ಹರಪನಹಳ್ಳಿ: ವಿದ್ಯಾರ್ಥಿಗಳು ಮೊಬೈಲ್, ದುಶ್ಚಟಗಳಿಂದ ದೂರವಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅರಸೀಕೆರೆ ಪಿಎಸ್‌ಐ ವಿಜಯಕೃಷ್ಣ ಹೇಳಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ,ಯಾವ ವಿದ್ಯಾರ್ಥಿ ಕಷ್ಟಪಟ್ಟು ಓದುತ್ತಾನೆ. ಅವನು ಮುಂದೆ ಬರುತ್ತಾನೆ. ಹಾಗಾಗಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ. ಅಪರಾಧಗಳು ನಡೆದಾಗ112 ಗೆ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಪೊಲೀಸ್ ವಾಹನ ಬರುತ್ತದೆ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಪಿ.ದುರುಗೇಶ್ ಮಾತನಾಡಿದರು. ಉಪನ್ಯಾಸಕರಾದ ಚಂದ್ರಪ್ಪ, ನಾಗರಾಜ್, ವಿನಾಯಕ್, ಪ್ರಭಾಕರ್, ಈಶಪ್ಪ, ವಸಂತ್, ಪೊಲೀಸ್ ಇಲಾಖೆಯ ರವಿನಾಯ್ ಹರೀಶ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪರುಶುರಾಮ್, ಈಡಿಗರ ಅಜ್ಜಯ್ಯ ಇದ್ದರು.ಹರಪನಹಳ್ಳಿ ತಾಲೂಕಿನ ಅರಸೀಕೆರೆಯ ಎಸ್‌ಎಂಸಿಕೆ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸೈಬರ್ ಕ್ರೈಮ್, ಮಕ್ಕಳ ಸಂರಕ್ಷಣೆ, ಬಾಲ್ಯವಿವಾಹ, ರಸ್ತೆ ಅಪಘಾತ ತಡೆ, ಪೋಕೋ ಪ್ರಕರಣ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಜಯಕೃಷ್ಣ ಮಾತನಾಡಿದರು.