ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದ ಟಿಕೆಟ್ ನಮಗೆ ಕೊಡುವಂತೆ ಡೇ ಒನ್‌ನಿಂದಲೂ ಶಾಸಕರಾದ ಶಾಮನೂರು ಶಿವಶಂಕರಪ್ಪನವರಾಗಲೀ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರಾಗಲೀ ಕೇಳಿದವರಲ್ಲ. ಆದರೂ, ನಮ್ಮ ಹೈಕಮಾಂಡ್ ಟಿಕೆಟ್ ನೀಡಿದ್ದು, ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಗೆದ್ದಿತು ಎಂದರು.
ಬಿಜೆಪಿಯವರು ಯಾರೇ ಅಭ್ಯರ್ಥಿಯಾಗಿದ್ದರೂ ಒಬ್ಬರೇ ವ್ಯಕ್ತಿಯ ಹೆಸರನ್ನು ಹೇಳುತ್ತಾರೆ. ನರೇಂದ್ರ ಮೋದಿಗಾಗಿ ಓಟು ಕೊಡಿ, ದೇಶಕ್ಕಾಗಿ ಓಟು ಕೊಡಿ ಅಂತಾರೆ. ಆದರೆ, ಬಿಜೆಪಿಯವರಾರೂ ತಮಗೆ ಓಟು ಕೊಡಿ ಎಂದು ಕೇಳುವುದಿಲ್ಲ. ತಮ್ಮ ವೈಯಕ್ತಿಕ ಸಾಧನೆಯನ್ನು ಹೇಳಿಕೊಂಡು, ಮತ ಕೇಳುವುದಿಲ್ಲ. ಸೋತ ನಂತರ ಈಗ ಎಲ್ಲರೂ ಒಂದೊಂದು ರೀತಿ ಮಾತನಾಡುತ್ತಿದ್ದಾರಷ್ಟೇ ಎಂದು ಅವರು ಹೇಳಿದರು.ವಿಪಕ್ಷದ ಓರ್ವ ಸದಸ್ಯೆಯಾಗಿ, ನನ್ನ ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮಾಡಿರುವ ಕೆಲಸ ನಾನು ಹೇಳಿದ್ದೇನೆ. ಜನರು ತೀರ್ಮಾನ ಮಾಡಲಿ ಎಂದು ಹೇಳಿದರು.
ಬಿಜೆಪಿಯ ಕೆಲವರು ಕಾಂಗ್ರೆಸ್ ಜೊತೆಗೆ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿದ್ದಾರೆಂಬ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ ಬಗ್ಗೆ ಅವರನ್ನೇ ಕೇಳಿ.
ಡಾ.ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ಸಂಸದೆ.