ಇಂಗ್ಲಿಷ್ ಔಷಧಿಗಿಂತ ಆಯುರ್ವೇದ ಔಷಧಿ ಆರೋಗ್ಯಕ್ಕೆ ಉತ್ತಮ. ಪ್ರತಿ ವ್ಯಕ್ತಿ 40ನೇ ವಯಸ್ಸಿನಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ನರಗುಂದ: ರಾಜ್ಯದ ಹಾಗೂ ಕ್ಷೇತ್ರದ ಜನತೆ ಆರೋಗ್ಯದಿಂದ ಇರಬೇಕೆಂಬುದು ನನ್ನಾಸೆ. ಹೀಗಾಗಿ ನನ್ನ ಸಹೋದರನ ಹೆಸರಿನಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡಿದ್ದೇವೆ. ಕಟ್ಟಡ ಮಾತ್ರ ಸರ್ಕಾರದ್ದು. ಮೂಲ ಸೌಲಭ್ಯ ಹಾಗೂ ಔಷಧಿ ಮಳಿಗೆ ನಿರ್ಮಿಸಲು ಹಣಕಾಸಿನ ನೆರವು ಬೇಕಾದರೆ ನನ್ನ ಕುಟುಂಬವೇ ವೈಯಕ್ತಿಕವಾಗಿ ಭರಿಸಲು ಸಿದ್ಧವಿದೆ ಎಂದು ಶಾಸಕ ಸಿ.ಸಿ. ಪಾಟೀಲ ಭರವಸೆ ನೀಡಿದರು.
ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ 2018- 19ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ಶೇಖರಗೌಡ ಚನ್ನಪ್ಪಗೌಡ ಪಾಟೀಲ ಸರ್ಕಾರಿ ಆಯುರ್ವೇದ ಹಾಗೂ ಹೋಮಿಯೋಪತಿ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಇಂಗ್ಲಿಷ್ ಔಷಧಿಗಿಂತ ಆಯುರ್ವೇದ ಔಷಧಿ ಆರೋಗ್ಯಕ್ಕೆ ಉತ್ತಮ. ಇಲ್ಲಿ ಪಂಚಕರ್ಮ ಪದ್ಧತಿಯಲ್ಲಿ ಉತ್ತಮ ಚಿಕಿತ್ಸೆ ನೀಡುವಂತಾಗಲಿ. ಪ್ರತಿ ವ್ಯಕ್ತಿ 40ನೇ ವಯಸ್ಸಿನಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿಂದೆ ಬಿಜೆಪಿ ಸರ್ಕಾರದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲಾದ್ಯಂತ ಆಕ್ಸಿಜನ್ ಘಟಕಗಳನ್ನು ನಿರ್ಮಿಸಿದ್ದೇನೆ. ಕೋವಿಡ್ ಸಬ್ ಕಮಿಟಿ ಚೇರಮನ್ ಆಗಿದ್ದ ನಾನು ವ್ಯಾಕ್ಸಿನ್ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ ಎಂದರು.ವಸಂತ ಜೋಗಣ್ಣವರ ಮಾತನಾಡಿ, ಜನರ ಆರೋಗ್ಯದ ಬಗ್ಗೆ ಶಾಸಕರು ಹೆಚ್ಚು ಕಾಳಜಿ ವಹಿಸುತ್ತಿರುವುದು ಸಂತಸ ತಂದಿದೆ ಎಂದರು.ಚಂದ್ರಶೇಖರ ದಂಡಿನ, ನ್ಯಾಯವಾದಿ ಎಸ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಪ್ಪಗೌಡ ಪಾಟೀಲ, ಶೋಭಾ ಪಾಟೀಲ, ಉಮೇಶಗೌಡ ಪಾಟೀಲ, ಮಹೇಶಗೌಡಪಾಟೀಲ, ಚಿಕ್ಕಮಠ ಸ್ವಾಮಿಗಳು, ಬಿ.ಕೆ. ಗುಜಮಾಗಡಿ, ಬಿ.ಬಿ. ಐನಾಪೂರ, ಎಸ್.ಜಿ. ಮುತ್ತವಾಡ, ಚಂದ್ರಶೇಖರ ದಂಡಿನ, ನಿಂಗಣ್ಣ ಗಾಡಿ, ಮಲ್ಲಪ್ಪ ಮೇಟಿ, ಎ.ವಿ. ಗುಡಿಮನಿ, ಪವಾಡಪ್ಪ ವಡ್ಡಗೇರಿ, ಪ್ರಶಾಂತ ಜೋಶಿ, ಎನ್.ಕೆ. ಸೋಮಪೂರ, ಯಲ್ಲಪ್ಪ ಜಾಲಿಕಟ್ಟಿ, ಆಯುಷ್ ಇಲಾಖಾಧಿಕಾರಿ ಡಾ. ಅಶೋಕ ಮತ್ತಿಗಟ್ಟಿ, ಪ್ರದೀಪ ಗುಡಿಮನಿ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.