ಪರಿಸರವನ್ನು ಪ್ರತಿಯೊಬ್ಬರೂ ಸಂರಕ್ಷಿಸಬೇಕು: ಡಾ. ಶುಭಾ ವಿಜಯ್‌

KannadaprabhaNewsNetwork |  
Published : Jun 09, 2025, 12:18 AM IST
ಹಿರೇಮಗಳೂರಿನಲ್ಲಿ ಚಿಕ್ಕಮಗಳೂರು ಸ್ವಚ್ಛ ಟ್ರಸ್ಟ್‌ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಡಾ. ಶುಭ ವಿಜಯ್‌ ಅವರು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು. ಗಿಡ ಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗುವ ಜೊತೆಗೆ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ ಎಂದು ಸ್ವಚ್ಛ ಟ್ರಸ್ಟ್ ಅಧ್ಯಕ್ಷೆ ಡಾ. ಶುಭಾ ವಿಜಯ್ ಹೇಳಿದರು.

ಹಿರೇಮಗಳೂರು ಬಳಿ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು. ಗಿಡ ಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗುವ ಜೊತೆಗೆ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ ಎಂದು ಸ್ವಚ್ಛ ಟ್ರಸ್ಟ್ ಅಧ್ಯಕ್ಷೆ ಡಾ. ಶುಭಾ ವಿಜಯ್ ಹೇಳಿದರು.

ಹಿರೇಮಗಳೂರಿನಲ್ಲಿ ಚಿಕ್ಕಮಗಳೂರು ಸ್ವಚ್ಛ ಟ್ರಸ್ಟ್ ನಿಂದ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಕಾಡು ಬಾದಾಮಿ, ಹೊಂಗೆ ಮತ್ತು ಬೋಗನ್ ವಿಲ್ಲಾ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ಮಲೆನಾಡಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಇಂದು ಸುಮಾರು 400ಕ್ಕೂ ವಿವಿಧ ಸಸಿಗಳನ್ನು ನೆಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಮನೆಯ ಸುತ್ತಲು ಗಿಡಗಳನ್ನು ಬೆಳೆಸುವುದಲ್ಲದೇ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು ಎಂದು ಸಲಹೆ ಮಾಡಿದರು.ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಇದು ಪರಿಸರ ಉಳಿಸುವ ಮಾರ್ಗ. ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸಬೇಕು. ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳ ಮಾರಣಹೋಮ ನಡೆಯುತ್ತಿದೆ ಎಂದರು.ಟ್ರಸ್ಟ್ ಸದಸ್ಯ ಡಾ. ಅನಿಕೇತ್ ಮಾತನಾಡಿ, ಪರಿಸರ ಬಗ್ಗೆ ಅರಿವಿದ್ದರೆ ಸಾಲದು. ಪ್ರಜ್ಞೆಯೂ ಇರಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಪ್ರಸ್ತುತ ಕಾಲಮಾನದಲ್ಲಿ ಭೂಮಿ ಉಳಿಸಿಕೊಳ್ಳಬೇಕಾದರೆ ಸಾಧ್ಯವಾದಷ್ಟು ಗಿಡಗಳನ್ನು ನೆಡಬೇಕು. ನಿಮ್ಮ ಎಲ್ಲಾ ಆಚರಣೆಗಳಿಗೆ ಉಡುಗೊರೆಯಾಗಿ ಗಿಡಗಳನ್ನು ಕೊಡಿ ಎಂದು ಸಲಹೆ ನೀಡಿದರು.ಪರಿಸರ ಮಾಲಿನ್ಯ ಉಂಟಾಗಿ ಭವಿಷ್ಯದಲ್ಲಿ ಶುದ್ಧ ಆಮ್ಲಜನಕ ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ತಾಯಿ ಹೆಸರಿನಲ್ಲಿ ಸಸಿವೊಂದನ್ನು ನೆಟ್ಟು ಪೋಷಿಸಿದರೆ ಪರಿಶುದ್ಧ ಆಮ್ಲಜನಕ ಮನುಷ್ಯನ ಪಾಲಾಗುವ ಜೊತೆಗೆ ಆರೋಗ್ಯಪೂರ್ಣ ಸಮಾಜಕ್ಕೆ ಸಹಕರಿಸಿದಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಟ್ರಸ್ಟ್‌ನ ಸಹ ಕಾರ್ಯದರ್ಶಿ ಪ್ರದೀಪ್ ಗೌಡ, ಸದಸ್ಯರಾದ ಎಚ್.ಬಿ.ಲಕ್ಷ್ಮೀ, ಡಾ. ಅಶ್ವಿನಿ, ಶುಭ ರಾಮೇಗೌಡ, ಲೇಖಾ, ಅರುಣಾಕ್ಷಿ, ಶಕುಂತಲಾ ಈರಪ್ಪಗೌಡ, ಉಮಾ ನಾಗೇಶ್, ಹರಿಣಾಕ್ಷಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು. 8 ಕೆಸಿಕೆಎಂ 1ಹಿರೇಮಗಳೂರಿನಲ್ಲಿ ಚಿಕ್ಕಮಗಳೂರು ಸ್ವಚ್ಛ ಟ್ರಸ್ಟ್‌ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಸಂದರ್ಭದಲ್ಲಿ ಡಾ. ಶುಭಾ ವಿಜಯ್‌ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ