ವಿರಾಟ ಹಿಂದೂ ಸಮಾಜೋತ್ಸವದ ಸಭಾ ಕಾರ್ಯಕ್ರಮ
ಮಾನವನು ಹೇಗೆ ಸುಸಂಸ್ಕೃತವಾಗಿ ಬದುಕು ಬೇಕು ಎಂಬುದನ್ನ ತೋರಿಸಿಕೊಡುವುದರ ಜೊತೆ ಪುರಾಣ, ಶಾಸ್ತ್ರಗಳಲ್ಲಿ ದೃಷ್ಟಾಂತ ಬರೆದಿಟ್ಟು ಮನುಕುಲಕ್ಕೆ ಮಾರ್ಗದರ್ಶನ ಮಾಡಿದ ದೇಶ ನಮ್ಮದಾಗಿದೆ. ಹಿಂದೂ ಧರ್ಮದ ಸಂಸ್ಕೃತಿ, ನಮ್ಮ ಧರ್ಮದ ರಕ್ಷಣೆಗೆ ಎಲ್ಲರೂ ಒಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.
ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆದ ವಿರಾಟ ಹಿಂದೂ ಸಮಾಜೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಾತಿ, ಪಂಥ, ಬಿಟ್ಟು ನಾವೆಲ್ಲರು ಹಿಂದೂ ನಾವೆಲ್ಲರು ಒಂದು ಎಂಬ ಸಂದೇಶದೊಂದಿಗೆ ಧರ್ಮ ರಕ್ಷಣೆ ಒಂದಾಗಲು ಈ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು. ಎಲ್ಲರೂ ಒಂದಾದರೆ ಎಲ್ಲವನ್ನ ಸಾಧಿಸಬಹುದು ಎಂದರು.
ಹಿಂದೂ ಸಮಾಜೋತ್ಸವ ಸಮಿತಿ ಗೌರವಾಧ್ಯಕ್ಷ ವೇ. ಶ್ರೀಧರ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಗೋಕರ್ಣ ಹೋಬಳಿಯ ಗೌರವಾಧ್ಯಕ್ಷ ನಾಗರಾಜ ನಾಯಕ ಅಡಿಗೋಣ, ಉಪಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ಶಂಕರ ಹುಲಿಯಾ ಆಗೇರ, ವೇ. ಉದಯ ಮಯ್ಯರ್, ಗೋವಿಂದ ಗೌಡ, ಮಹೇಶ ನಾಯ್ಕ ಉಪಸ್ಥಿತರಿದ್ದರು.
ವೇ. ಗಣೇಶ್ವರ ದೀಕ್ಷಿತ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ ಗೌಡ, ನಿತ್ಯಾನಂದ ಶೆಟ್ಟಿ, ವೇ. ಉದಯ ಮಯ್ಯರ್, ಮಂಜುನಾಥ ಜನ್ನು, ಗಣಪತಿ ಅಡಿ, ಮಹೇಶ ಶೆಟ್ಟಿ, ಗಣಪತಿ ನಾಯ್ಕ, ಶೇಖರ ನಾಯ್ಕ, ಪ್ರಸನ್ನ ಪಾಟೀಲ್, ವಾಸುದೇವ ಕಾಮತ್, ಪ್ರಕಾಶ ಶೇಟ್, ಗಣೇಶ ಗಿರಿಯನ್, ವಿನಾಯಕ ಕಾಮತ್, ಕುಮಾರ ದೀವಟಿಗಿ, ನಾಗೇಶ ಗೌಡ, ಪದ್ಮಾಕರ ಗೌಡ, ಮತ್ತಿತತರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.ಇದೇ ಸಂದರ್ಭ ಪ್ರವಾಸಿ ತಾಣದ ಸ್ವಚ್ಛತೆಗೆ ಹಗಲಿರುಳು ದುಡಿಯುವ ಗ್ರಾಪಂ ಸ್ವಚ್ಛತಾ ಸಿಬ್ಬಂದಿಗಳನ್ನ ಹಿಂದೂ ಸಮಾಜೋತ್ಸವ ಸಮಿತಿಯವರು ಗೌರವಿಸಿದರು.