ಪ್ರಯೊಬ್ಬರೂ ಸಂವಿಧಾನ ಗೌರವಿಸಿ: ರಾಘವೇಂದ್ರ

KannadaprabhaNewsNetwork | Published : Jan 27, 2025 12:46 AM

ಸಾರಾಂಶ

ಸಂವಿಧಾನವು ಸಾರ್ವಜನಿಕವಾಗಿ ಬದುಕಲು ಸಹಕರಿಯಾಗಿದೆ. ಈ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ನಿವೃತ್ತ ಶಿಕ್ಷಕ ರಾಘವೇಂದ್ರ ಕರೆ ನೀಡಿದರು.

ತ್ಯಾಗರ್ತಿ: ಸಂವಿಧಾನವು ಸಾರ್ವಜನಿಕವಾಗಿ ಬದುಕಲು ಸಹಕರಿಯಾಗಿದೆ. ಈ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ನಿವೃತ್ತ ಶಿಕ್ಷಕ ರಾಘವೇಂದ್ರ ಕರೆ ನೀಡಿದರು.

ತ್ಯಾಗರ್ತಿಯ ಯುವಜನ ಬಳಗ ಕಾಗೋಡು ತಿಮ್ಮಪ್ಪ ವೃತ್ತದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣ ನೆರವೇರಿಸಿ ಯುವಜನ ಬಳಗದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನವು ದೇಶದ ಯಾವುದೇ ಪ್ರದೇಶಗಳಲ್ಲಿ ವಾಸಿಸಲು ಪ್ರತಿಯೊಬ್ಬರಿಗೂ ಹಕ್ಕು ನೀಡಿದೆ. ಈ ಹಕ್ಕು ಸದುಪಯೋಗವಾಗಲಿ ಎಂದು ಆಶಿಸಿದರು.

ಯುವಜನ ಬಳಗದ ಇಸಾಕ್, ಅಭಿಲಾಷ್, ಶ್ರೀಕುಮಾರ್, ತ್ಯಾಗರ್ತಿಯ ಸ್ವಾಮಿವಿವೇಕಾನಂದ ವಿದ್ಯಾಸಂಸ್ಥೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.

ಮೆಸ್ಕಾಂ ಕಚೇರಿಯಲ್ಲಿ ಗಣತಂತ್ರ ಹಬ್ಬಭದ್ರಾವತಿ: ನಗರದ ಜೆಪಿಎಸ್ ಕಾಲೋನಿ, ಮೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ ವತಿಯಿಂದ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್ ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು. ಧ್ವಜಾರೋಹಣದ ನಂತರ ಸಿಹಿ ಹಂಚಲಾಯಿತು. ಲೆಕ್ಕಾಧಿಕಾರಿ ಅಶ್ವಿನಿಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ್, ಹಿರಿಯ ಸಹಾಯಕಿ ನಾಗರತ್ನ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಗಮನ ಸೆಳೆದ ವಿವೇಕಾನಂದರ ವೇಷರಿಪ್ಪನ್‍ಪೇಟೆ: ಇಲ್ಲಿ 76 ನೇ ಗಣರಾಜ್ಯೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದ ಅಂಗವಾಗಿ ಕೋಡೂರು ಬ್ಲಾಸಂ ಅಕಾಡಮಿ ಶಾಲಾ ವಿದ್ಯಾರ್ಥಿಗಳ ವೇಷಭೂಷಣ, ಪಥಸಂಚಲನ ಸಾರ್ವಜನಿಕರನ್ನು ಅಕರ್ಷಿಸಿತು.ಕೋಡೂರು ಇತಿಹಾಸ ಪ್ರಸಿದ್ದ ಶ್ರೀಶಂಕರೇಶ್ವರ ದೇವಸ್ಥಾನದಿಂದ ಸ್ವಾಮಿ ವಿವೇಕಾನಂದರ ವೇಷಭೂಷಣದೊಂದಿಗೆ ಮಕ್ಕಳ ಪಥಸಂಚಲನಕ್ಕೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬ್ಲಾಸಂ ಅಕಾಡೆಮಿ ಆಧ್ಯಕ್ಷ ಚಂದ್ರುಮೌಳಿಗೌಡ ಚಾಲನೆ ನೀಡಿ ಮಾತನಾಡಿ, ದೇಶದ ಆಖಂಡತೆಯನ್ನು ಹೊರದೇಶದಲ್ಲಿ ಪ್ರಚರಪಡಿಸುವ ಮೂಲಕ ವಿಶ್ವನಾಯಕರಾಗಿರುವ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಲ್ಲಿ ಬೆಳಸುವ ಕೆಲಸ ಮಾಡುವುದರೊಂದಿಗೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು.ಬ್ಲಾಸಂ ಅಕಾಡಮಿ ಟ್ರಸ್ಟಿಗಳಾದ ಸುರೇಶ್,ದಿವಾಕರಶೆಟ್ಟರು, ಮುಖ್ಯೋಪಾಧ್ಯಾಯ ಸುಧಾಕರ್, ಪ್ರಕಾಶ, ಕೋಮಲ, ನಾಗಶ್ರೀ, ದೀಪಾ, ಅಶ್ವಿನಿ, ಗೀತಾ, ಅಸ್ಮಾ, ಅನಿಷಾ, ಹಲವರು ಹಾಜರಿದ್ದರು. ವಿದ್ಯಾರ್ಥಿಗಳ ಪಥಸಂಚಲನವೂ ಕೋಡೂರು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜನಾಕರ್ಷಣೆಗೊಂಡಿತು.

Share this article