ಎಲ್ಲರೂ ಮಹರ್ಷಿ ವಾಲ್ಮೀಕಿ ಹಾದೀಲಿ ನಡೆಯಿರಿ

KannadaprabhaNewsNetwork |  
Published : Nov 23, 2025, 02:00 AM IST
ವಾಲ್ಮೀಕಿ ಜಯಂತೋತ್ಸವಕ್ಕೆ ಶಾಸಕ ಗಣೇಶ್‌ ಚಾಲನೆ | Kannada Prabha

ಸಾರಾಂಶ

ಪಟ್ಟಣದ ಹಳೇ ಬಸ್‌ ನಿಲ್ದಾಣದ ಆವರಣದಲ್ಲಿ ನಾಯಕ ಸಮಾಜ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ ವಾಲ್ಮೀಕಿ ಪೀಠಾಧೀಶ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಚಾಲನೆ ನೀಡಿದರು.

ಎಲ್ಲಾ ಪೋಟೋ ಬಳಸಿ

..............

೨೨ಜಿಪಿಟಿ೪ಗುಂಡ್ಲುಪೇಟೆ ಹಳೇ ಬಸ್‌ ನಿಲ್ದಾಣದಲ್ಲಿ ವಾಲ್ಮೀಕಿ ಜಯಂತೋತ್ಸವದಲ್ಲಿ ವಾಲ್ಮೀಕಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗು ಶ್ರೀಗಳು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಪೋಟೋಗುಂಡ್ಲುಪೇಟೆ ಹಳೇ ಬಸ್‌ ನಿಲ್ದಾಣದಿಂದ ವಾಲ್ಮೀಕಿ ಭಾವಚಿತ್ರ ಹೊತ್ತ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುವ ಸಮಯದಲ್ಲಿ ವಿವಿಧ ಕಲಾ ತಂಡಗಳು, ಡೊಳ್ಳು, ನಗಾರಿ, ಕೇರಳ ವಾದ್ಯ,ಗೊಂಬೆ ಕುಣಿತ, ಮಾರಿ ಕುಣಿತ, ಮಂಗಳವಾದ್ಯದ ಜೊತೆಗೆ ಡಿಜೆ ಸದ್ದು ಸಾರ್ವಜನಿಕರ ಗಮನ ಸೆಳೆಯಿತು.೨ಜಿಪಿಟಿ೫ಗುಂಡ್ಲುಪೇಟೆ ನಡೆದ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.><‌ಜಾಹೀರಾತುದಾರರು ಕಡ್ಡಾಯವಾಗಿ ಬರಲಿ ಈ ಫೋಟೋ೨೨ಜಿಪಿಟಿ೬ಗುಂಡ್ಲುಪೇಟೆ ಹಳೇ ಬಸ್‌ ನಿಲ್ದಾಣದಲ್ಲಿ ವಾಲ್ಮೀಕಿ ಜಯಂತಿ ಆರಂಭದ ಕ್ಷಣದಲ್ಲಿ ವಾಲ್ಮೀಕಿ ಶ್ರೀ,ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರನ್ನು ನಾಯಕ ಸಮಾಜದ ಮುಖಂಡರು ಸನ್ಮಾನಿಸಿದರು. ಎನ್.ಮಲ್ಲೇಶ್‌ ,ಪಿ.ಗಿರೀಶ್‌, ಬಂಗಾರನಾಯಕ, ಸುರೇಶ್‌, ಶ್ರೀನಿವಾಸ್‌, ಎನ್.ಕುಮಾರ್ ಇದ್ದಾರೆ.-----------

...................

ವಾಲ್ಮೀಕಿ ಜಯಂತ್ಯುತ್ಸವಕ್ಕೆ ಚಾಲನೆಯಲ್ಲಿ ಶಾಸಕ ಗಣೇಶ್‌ ಪ್ರಸಾದ್‌ ಸಲಹೆ । ಪ್ರಗತಿ ಸಾಧಿಸಲು ಸಂಘಟಿತರಾಗಿ: ಪ್ರಸನ್ನಾನಂದ ಶ್ರೀ

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ ಪಟ್ಟಣದ ಹಳೇ ಬಸ್‌ ನಿಲ್ದಾಣದ ಆವರಣದಲ್ಲಿ ನಾಯಕ ಸಮಾಜ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ ವಾಲ್ಮೀಕಿ ಪೀಠಾಧೀಶ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಾಲ್ಮೀಕಿ ನಡೆದು ಬಂದ ಹಾದಿಯಲ್ಲಿ ನಾವು ನೀವೆಲ್ಲ ನಡೆದರೆ ಜಯಂತಿ ಮಾಡಿದ್ದಕ್ಕೂ ಅರ್ಥ ಬರಲಿದೆ ಎಂದರು.

ವಾಲ್ಮೀಕಿ ಪೀಠಾಧೀಶ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ರಾಮಾಯಣ ರಚಿಸುವ ಮೂಲಕ ವಾಲ್ಮೀಕಿ ಸಮಾಜಕ್ಕೆ ಸಂದೇಶ ಸಾರಿದ್ದರು. ವಾಲ್ಮೀಕಿ ಸಮಾಜ ಪ್ರಗತಿ ಸಾಧಿಸಲು ಮೊದಲು ಸಂಘಟಿತರಾಗಬೇಕು. ಸಮಾಜ ಸಂಘಟಿತರಾಗುವ ಜೊತೆಗೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದರೆ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಮುಂದೆ ಬರಲು ಸಾಧ್ಯವಾಗಲಿದೆ ಎಂದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ವೇದಿಕೆಗೆ ಆಗಮಿಸಿ ವಾಲ್ಮೀಕಿಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಮಾಜಕ್ಕೆ ಶುಭಾಶಯ ಕೋರಿದರು.

ನಾಯಕ ಸಮಾಜದ ಗಡಿ ಯಜಮಾನ ಎನ್.ಮಲ್ಲೇಶ್,ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರ ನಾಯಕ, ಪುರಸಭೆ ಮಾಜಿ ಉಪಾಧ್ಯಕ್ಷರಾದ ಕಾರ್ಗಳ್ಳಿ ಸುರೇಶ್‌, ಶ್ರೀನಿವಾಸ್‌, ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್‌, ರಂಗಸ್ವಾಮಿ ಆಲಿಯಾಸ್‌ ಪಟ್ಟಾಬಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪಿ.ಶಶಿಧರ್‌ ಪಿ ದೀಪು ,ಬಿಜೆಪಿ ಯುವ ಮುಖಂಡ ಡಾ.ನವೀನ್‌ ಮೌರ್ಯ, ಪುರಸಭೆ ಮಾಜಿ ಸದಸ್ಯ ಇಲಿಯಾಸ್‌, ನಾಯಕ ಸಮಾಜದ ಮುಖಂಡರಾದ ಮಾಧು ಗುಂಡ್ಲುಪೇಟೆ, ಗೋವಿಂದರಾಜು, ನಾಗೇಂದ್ರ ,ರಣಧೀರ ಪ್ರದೀಪ್‌, ನಾಗರಾಜು(ಕ್ರೇಜಿ), ರವಿನಾಯಕ, ವೃಷಬೇಂದ್ರ ಇದ್ದರು.

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್