ಒಗ್ಗಟ್ಟಿದ್ದರೆ ಎಲ್ಲ ಕೆಲಸವೂ ಸುಲಭ: ಕೆ. ಮಹೇಶ

KannadaprabhaNewsNetwork |  
Published : Mar 17, 2026, 02:15 AM IST
ಕಾರ್ಯಕ್ರಮವನ್ನು ಕೆ. ಮಹೇಶ ಉದ್ಘಾಟಿಸಿದರು. | Kannada Prabha

ಸಾರಾಂಶ

, ಸದಾನಂದ ಕನವಳ್ಳಿ ಅವರು ಲಕ್ಷ್ಮೇಶ್ವರದ ಎಂಎ ಕಾಲೇಜಿನ ಪ್ರಾಚಾರ್ಯರಾಗಿ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಕ್ರೀಡೆ, ಸಾಹಿತ್ಯ, ಸಂಗೀತ ಕ್ಷೇತ್ರಗಳ ದಿಗ್ಗಜರನ್ನು ಲಕ್ಷ್ಮೇಶ್ವರಕ್ಕೆ ಕರೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಲಕ್ಷ್ಮೇಶ್ವರ: ಎಂಥ ಕಷ್ಟ ಇದ್ದರೂ ಒಗ್ಗಟ್ಟಿದ್ದರೆ ಸುಲಭವಾಗಿ ಎದುರಿಸಲು ಸಾಧ್ಯ ಎಂದು ರಾಯಚೂರಿನ ಸದಾನಂದ ಕನವಳ್ಳಿ ಆರ್ಟ್ ಫೌಂಡೇಷನ್‌ನ ಕಾರ್ಯದರ್ಶಿ ಕೆ. ಮಹೇಶ ತಿಳಿಸಿದರು.

ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ಮೈತ್ರಿ- ೮೫ ಬಳಗ ಮತ್ತು ರಾಯಚೂರಿನ ಸದಾನಂದ ಕನವಳ್ಳಿ ಆರ್ಟ್ ಫೌಂಡೇಷನ್ ಆಶ್ರಯದಲ್ಲಿ ಜರುಗಿದ ಮಹಿಳಾ ದಿನಾಚರಣೆ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈತ್ರಿ- ೮೫ ಬಳಗ ಕಳೆದ ಆರೇಳು ವರ್ಷಗಳಿಂದ ಉತ್ತಮ ಕೆಲಸ ಮಾಡುತ್ತಿದ್ದು, ಬಳಗದಿಂದ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳು ನಡೆಯಲಿ ಎಂದರು. ಲಕ್ಷ್ಮೇಶ್ವರದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮಾತನಾಡಿ, ಸದಾನಂದ ಕನವಳ್ಳಿ ಅವರು ಲಕ್ಷ್ಮೇಶ್ವರದ ಎಂಎ ಕಾಲೇಜಿನ ಪ್ರಾಚಾರ್ಯರಾಗಿ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಕ್ರೀಡೆ, ಸಾಹಿತ್ಯ, ಸಂಗೀತ ಕ್ಷೇತ್ರಗಳ ದಿಗ್ಗಜರನ್ನು ಲಕ್ಷ್ಮೇಶ್ವರಕ್ಕೆ ಕರೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಮಾತನಾಡಿ, ಸಂಘ ಸಂಸ್ಥೆಗಳು ಸಮಾಜಕ್ಕೆ ಉಪಯೋಗ ಆಗುವ ಕೆಲಸಗಳನ್ನು ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮೈತ್ರಿ- ೮೫ ಬಳಗ ಸಾಹಿತ್ಯ, ಸಂಗೀತ, ಮಹಿಳಾ ದಿನ, ಪರಿಸರ ದಿನಾಚರಣೆಯಂಥ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದರು.ಡಾ. ರೇಣುಕಾ ಎಲ್. ನಾಯಕ, ಎಚ್.ಎನ್. ಕೆರೂರ, ಮೈತ್ರಿ- ೮೫ ಬಳಗದ ಅಧ್ಯಕ್ಷ ಸುರೇಶ ಚೋಟಗಲ್ಲ, ಕಾರ್ಯದರ್ಶಿ ಮಹಾದೇವ ಪವಾರ ಮಾತನಾಡಿದರು.

ಎಸ್.ಎಸ್. ವಡಕಣ್ಣವರ ಸ್ವಾಗತಿಸಿದರು. ಬಿ.ಎಸ್. ಹೆಬ್ಬಾಳ ವಂದಿಸಿದರು. ನಂತರ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಸರಿತಾ ಮಹೇಶ ರಾಗ ಜೋಗ್‌ನೊಂದಿಗೆ ಕಾರ್ಯಕ್ರಮ ಶುರು ಮಾಡಿ ವಚನ ಹಾಗೂ ಕನಕದಾಸರ ಕೀರ್ತನೆ ಹಾಡಿದರು. ನಂತರ ವೆಂಕಟೇಶ ಪಾಟೀಲ ಅವರು ರಾಗ ಪೂರಿಯಾ ಕಲ್ಯಾಣಿಯೊಂದಿಗೆ ಸಂಗೀತ ಸೇವೆ ಆರಂಭಿಸಿ ಕೊನೆಯಲ್ಲಿ ಬೈರವಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿರು. ಕೃಷ್ಣಕುಮಾರ ಕುಲಕರ್ಣಿ ತಬಲಾ, ಅರ್ಜುನ ವಠಾರದ ಹಾರ್ಮೋನಿಯಂ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ