಲು ಸಾಧ್ಯವಾಯಿತು ಎಂದರು.ಮನುಸ್ಮೃತಿ ಇದ್ದ ಕಾಲದಲ್ಲಿ ಇವೇಲ್ಲಾ ಸಾಧ್ಯವಾಗುತ್ತಿರಲಿಲ್ಲ. ಶೂದ್ರರನ್ನು ಅಸ್ಪೃಶ್ಯರನ್ನು ಸಾರ್ವಜನಿಕವಾಗಿ ತಿರುಗಾಡಲು ಬಿಡುತ್ತಿರಲಿಲ್ಲ. ಸಾರ್ವಜನಿಕ ಕರೆಕಟ್ಟೆ ಮತ್ತು ಬಾವಿವಿಗಳಲ್ಲಿ ನೀರು ಪಡೆಯಲು ಮತ್ತು ಕುಡಿಯಲು ಬಿಡುತ್ತಿರಲಿಲ್ಲ. ಶತಶತಮಾನಗಳಿಂದ ನಡೆದುಕೊಂಡು ಬಂದ ಈ ಅನಿಷ್ಟ ಪದ್ಧತಿ ಈಗಲೂ ಇದೆಯಲ್ಲಾ ಎಂದು ಅವರು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಲೇಖಕ ಸಿದ್ದಸ್ವಾಮಿ ಹಾಗೂ ಮಾಜಿ ಮೇಯರ್‌ ಪುರುಷೋತ್ತಮ್‌ ಭಾಗವಹಿಸಿದ್ದರು. ಪ್ರೊ.ಕೆ,ಎಸ್‌. ಭಗವಾನ್‌ ಅವರು ಆದಿ ಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಸಿದ್ದರಾಜು ಮತ್ತು ಉಪಾಧ್ಯಕ್ಷ ಶಿವಸ್ವಾಮಿ ಅವರನ್ನು ಸನ್ಮಾನಿಸಿದರು.ಅವರೊಂದಿಗೆ ದೊಡ್ಡಗರಡಿ ಸಂಘದ ಅಧ್ಯಕ್ಷ ಜೋಗಿ ಮಹೇಶ್‌, ಉಪಾಧ್ಯಕ್ಷ ರುದ್ರಣ್ಣ, ಚಿಕ್ಕಗರಡಿ ಸಂಘದ ಅಧ್ಯಕ್ಷ ನಾಗರಾಜು ಬಿಲ್ಲಯ್ಯ ಅವರನ್ನು ಸನ್ಮಾನಿಸಲಾಯಿತು. ಅಜಯ್‌, ಚಂದ್ರು, ಉಮೇಶ್‌, ಶಮಾ, ಚಂದ್ರಶೇಖರ್‌, ಬಬಿತಾ ಭಾಗವಹಿಸಿದ್ದರು.ನವಯಾನ ಚಾರಿಟಬಲ್‌ ಟ್ರಸ್ಟ್‌ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರೀಶ್‌ ಮಾಚಳ್ಳಿ ನಡೆಸಿಕೊಟ್ಟ ಮನುಸ್ಮೃತಿ ವರ್ಸಸ್‌ ಸಂವಿಧಾನ ಎಂಬ ನಾಟಕವು ಮತ್ತು ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು. ಈ ಎರಡು ಕಾರ್ಯಕ್ರಮ ನೋಡಲು ಪೋಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ