ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ಬುಧವಾರ ತಾಲೂಕಾಡಳಿತ ಹಾಗೂ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಅನೇಕ ಧೀರ ಮಹಿಳೆಯರ ಪೈಕಿ ಚೆನ್ನಮ್ಮ ಅವರ ಹೆಸರು ಮುಂಚೂಣಿಯಲ್ಲಿರುವುದು ನಾಡಿನ ಹೆಮ್ಮೆ ಸಂಗತಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಉಪನ್ಯಾಸ ನೀಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ತನ್ನ ೧೫ನೇ ವಯಸ್ಸಿನಲ್ಲಿ ತನ್ನ ರಾಜ್ಯದ ಜನತೆಯ ಕಾಪಾಡಲು ಹುಲಿ ಬೇಟೆಯಾಡಿ ಸಂಹಾರ ಮಾಡಿ ಕೆಚ್ಚೆದೆಯ ವೀರ ವನಿತೆ ಎನಿಸಿಕೊಂಡಳು. ಬ್ರಿಟಿಷರು ಭಾರತದ ಕೆಲವು ರಾಜ್ಯಗಳನ್ನು ವಶಪಡಿಸಿಕೊಂಡು ಕಿತ್ತೂರು ಸಂಸ್ಥಾನಕ್ಕೆ ಲಗ್ಗೆ ಇಟ್ಟು ನೇರವಾಗಿ ಚೆನ್ನಮ್ಮಳಿಗೆ ಕಪ್ಪ ಕಟ್ಟುವಂತೆ ಒತ್ತಾಯಿಸಿದ ಸಂದರ್ಭ ಪ್ರತಿಧ್ವನಿಸಿದ ಚೆನ್ನಮ್ಮ ನಿಮಗೇಕೆ ಕೊಡಬೇಕು ಕಪ್ಪ, ರಾಜ್ಯ ಪ್ರವೇಶಿಸಲು ಅನುಮತಿ ನೀಡಿದ್ದೆ ತಪ್ಪಾಯಿತೇ ಕೂಡಲೇ ಇಲ್ಲಿಂದ ತೊಲಗಿ ಇಲ್ಲವಾದರೆ ನಿಮ್ಮ ನಾಲಿಗೆ ಸೀಳಿಬಿಟ್ಟೆನು ಎಚ್ಚರ ಎಂಬ ನುಡಿಗೆ ಬ್ರಿಟಿಷರು ತತ್ತರಿಸಿದ್ದರು. ಆ ಮಾತೆಯ ಸ್ಥೈರ್ಯ ಎಲ್ಲ ಮಹಿಳೆಯರಲ್ಲಿ ಹೊರಹೊಮ್ಮಬೇಕು. ಆಕೆಯ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಆಚರಣೆಗೆ ಹೆಚ್ಚು ಅರ್ಥ ಬರುತ್ತದೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡ ವೀರಣ್ಣ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.