ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್ ಏರ್ಪಡಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿ ದೇಶ, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆ, ಸಮಾನತೆ ಪಾಠ ಕಲಿಸಿದರೆ ವಿಶ್ವಮಾನ್ಯರಾಗಿ ಇಡೀ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕು ನಡೆಸಬಹುದು ಎಂದರು.
ಸಮಾಜ ಸೇವಕಿ ಕವಿತಾ ಮಾತನಾಡಿ, ಕನ್ನಡ ಕಲಾ ಸಂಘ ಗ್ರಾಮದಲ್ಲಿ ಹಲವು ಜನಜಾಗೃತಿ ಸಮಾಜಮುಖಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮಾದರಿ ಸಂಘವಾಗಿ ಕನ್ನಡ ಕಟ್ಟುವ, ಉಳಿಸಿ, ಬಳಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅರ್ಪಣಾ ಮನೋಭಾವ ಮೂಡಿಸಿಕೊಂಡಿದೆ ಎಂದು ನುಡಿದರು.ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಮಾತನಾಡಿ, ಪ್ರಜಾಪ್ರಭುತ್ವ ಜನರಿಗಾಗಿ ಇದ್ದು, ಇದರ ಸಾರವನ್ನು ಅಂಬೇಡ್ಕರ್ ಆಶಯದಂತೆ ತಿಳಿದು ಬದುಕಬೇಕಿದೆ. ಒಕ್ಕೂಟ ವ್ಯವಸ್ಥೆಯ ಗಣತಂತ್ರ ನಾಡಿನಲ್ಲಿ ಪ್ರಜೆಗಳೇ ಸಾರ್ವಭೌಮ. ಆರ್ಥಿಕ, ಶೈಕ್ಷಣಿಕೆ, ಉದ್ಯೋಗದಲ್ಲಿ ಸಮಾನತೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗಲಿದೆ. ಎಲ್ಲರಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ. ಹುಟ್ಟು ಸಾವಿನ ನಡುವೆ ಸಮಾನತೆಯಿಂದ ಬದುಕಲು ಮಕ್ಕಳಲ್ಲಿ ಬೇಧ ಭಾವದತಾರತಮ್ಯ ಮೊದಲುದೂರ ಸರಿಸಬೇಕಿದೆ ಎಂದರು.
ಮಕ್ಕಳು ಪ್ರಜಾಪ್ರಭುತ್ವದ ಮಹತ್ವ, ಮತದಾನ ಹಕ್ಕನ್ನು ಹಿರಿಯರು ಸದ್ಭಳಕೆ ಮಾಡಲು ಜಾಗೃತಿ ಮೂಡಿಸುವುದಾಗಿ ಪ್ರತಿಜ್ಞೆ ಮಾಡಿದರು.