ಸಾಂಸ್ಕೃತಿಕ, ಧಾರ್ಮಿಕ ಆಚರಣೆ ಪಾಲಿಸಿಲು ಪ್ರತಿಯೊಬ್ಬರು ಚಿಂತಿಸಬೇಕು: ಕೆ.ಹರೀಶ್ ಗೌಡ

KannadaprabhaNewsNetwork |  
Published : Mar 25, 2025, 12:47 AM IST
33 | Kannada Prabha

ಸಾರಾಂಶ

ಚಾಮರಾಜ ಕ್ಷೇತ್ರದಲ್ಲೂ ಬ್ರಾಹ್ಮಣ ಸಮುದಾಯ 28 ಸಾವಿರಕ್ಕೂ ಹೆಚ್ಚು ಮಂದಿಯಿದ್ದಾರೆ. ಬಹುತೇಕರು ಅರ್ಚಕರು, ಪುರೋಹಿತರು, ಶಿಕ್ಷಕರು, ಅಡುಗೆ ವೃತ್ತಿಯವರು, ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಶಿಕ್ಷಣ, ಉದ್ಯೋಗ, ವೈದ್ಯಕೀಯ ನೆರವು, ಸಾಂಸ್ಕೃತಿಕ ಸಹಕಾರಿ ಪ್ರೋತ್ಸಾಹಗಳು ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಪೂರ್ವಜರ ಹೇಳಿಕೊಟ್ಟ ಹಬ್ಬಗಳ ಮಹತ್ವ, ಸಾಂಸ್ಕೃತಿಕ ಧಾರ್ಮಿಕ ಆಚರಣೆಯನ್ನು ಪಾಲಿಸಿಕೊಂಡು ಬರುವಲ್ಲಿ ಪ್ರತಿಯೊಬ್ಬರು ಚಿಂತಿಸಬೇಕು. ಅದರಲ್ಲಿಯೇ ಒಂದು ವೈಜ್ಞಾನಿಕ ಶಕ್ತಿ ಅಡಗಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಬ್ರಾಹ್ಮಣ ಸಮುದಾಯವರಿಗೆ ಒಂಟಿಕೊಪ್ಪಲ್ ಪಂಚಾಂಗ ವಿತರಿಸಿ ಮಾತಾಡಿದ ಅವರು, ಚೈತ್ರ ಮಾಸದ ಮೂಲಕ ಪ್ರಾರಂಭವಾಗುವ ಯುಗಾದಿಯ ಹೊಸ ವರ್ಷ ಇಡೀ ಪರಿಸರವೇ ಹಸಿರಿನ ಮೂಲಕ ಸಂತಸ ಪಡುತ್ತದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ದಿನಾಂಕ ಸಮಯವನ್ನ ಪಂಚಾಂಗದ ಪ್ರಕಾರವಾಗಿ ಯಥಾವತ್ತಾಗಿ ಸರ್ವರಿಗೂ ಮಾಹಿತಿ ನೀಡುವ ಪುರೋಹಿತರು, ಅರ್ಚಕರನ್ನ ಸೇರಿಸಿ ಕಳೆದ 6 ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇನೆ ಎಂದರು.

ಚಾಮರಾಜ ಕ್ಷೇತ್ರದಲ್ಲೂ ಬ್ರಾಹ್ಮಣ ಸಮುದಾಯ 28 ಸಾವಿರಕ್ಕೂ ಹೆಚ್ಚು ಮಂದಿಯಿದ್ದಾರೆ. ಬಹುತೇಕರು ಅರ್ಚಕರು, ಪುರೋಹಿತರು, ಶಿಕ್ಷಕರು, ಅಡುಗೆ ವೃತ್ತಿಯವರು, ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಶಿಕ್ಷಣ, ಉದ್ಯೋಗ, ವೈದ್ಯಕೀಯ ನೆರವು, ಸಾಂಸ್ಕೃತಿಕ ಸಹಕಾರಿ ಪ್ರೋತ್ಸಾಹಗಳು ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ. ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶಾಶ್ವತ ಯೋಜನೆ ರೂಪಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಆಧ್ಯಾತ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಮಾತನಾಡಿ, ಪಂಚಾಗದಲ್ಲಿ ಹಿಂದೂ ಸಂಪ್ರದಾಯದ ಆಚರಣೆ ಮಹತ್ವದ ಬಗ್ಗೆ ನಿಶ್ಚಯಿಸಿದಂತೆ ಎಲ್ಲವೂ ನಡೆಯುತ್ತ ಬಂದಿರುವದನ್ನ ಕಾಣುತ್ತಿದ್ದೇವೆ ಎಂದರೆ ಯತಿಗಳ ತಪಸ್ಸು, ಕೊಡುಗೆ ಅಪಾರವಾದುದದ್ದು. ಇದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ. ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಆಗುವ ಬದಲಾವಣೆಯ ಮುನ್ನವೇ ಪಂಚಾಂಗದಲ್ಲಿ ನಮೂದಿಸಲಾಗಿರುತ್ತದೆ ಎಂದರು.

ಸರ್ಕಾರದಿಂದ ಬಡ ಬ್ರಾಹ್ಮಣರಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳು ಅನ್ಯ ರಾಜ್ಯಗಳಲ್ಲಿ ಇರುವ ಹಾಗೆ ಕರ್ನಾಟಕದಲ್ಲಿ ಜಾರಿಗೆ ಬರಬೇಕಿದೆ. ಅರ್ಚಕ, ಪುರೋಹಿತರಿಗೆ, ಅಡುಗೆ ವೃತ್ತಿಯವರಿಗೆ ಸರ್ಕಾರದ ನೆರವು ಅವಶ್ಯಕ ಎಂದು ಅವರು ಮನವಿ ಮಾಡಿದರು.

ವೆಂಗಿಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್, ಯೋಗ ನರಸಿಂಹ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರ್ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀಕಾಂತ್ ಕಶ್ಯಪ್, ಸುಚೇಂದ್ರ, ಚಕ್ರಪಾಣಿ, ಮಿರ್ಲೆ ಪಣಿಶ್, ಗುರುಪ್ರಸಾದ್, ನವೀನ್, ರವಿಚಂದ್ರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ