ಸರ್ಕಾರಿ ವಸತಿಗೃಹಗಳ ಬಾಡಿಗೆ ಪಾವತಿಸದವರ ಹೊರಹಾಕಿ

KannadaprabhaNewsNetwork |  
Published : Oct 11, 2026, 02:45 AM IST
10ಎಚ್ಎಸ್ಎನ್16 :  | Kannada Prabha

ಸಾರಾಂಶ

ಶ್ರವಣಬೆಳಗೊಳದಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿಗೃಹಗಳಲ್ಲಿ ಬೇರೆ ಇಲಾಖೆ ಸಿಬ್ಬಂದಿ ಕಳೆದ ೨೦ ವರ್ಷದಿಂದ ವಾಸವಿದ್ದು, ಇನ್ನೂ ೫.೫ ಲಕ್ಷ ರು. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಬಾಡಿಗೆ ಕಟ್ಟದವರ ಮನೆ ಖಾಲಿ ಮಾಡಿಸಿ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಿಂದಿನ ಸಭೆಯ ನಡಾವಳಿಗಳ ಆಗುಹೋಗುಗಳ ಬಗ್ಗೆ ಮೊದಲು ಪರಾಮರ್ಶೆ ನಡೆಯಬೇಕು ಎಂದು ಪಟ್ಟುಹಿಡಿದ ಎಲ್ಲ ನಾಮನಿರ್ದೇಶಿತ ಸದಸ್ಯರು ಕಳೆದ ಸಭೆಯ ನಡಾವಳಿಗಳನ್ನು ಇಂದು ಸಭೆಗೆ ನೀಡಿದರೆ ಚರ್ಚೆ ಮಾಡುವುದು ಹೇಗೆ? ಎಂದು ಇಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಶ್ರವಣಬೆಳಗೊಳದಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ವಸತಿಗೃಹಗಳಲ್ಲಿ ಬೇರೆ ಇಲಾಖೆ ಸಿಬ್ಬಂದಿ ಕಳೆದ ೨೦ ವರ್ಷದಿಂದ ವಾಸವಿದ್ದು, ಇನ್ನೂ ೫.೫ ಲಕ್ಷ ರು. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಬಾಡಿಗೆ ಕಟ್ಟದವರ ಮನೆ ಖಾಲಿ ಮಾಡಿಸಿ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ವಿಷಯ ಪ್ರಸ್ತಾಪಿಸಿ ಕಳೆದ ಸಭೆಯಲ್ಲೇ ಈ ಬಗ್ಗೆ ಚರ್ಚಿಸಿದರೂ ಯಾವುದೇ ಇತ್ಯರ್ಥವಾಗಿಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದ ಅಧಿಕಾರಿಗೆ ಶಾಸಕರು ಬಾಡಿಗೆ ವಸೂಲಿ ಮಾಡುವಂತೆ ಸೂಚನೆ ನೀಡಿದರು. ”ಕನಿಷ್ಠ ಬಾಡಿಗೆಗೆ ಮನೆಗಳನ್ನು ನೀಡಿದ್ದರೂ ಪ್ರತಿ ತಿಂಗಳಿಗೆ ೪೦ ಸಾವಿರ ರು. ಬರಬೇಕಿದ್ದು, ಕೇವಲ ೧೧ ಸಾವಿರ ರು. ಮಾತ್ರ ಪಾವತಿ ಯಾಗುತ್ತಿದೆ. ಇದರಿಂದ ಸರಕಾರಕ್ಕೆ ನಷ್ಟವಾಗುತ್ತಿದೆ. ಈ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಬಿಗಿಪಟ್ಟುಹಿಡಿದರು. ಇದೂ ಕೂಡ ಅಭಿವೃದ್ಧಿಯ ಒಂದು ಭಾಗವೇ ಆಗಿದ್ದು, ಈ ಚರ್ಚೆ ಫಲಪ್ರದವಾಗಬೇಕು,” ಎಂದರು.

ಸುದೀರ್ಘ ಚರ್ಚೆ:

ಹಿಂದಿನ ಸಭೆಯ ನಡಾವಳಿಗಳ ಆಗುಹೋಗುಗಳ ಬಗ್ಗೆ ಮೊದಲು ಪರಾಮರ್ಶೆ ನಡೆಯಬೇಕು ಎಂದು ಪಟ್ಟುಹಿಡಿದ ಎಲ್ಲ ನಾಮನಿರ್ದೇಶಿತ ಸದಸ್ಯರು ಕಳೆದ ಸಭೆಯ ನಡಾವಳಿಗಳನ್ನು ಇಂದು ಸಭೆಗೆ ನೀಡಿದರೆ ಚರ್ಚೆ ಮಾಡುವುದು ಹೇಗೆ? ಎಂದು ಇಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದರು.ಸುಮಾರು ೧ ಗಂಟೆಕಾಲ ಈ ಕುರಿತು ಚರ್ಚೆ ತಾಲೂಕಿನಲ್ಲಿ ರೈತಪರವಾದ ನಡೆಯಿತು. ಕೆಲಸಗಳು ಆಗುತ್ತಿಲ್ಲ, ಜಿಲ್ಲಾಧಿಕಾರಿಗಳು ಮಿಸ್ಸಿಂಗ್ ಫೈಲ್ ಕುರಿತಂತೆ ಪರಾಮರ್ಶೆ ನಡೆಸಲು ಇನ್ನೂ ಸಮಿತಿಯನ್ನೇ ರಚಿಸಿಲ್ಲ. ಇದುವರೆಗೆ ಎಸ್‌ಐಆರ್‌ ಕಾರಣವಾಯಿತು. ಇನ್ನುಮುಂದೆ ಹಾಸನಾಂಬಾ ಮಹೋತ್ಸವದ ಹೆಸರು ಹೇಳಿಕೊಂಡು ಸಾರ್ವ ಜನಿಕರ ಕೆಲಸಗಳನ್ನು ಮುಂದೂಡಲಾಗುವುದು. ಇದಕ್ಕೆ ಅವಕಾಶ ಕೊಡದೆ ಜಿಲ್ಲಾಧಿಕಾರಿಗಳು ನಮ್ಮ ತಾಲೂಕಿನ ಸಿಬ್ಬಂದಿಯನ್ನು ಹಾಸನಾಂಬಾ ಉತ್ಸವಕ್ಕೆ ದೀರ್ಘಕಾಲದ ಚರ್ಚೆಯಿಂದ ಬೇಸರಗೊಂಡ ಶಾಸಕರು, ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಿ ಕೊಂಡು ಹೋಗುತ್ತಿದ್ದರೆ ಅದಕ್ಕೆಲ್ಲಾ ಇಲ್ಲಿ ಉತ್ತರ ಕೊಡಲು ಆಗುವುದಿಲ್ಲ. ಎಲ್ಲ ಇಲಾಖೆಗಳ ಆಡಿಟ್ ಇಲ್ಲಿ ಮಾಡಲು ಆಗುವುದಿಲ್ಲ, ಅಭಿವೃದ್ಧಿ ವಿಚಾರ ಚರ್ಚೆಮಾಡಿ ಎಂದರೆ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ. ನಿಮ್ಮನ್ನು ಕೇಳಿ ಅಭಿವೃದ್ಧಿ ಮಾಡಲಾಗುವುದಿಲ್ಲ ಎಂದು ನಾಮನಿರ್ದೇಶಿತ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಕೆಲಕಾಲ ವಾಗ್ವಾದವೂ ನಡೆಯಿತು.ನಾಮನಿರ್ದೇಶಿತ ಸದಸ್ಯರ ವಿರುದ್ಧ ಆಕ್ರೋಶ:ಅಸಮಾಧಾನ ವ್ಯಕ್ತಪಡಿಸಿ ಎಲ್ಲ ಅಂಗಡಿಗಳಲ್ಲೂ ದರಪಟ್ಟಿ ಅಳವಡಿಸಿಲ್ಲ. ಬೆಳಗಿನ ಜಾವ ೪ ಗಂಟೆಯಿಂದಲೇ ಮದ್ಯಮಾರಾಟ ಆರಂಭಿಸುತ್ತಿದ್ದಾರೆ. ಇಂತಹ ಅನೇಕ ನಿಯಮಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ ಎಂದರು.ಹಿರೀಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿವೇಳೆ ಒಳರೋಗಿಗಳಿಗೆ ಊಟದ ವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ತಾಲೂಕು ಆರೋಗ್ಯಾಧಿಕಾರಿಗಳು ಪರಿಶೀಲಿಸಿ ತಿಳಿಸುವುದಾಗಿ ಹೇಳಿದರು. ಸರಕಾರಿ ಆಸ್ಪತ್ರೆ ಕುರಿತು ಮಾತನಾಡಿದ ಶಾಸಕರು, ಇಲ್ಲಿನ ಆಸ್ಪತ್ರೆಗೆ ಸರಕಾರದಿಂದ ಔಷಧ ಗಳಿಗೆ ಹಣ ಬರುತ್ತಿಲ್ಲ. ಎಬಿಎಆರ್‌ಕೆಯಿಂದಲೇ ಔಷಧಗಳ ಪಾರದರ್ಶಕವಾಗಿ ಸಂಗ್ರಹವಾದ ಹಣದಲ್ಲೇ ಖರೀದಿಯನ್ನು ಮಾಡಲಾಗುತ್ತಿದೆ. ಈವರೆಗೆ ೨.೨೨ ಕೋಟಿ ರು. ಸಂಗ್ರಹವಾಗಿದ್ದು ಯಾವುದಕ್ಕೂ ಕೊರತೆಯಿಲ್ಲದಂತೆ ನಡೆಸಲಾಗುತ್ತಿದೆ. ಇತ್ತೀಚೆಗೆ ಸರಕಾರವೇ ಆರಂಭಮಾಡಿದ ಕೆಪಿಎಸ್ ಶಾಲೆಗಳಿಗೆ ಯಾವುದೇ ಹೆಚ್ಚುವರಿ ಅನುದಾನವನ್ನೂ ನೀಡಿಲ್ಲ ಎಂದರು.

ನಾಮನಿರ್ದೇಶಿತ ಸದಸ್ಯರಾದ ಕಬ್ಬಾಳು ಮಹೇಶ್, ಯೋಗೇಶ್, ಪುರುಷೋತ್ತಮ, ಮಧುಸೂದನ್, ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ತಾಪಂ ಇಒ ಜಿ.ಆರ್. ಹರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಉತ್ತರ’ ಗೊಂದಲ ಕೆಪಿಎಸ್ಸಿ ಅಕ್ರಮ ಬೆಳಕಿಗೆ ಮೂಲ!
ಬ್ಯಾಂಕಾಕ್‌ ಪ್ರವಾಸಿಗರಿಂದ ₹1.73 ಕೋಟಿ ಡ್ರಗ್ಸ್‌ ಜಪ್ತಿ