ಕುಮಟಾ: ದೇಶದಲ್ಲಿ ಪ್ರಜೆಗಳ ಪ್ರಭುತ್ವದಲ್ಲಿ ಸಮಗ್ರತೆ, ಸಮಾನತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸಂವಿಧಾನದ ಧ್ಯೇಯವಾಗಿದ್ದು, ಪ್ರತಿಯೊಬ್ಬರೂ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಬೇಕು. ಸಂವಿಧಾನದ ಆಶಯಗಳಿಗೆ ಧಕ್ಕೆ ಬರದಂತೆ ಬದುಕಿ ಪ್ರಗತಿ ಸಾಧಿಸಬೇಕು ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ: ಅಷ್ಪಾಕ್ ಶೇಖ್
ದಾಂಡೇಲಿ: ನಗರದ ಹಳೆ ಸಿಎಂಸಿ ಕಟ್ಟಡದ ಮೈದಾನದಲ್ಲಿ ೭೬ನೇ ಗಣರಾಜ್ಯೋತ್ಸವದ ಪ್ರಯುಕ್ತ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ ಧ್ವಜಾರೋಹಣ ನೆರವೇರಿಸಿದರು.ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ್ ಮಾತನಾಡಿ, ನಗರವನ್ನು ಪ್ರವಾಸೋದ್ಯಮ ಪೂರಕವಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿ ಇದ್ದು, ತೆರಿಗೆ ಸಂಗ್ರಹ, ಮೂಲ ಸೌಕರ್ಯ ನೀಡುವಲ್ಲಿ ನಗರಾಡಳಿತ ಉತ್ತಮ ಪ್ರಗತಿ ಕಾಣುತ್ತಿದೆ. ನಗರದ ನೈರ್ಮಲ್ಯಕ್ಕೆ ನಾಗರಿಕರು ಸಹಕರಿಸಬೇಕು. ಕಂಡ ಕಂಡಲ್ಲಿ ಕಸ ಎಸೆಯುವುದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದರು.ಈ ಸಂದರ್ಭದಲ್ಲಿ ಪೌರಾಯುಕ್ತ ರಾಜಾರಾಮ ಪವಾರ, ತಹಸೀಲ್ದಾರ್ ಶೈಲೇಶ ಪರಮಾನಂದ ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾ ರಾಮಲಿಂಗ ಜಾಧವ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ಡಿಎಸ್‌ಪಿ ಶಿವಾನಂದ ಮದರಕಂಡಿ ಹಾಗೂ ನಗರಸಭೆಯ ಸದಸ್ಯರು, ಅಧಿಕಾರಿಗಳು, ತಾಲೂಕಾಡಳಿತ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ರೋಟರಿ ಶಾಲೆ, ಸೆಂಟ್ ಮೈಕಲ್ ಶಾಲೆ, ಸೊರಗಾವಿ ಶಾಲೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ದೇಶಭಕ್ತಿಗೀತೆ ಕಾರ್ಯಕ್ರಮ ನಡೆಯಿತು.ನಗರದ ವಿವಿಧೆಡೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಳೆದಾಂಡೇಲಿ, ಆಶಾಕಿರಣ ಐಟಿಐ, ಸರ್ಕಾರಿ ಡಿಗ್ರಿ ಕಾಲೇಜು, ಬಂಗೂರನಗರ ಡಿಗ್ರಿ ಕಾಲೇಜು, ಬಂಗೂರನಗರ ಪಿಯು ಕಾಲೇಜು, ಜನತಾ ವಿದ್ಯಾಲಯ, ಕನ್ಯಾವಿದ್ಯಾಲಯ, ತೌಹಿದ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶಾಲಾ- ಕಾಲೇಜುಗಳಲ್ಲಿ ಧ್ವಜಾರೋಹನವನ್ನು ನೆರವೇರಿಸಿ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.