ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ಹಿಂದೂಗಳೇ

KannadaprabhaNewsNetwork |  
Published : Oct 22, 2024, 12:16 AM IST
21ಎಚ್ಎಸ್ಎನ್13 : ಚನ್ನರಾಯಪಟ್ಟಣದಲ್ಲಿ ನಡೆದ ಆರ್‌ಎಸ್ಎಸ್ ಪಥ ಸಂಚಲನ. | Kannada Prabha

ಸಾರಾಂಶ

ಹಿಂದುತ್ವ ಎಂಬುದು ಹೆಮ್ಮೆಯ ವಿಷಯ. ಈ ದೇಶವನ್ನು ಪ್ರೀತಿಸುವ ಎಲ್ಲರೂ ಹಿಂದೂಗಳು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣಪ್ರಸಾದ್ ಬದಿ ತಿಳಿಸಿದರು. ನಮ್ಮ ಬದುಕು ಪ್ರಕೃತಿಗೆ ಪೂರಕವಾಗಿರಬೇಕು. ಅನ್ಯಭಾಷಿಗರನ್ನು ದ್ವೇಷ ಮಾಡುವುದು ನಮಗೆ ಭಾಷಾಭಿಮಾನವಾಗಬಾರದು. ನಮ್ಮ ಭಾಷೆಯ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜವನ್ನು ಒಡೆಯುವ ಕುತಂತ್ರವನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಶಿಷ್ಟಾಚಾರ ಪಾಲನೆಗೆ ಆದ್ಯತೆ ನೀಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹಿಂದುತ್ವ ಎಂಬುದು ಹೆಮ್ಮೆಯ ವಿಷಯ. ಈ ದೇಶವನ್ನು ಪ್ರೀತಿಸುವ ಎಲ್ಲರೂ ಹಿಂದೂಗಳು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣಪ್ರಸಾದ್ ಬದಿ ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯದಶಮಿ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದ ಮೂಲಕ ೪೦ಕ್ಕೂ ಹೆಚ್ಚು ಸಂಘಟನೆಗಳು ತಮ್ಮನ್ನು ತೊಡಗಿಸಿಕೊಂಡಿವೆ. ದೇಶಕ್ಕೆ ಅನ್ಯಾಯ ಮಾಡುವವರು ಎಲ್ಲೇ ಇದ್ದರೂ ನಮ್ಮ ಶತ್ರುಗಳಾಗುತ್ತಾರೆ. ಅಂತಹವರನ್ನು ನಿಗ್ರಹಿಸುವ ಕೆಲಸ ನಮ್ಮೆಲ್ಲರದ್ದಾಗಬೇಕು. ನಮ್ಮ ಪರಂಪರೆ, ಸಂಸ್ಕೃತಿಯನ್ನು ಮೂಢನಂಬಿಕೆ ಎಂದು ಹೀಗಳೆದು ದೂರ ಮಾಡುವ ಮೂಲಕ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು. ದೇಶ, ಭಾಷೆ, ಜಾತಿಯ ಹೆಸರಿನಲ್ಲಿ ದೇಶವನ್ನು ಬೇರೆ ಮಾಡುವ ಪ್ರಯತ್ನ ಎಂದಿಗೂ ಆಗಬಾರದು ಎಂದರು.ನಮ್ಮ ಬದುಕು ಪ್ರಕೃತಿಗೆ ಪೂರಕವಾಗಿರಬೇಕು. ಅನ್ಯಭಾಷಿಗರನ್ನು ದ್ವೇಷ ಮಾಡುವುದು ನಮಗೆ ಭಾಷಾಭಿಮಾನವಾಗಬಾರದು. ನಮ್ಮ ಭಾಷೆಯ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜವನ್ನು ಒಡೆಯುವ ಕುತಂತ್ರವನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಶಿಷ್ಟಾಚಾರ ಪಾಲನೆಗೆ ಆದ್ಯತೆ ನೀಡಬೇಕು. ವಿಜಯ ದಶಮಿಯ ಆಚರಣೆ ಆಡಂಬರದ್ದಲ್ಲ. ಅದು ನಮ್ಮ ಬದುಕನ್ನು ರೂಪಿಸುವ ಸಂದೇಶದ ಪ್ರತೀಕ ಎಂದರು. ಹಿಂದುತ್ವ ಎನ್ನುವುದು ಕೇವಲ ಭಾರತೀಯರಿಗೆ ಮಾತ್ರ ಅಲ್ಲ, ಎಲ್ಲರಿಗೂ ಅಧ್ಯಯನ ಯೋಗ್ಯ ವಿಷಯವಾಗಿದೆ. ಇದೇ ಕಾರಣಕ್ಕೆ ಎಲ್ಲರ ದೃಷ್ಟಿ ಭಾರತದ ಕಡೆ ಇದೆ. ನಮ್ಮ ಭೂಮಿ ಮಾತೃ ಸ್ವರೂಪದಲ್ಲಿದೆ ಎಂಬ ಭಾವನೆ ಎಲ್ಲರಲ್ಲಿ ಜಾಗೃತವಾಗಬೇಕಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬ ಪರಿಕಲ್ಪನೆ ನೀಡಿದ್ದು ಸಂಘ, ೩೭೦ನೇ ವಿಧಿಯನ್ನು ರದ್ದುಮಾಡುವಲ್ಲಿ ಸಂಘದ ಪರೋಕ್ಷ ಪ್ರಯತ್ನವೂ ಇದೆ ಎಂದು ತಿಳಿಸಿದರು.ಗಮನ ಸೆಳೆದ ಪಥಸಂಚಲನ: ಗಣವೇಷಧಾರಿಗಳಿಂದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾನಗರ ಹಾಗೂ ಗಾಯತ್ರಿ ಬಡಾವಣೆಯಿಂದ ಪ್ರತ್ಯೇಕವಾಗಿ ಪಥಸಂಚಲನ ತಂಡಗಳು ಸಾಗಿ ಕೆ.ಆರ್‌. ವೃತ್ತದಲ್ಲಿ ಒಂದಾಗಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಪನ್ನಗೊಂಡಿತು. ದೇಶಭಕ್ತರ ವೇಷಗಳನ್ನು ಧರಿಸಿದ್ದ ಪುಟಾಣಿಗಳು ಹಾಗೂ ಸಂಘ ಸ್ಥಾಪಕರ ಭಾವಚಿತ್ರಗಳು ಮೆರವಣಿಗೆಗೆ ಹೆಚ್ಚಿನ ಕಳೆತಂದವು.ಜಿಲ್ಲಾ ಸಹ ಕಾರವಾಹಕ ನಾಗೇಂದ್ರ, ಉದ್ಯಮಿ ಬೂರಾರಾಮ್‌ಜಿ ಸಿರ್ವಿ, ತಾಲೂಕು ಸಂಘ ಚಾಲಕ ಡಾ.ಸಿ.ಎಸ್.ಶೇಷಶಯನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''