ಕೃಷ್ಣನ ತತ್ವಾದರ್ಶ ಪ್ರತಿಯೊಬ್ಬರು ಪಾಲಿಸಿ

KannadaprabhaNewsNetwork |  
Published : Aug 27, 2024, 01:38 AM IST
ಫೋಟೋ 26ಪಿವಿಡಿ1ಪಾವಗಡ,ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಯಂತ್ಯೊತ್ಸವದಲ್ಲಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ತಹಸಲ್ದಾರ್‌ ವರದರಾಜ್‌ ಹಾಗೂ ಮುಖಂಡ ಮೈಲಾರರೆಡ್ಡಿ ಮಾತನಾಡಿದರು.ಫೋಟೋ 26ಪಿವಿಡಿ2ಶ್ರೀ ಕೃಷ್ಣ ಜಯಂತಿ ಅಂಗವಾಗಿ ಗೊಲ್ಲ ಸಮುದಾಯದಿಂದ ಅರುತಿ ಮತ್ತು ಕುಂಭ ಜ್ಯೋತಿಗಳೊಂದಿಗೆ ಶ್ರೀ ಕೃಷ್ಣನ ಭಾವಚಿತ್ರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಅಧರ್ಮ ಅನ್ಯಾಯ ಹೆಚ್ಚಾಗುವ ವೇಳೆ ಶಿಕ್ಷಿಸುವ ಮೂಲಕ ಸತ್ಯದ ಮಾರ್ಗಕ್ಕೆ ಕೊಂಡ್ಯೊಯುವಲ್ಲಿ ಶ್ರೀ ಕೃಷ್ಣ ಪಾತ್ರ ಪ್ರಮುಖವಾಗಿದೆ ಎಂದು ತಾಪಂ ಮಾಜಿ ಸದಸ್ಯ ಎಂ.ಮೈಲಾರರೆಡ್ಡಿ ಹೇಳಿದರು.

ಪಾವಗಡ: ಅಧರ್ಮ ಅನ್ಯಾಯ ಹೆಚ್ಚಾಗುವ ವೇಳೆ ಶಿಕ್ಷಿಸುವ ಮೂಲಕ ಸತ್ಯದ ಮಾರ್ಗಕ್ಕೆ ಕೊಂಡ್ಯೊಯುವಲ್ಲಿ ಶ್ರೀ ಕೃಷ್ಣ ಪಾತ್ರ ಪ್ರಮುಖವಾಗಿದೆ ಎಂದು ತಾಪಂ ಮಾಜಿ ಸದಸ್ಯ ಎಂ.ಮೈಲಾರರೆಡ್ಡಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಯಾದವ ಸಮಾಜದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿ ಮಾತನಾಡಿದರು.

ಶ್ರೀ ಕೃಷ್ಣ ಒಬ್ಬ ದೈವ ಸಂಭೂತ. ಅಧರ್ಮ ಹಾಗೂ ಅನ್ಯಾಯ ಹೆಚ್ಚಾದ ಕಾಲಘಟ್ಟದಲ್ಲಿ ಶ್ರೀ ಕೃಷ್ಣ ಅವತಾರ ಪುರುಷರಾಗಿ ಜನ್ಮ ತಾಳಿ ನ್ಯಾಯದ ಕಡೆ ಕೊಂಡ್ಯೊದ ಉಲ್ಲೇಗಳಿವೆ. ಅವರು ಒಂದು ಜಾತಿಗೆ ಸೀಮಿತರಲ್ಲ. ಎಲ್ಲಾ ಜಾತಿ ಜನಾಂಗ ಆರಾಧಿಸುವ ದೇವರು, ಭಗವದ್ಗೀತೆಯ ಕೃಷ್ಣನ ಸಂದೇಶಗಳು ಅರ್ಥಗರ್ಬಿತವಾಗಿದ್ದು, ಯಾದವ ಸಮಾಜದಲ್ಲಿ ಜನಿಸಿದ್ದ ನಮ್ಮ ಪುಣ್ಯ. ಕೃಷ್ಣ ಅದರ್ಶ ತತ್ವ ಸಿದ್ದಾಂತ ಪಾಲಿಸುವ ಮೂಲಕ ಮುನ್ನಡೆಯಬೇಕಿದೆ ಎಂದು ಹಲವು ಶ್ರೀ ಕೃಷ್ಣನ ಸಂದೇಶಗಳನ್ನು ವಿವರಿಸಿದರು.

ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಮಾತನಾಡಿ, ಶ್ರೀ ಕೃಷ್ಣನ ತನ್ನ ಆನೇಕ ಸಂದೇಶಗಳು ಸತ್ಯದ ಪರವಿದ್ದು ಮಹಾಭಾರತದಲ್ಲಿ ಕೌರವ ಹಾಗೂ ಪಾಂಡವರ ಯುದ್ದದಲ್ಲಿ ಪ್ರಮುಖ ಪಾತ್ರವಹಿಸಿ ಸತ್ಯ ಹಾಗೂ ನ್ಯಾಯಕ್ಕೆ ಜಯ ತಂದುಕೊಟ್ಟಿದ್ದಾರೆ. ಅವರ ಜಯಂತಿ ಆಚರಿಸುತ್ತಿದ್ದು ಶ್ರೀ ಕೃಷ್ಣ ಯಾದವ ಸಮಾಜದಲ್ಲಿ ಜನಿಸಿದ್ದು ಹೆಮ್ಮೆ ತರುವ ವಿಚಾರ ಎಂದರು.

ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷರಾದ ಅಂಜನ್‌ಕುಮಾರ್‌ ಬುಜ್ಜಪ್ಪ,ಸಮಾಜದ ಹಿರಿಯ ಮುಖಂಡರಾದ ದಳವಾಯಿಹಳ್ಳಿ ಹನುಮಂತರೆಡ್ಡಿ ,ಎಚ್‌.ಜೋಗಪ್ಪ,ಕಾರನಾಗಪ್ಪ, ಅನಿಲ್ ಕುಮಾರ್ ಯಾದವ್ ರಾಮಣ್ಣ,ವೆಂಕಟರಮಣಸ್ವಾಮಿ, ತೇಜಯಾದವ್‌, ಮೋಹನ್ ರಘುವೀರರೆಡ್ಡಿ, ರವಿ ಶಿವಕುಮಾರ್ ಕಂದಾಯ ಇಲಾಖೆಯ ರಾಜ್‌ಗೋಪಾಲ್‌, ಮಹಿಳಾಘಟಕದ ಸಂಜೀವಮ್ಮ ಹಾಗೂ ರೊಪ್ಪ ಗ್ರಾಮದ ಆನೇಕ ಮಂದಿ ಗೊಲ್ಲ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''