ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಮಾಡಾಳು ಗ್ರಾಮದ ಶ್ರೀಸ್ವರ್ಣಗೌರಿ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಜನರು ಸ್ವತಂತ್ರವಾಗಿ ಬದುಕಲು ಸಂವಿದಾನ ಮುಖ್ಯ ಕಾರಣ. ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಜನತೆಗೆ ಹಕ್ಕುಗಳು, ಸಮಾನತೆಯ ತತ್ವಗಳಲ್ಲಿ ಆದರ್ಶಗಳನ್ನು ಪಾಲಿಸಬೇಕು. ಭಾರತೀಯ ಸಂವಿಧಾನ ಭಾರತೀಯ ಪ್ರಜೆಗಳ ಶಕ್ತಿ. ವಿದ್ಯಾರ್ಥಿಗಳು ಸಂವಿಧಾನದ ಸಂಪೂರ್ಣ ಜ್ಞಾನ ಹೊಂದುವುದು ಅತ್ಯಗತ್ಯ ಎಂದರು
ಗ್ರಾಮದ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಮೇಶ್ ಮಾತನಾಡಿ, ಭಾರತವು ಸರ್ವಭೌಮ ಸಮಾಜದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಂಡಿದೆ. ಎಲ್ಲ ಪ್ರಜೆಗಳ ಹಾಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕಿಸಿಕೊಟ್ಟಿದೆ ಎಂದು ತಿಳಿಸಿದರುಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವದೇವು ಮಾತನಾಡಿದರು. ಕಣಕಟ್ಟೆಯಿಂದ ಬಂದ ಸಂವಿಧಾನದ ರಥವನ್ನು ಸರ್ಕಾರಿ ಅಸ್ಪತ್ರೆ ಮುಂಬಾಗದಲ್ಲಿ ಎಲ್ಲಾ ಮುಖಂಡರು ಅದ್ಧೂರಿಯಾಗಿ ಬರಮಾಡಿಕೊಂಡರು.
ಇನ್ನೂ ಕೆಲ ಸ್ಥಳೀಯ ದಲಿತ ಮುಖಂಡರ ಕೊರತೆಯಿಂದ ಅಲ್ಲಿ ಬಂದಿದ್ದ ದಲಿತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಶ್ರೀಸ್ವರ್ಣಗೌರಿ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಕುರುವಂಕ ಸರ್ಕಾರಿ ಕಾಲೇಜಿನ ಉಪನ್ಯಾಸಕ ರಘು ಮಾತನಾಡಿದರು