ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು: ಡಾ.ಶುಕ್ಲಾ ಶೆಟ್ಟಿ ಸಲಹೆ

KannadaprabhaNewsNetwork |  
Published : Sep 20, 2025, 01:01 AM IST
ಕ್ಯಾಪ್ಷನ16ಕೆಡಿವಿಜಿ37 ದಾವಣಗೆರೆಯ ಧರಾಮ ವಿಜ್ಞಾನ ಕಾಲೇಜಿನ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಡಾ.ಶುಕ್ಲಾ ಶೆಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯೆ ಎಂಬುವುದು ಸೋಮಾರಿಗಳ ಸೊತ್ತಲ್ಲ. ಶಿಕ್ಷಣ ಎಂಬ ಮೂರಕ್ಷರ ಇಲ್ಲದೇಹೋದರೆ ಅಂತಹವರ ಬಾಳು ಅಂಧಕಾರದಲ್ಲಿ ಮುಳುಗಿಹೋಗಲಿದೆ. ಹಾಗಾಗಿ, ಪ್ರತಿಯೊಬ್ಬರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಶುಕ್ಲಾ ಶೆಟ್ಟಿ ಹೇಳಿದ್ದಾರೆ.

- ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹೊಂಗಿರಣ-2025 ಉದ್ಘಾಟನೆ

- - -

ದಾವಣಗೆರೆ: ವಿದ್ಯೆ ಎಂಬುವುದು ಸೋಮಾರಿಗಳ ಸೊತ್ತಲ್ಲ. ಶಿಕ್ಷಣ ಎಂಬ ಮೂರಕ್ಷರ ಇಲ್ಲದೇಹೋದರೆ ಅಂತಹವರ ಬಾಳು ಅಂಧಕಾರದಲ್ಲಿ ಮುಳುಗಿಹೋಗಲಿದೆ. ಹಾಗಾಗಿ, ಪ್ರತಿಯೊಬ್ಬರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಶುಕ್ಲಾ ಶೆಟ್ಟಿ ಹೇಳಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಇತ್ತೀಚೆಗೆ ಧರಾಮ ವಿಜ್ಞಾನ ಕಾಲೇಜಿನ 2025-26ನೇ ಸಾಲಿನ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹೊಂಗಿರಣ-2025 ಉದ್ಘಾಟಿಸಿ ಅವರು ಮಾತನಾಡಿದರು. ತಾವು ಓದಿದ ಕಾಲೇಜಿಗೆ ಹಾಗೂ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಹೆಮ್ಮೆ ತರುವಂಥ ಸಾಧನೆಗೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಆರಂಭದಿಂದಲೇ ಪರಿಶ್ರಮ ಪಟ್ಟು ಓದಿದರೆ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.

ಡಿಆರ್‌ಎಂ ಐಕ್ಯೂಎಸಿ ಬುಲೆಟಿನ್-2024-25 ಅನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಿಎಚ್‌.ಡಿ ಪದವಿ ಪಡೆದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಡಾ.ಮಂಜುನಾಥ ಬಸಪ್ಪ, ಯುವ ವಿಜ್ಞಾನಿ ಪುರಸ್ಕೃತ ಡಾ.ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯೆ ಎಂ.ಪಿ.ರೂಪಶ್ರೀ, ಐಕ್ಯೂಎಸಿ ಸಂಚಾಲಕ ಡಾ. ಟಿ.ಮಂಜುನಾಥ, ಶಿವಪ್ಪ ಮಳ್ಳೂರು, ಡಾ.ವಸಂತ ನಾಯಕ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- - -

-16ಕೆಡಿವಿಜಿ37:

ದಾವಣಗೆರೆಯ ಧರಾಮ ವಿಜ್ಞಾನ ಕಾಲೇಜಿನ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಡಾ.ಶುಕ್ಲಾ ಶೆಟ್ಟಿ ಉದ್ಘಾಟಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ