ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ
ಕನ್ನಡಪ್ರಭ ವಾರ್ತೆ, ಕಡೂರುಮನುಷ್ಯನ ಸ್ವಾರ್ಥಕ್ಕಾಗಿ ಪರಿಸರದ ಅಸಮತೋಲನವಾಗಿ ನಿರಂತರ ಬರಗಾಲ ಉಂಟಾಗುತಿದೆ. ನಾವುಗಳು ಅದನ್ನು ಸರಿಪಡಿಸುವ ಮೂಲಕ ಆರೋಗ್ಯಕರ ಸಮಾಜಕ್ಕೆ ಸಸಿಗಳನ್ನು ನೆಟ್ಟು ಪರಿಸರ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು .
ಕಡೂರು ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಕೆರೆ ಏರಿ ಮೇಲೆ ಗ್ರಾಮ ಪಂಚಾಯತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಮಾತನಾಡಿದರು.ಆರೋಗ್ಯಕರ ಹವಾಮಾನ ಮತ್ತು ಉತ್ತಮ ಪರಿಸರ ಇಲ್ಲದ ಕಾರಣ ಮನುಷ್ಯನು ಮತ್ತು ಪ್ರಾಣಿ ಸಂಕುಲ ಗಳಿಗೆ ಸಂಕಷ್ಟ ಎದುರಾಗಿದೆ. ಇದನ್ನು ಅರಿಯದೆ ಮನುಷ್ಯನು ಮರ ಗಿಡಗಳನ್ನು ಕಡಿದು ತನ್ನ ಸ್ವಾರ್ಥಕ್ಕೆ ಬಳಸುತ್ತಿರುವುದು, ಬೆಟ್ಟ ಗುಡ್ಡಗಳನ್ನು ಕೂಡ ಕರಗಿಸುವ ಮೂಲಕ ತನ್ನ ಸ್ವಾರ್ಥದ ಅಂತಿಮ ಪರಿಧಿಯಲ್ಲಿ ಮನುಷ್ಯನು ಇದ್ದಾನೆ ಅದನ್ನು ಅರಿಯಬೇಕು ಎಂದರು. ಪರಿಸರ ಉಳಿಸುವ ಮರ ಗಿಡಗಳು ಮಾನವನ ಹತಾಶ ಸ್ಥಿತಿಯ ಮನೋಭಾವನೆಗೆ ಬಲಿ ಆಗುತ್ತಿದ್ದು ಇದರಿಂದ ಉತ್ತಮ ಪರಿಸರ ಇಲ್ಲದ ಕಾರಣ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ. ಆ ಮೂಲಕ ಪ್ರತಿ ಯೊಬ್ಬರಲ್ಲೂ ಜಾಗೃತಿ ಮೂಡಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.ಮೊದಲು ಎಲ್ಲರೂ ತಮ್ಮ ಸುತ್ತಮುತ್ತಲಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಲು ಜನಪ್ರತಿನಿಧಿಗಳು, ಸಾರ್ವಜನಿಕರು, ಯುವಕರು ಕೈಜೋಡಿಸಿ ಪರಿಸರವನ್ನು ಉತ್ತಮ ವಾಗಿಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಸಹಕಾರದ ಹಸ್ತ ನೀಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಹಮಾನ್, ಪಂಚಾಯ್ತಿಯ ಹನುಮಂತಪ್ಪ ಮರಿಯಪ್ಪ, ಚೈತ್ರ, ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಇದ್ದರು.7ಕೆಕೆಡಿಯು3. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ .ಅವರು ಕಡೂರು ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಕೆರೆ ಏರಿಯ ಮೇಲೆ ಗ್ರಾಮ ಪಂಚಾಯತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಮಾತನಾಡಿದರು