ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ದೇವಿಗೆರೆಯಲ್ಲಿ ಯಾವ ರೀತಿ ನಡೆದುಕೊಂಡು ಬಂದಿದೆ ಜತೆಗೆ ಹಲವಾರು ಗಣಪತಿಗಳನ್ನು ಬಿಟ್ಟಿದ್ದಾರೆ. ಜಿಲ್ಲಾಧಿಕಾರಿ ಅವರು ಗಣಪತಿ ವಿಸರ್ಜನೆ ವಿಷಯದಲ್ಲಿ ಎಸ್‌ಪಿಗೆ ನೋಟಿಸ್ ಕೊಡ್ತಾರೆ. ಐಪಿಎಸ್ ಅಧಿಕಾರಿಗೆ ನೋಟಿಸ್ ಕೊಡ್ತೀರಾ, ಹೀಗಾದರೆ ಈ ಜಿಲ್ಲೆಯಲ್ಲಿ ಆಡಳಿತ ಹೇಗೆ ನಡೆಸುತ್ತೀರಿ? ಅವರಿಗೆ ಜವಾಬ್ದಾರಿ ಇಲ್ವಾ? ಎಸ್ಪಿ ಜಿಲ್ಲಾಧಿಕಾರಿ ಕೈ ಕೆಳಗೆ ಕೆಲಸ ಮಾಡಬೇಕಾ? ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಇದ್ದರೆ ಹೇಗೆ ಮಾಡುತ್ತೀರಾ? ಹೀಗಾದರೆ ಜನಸಾಮಾನ್ಯರ ಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ? ಇಷ್ಟೊಂದು ಸಂಘರ್ಷ ಮಾಡಿಕೊಂಡರೆ ಹೇಗೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆಡಳಿತ ಕೊಲ್ಯಾಪ್ಸ್ ಆಗುತ್ತೆ ಎಂದು ಎಚ್ಚರಿಸಿ, ಈ ರೀತಿ ನೋಟೀಸ್ ಕೊಟ್ಟಿರುವುದಕ್ಕೆ ಮೇಲಾಧಿಕಾರಿಗಳು ಸ್ಪಂದಿಸಬೇಕು ಎಂದರು.ಈ ವರ್ಷ ಕಂಡಿರಿಯದ ಬರಗಾಲ :
ರಾಜ್ಯದಲ್ಲಿ ಈ ವರ್ಷ ಕಂಡಿರಿಯದ ಬರಗಾಲ ಬಂದಿದೆ ಹಾಗೂ ಹಿಂದೆಂದೂ ಈ ರೀತಿ ಬರಗಾಲ ಇರಲಿಲ್ಲ. ಕಂದಾಯ ಸಚಿವರು ಸುಮಾರು ೪೫ ಸಾವಿರ ಕೋಟಿ ಬೆಳೆ ನಷ್ಟ ಆಗಿದೆ ಎಂದು ಹೇಳಿದ್ದಾರೆ ಮತ್ತು ಕೇಂದ್ರ ತಂಡ ಬಂದು ಬರ ಅಧ್ಯಯನ ಮಾಡಿ ತೆರಳಿದ್ದಾರೆ. ಆದರೆ ಈ ರೀತಿಯ ತೀವ್ರ ಬರಗಾಲವನ್ನು ನಿರ್ವಹಣೆ ಮಾಡುವುದನ್ನು ಬಿಟ್ಟು ಬರೀ ಹೇಳಿಕೆಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ ಜತೆಗೆ ಬೇರೆ ರೀತಿಯ ಹಲವಾರು ವಿ?ಯಗಳಿಗೆ ಪ್ರಮುಖ್ಯತೆ ಕೊಡುತ್ತಿದ್ದಾರೆ. ಕುಡಿಯುವ ನೀರಿಗೆ ₹ ೩೬೦ ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಆದರೆ ಹಲವಾರು ಗ್ರಾಮಗಳಲ್ಲಿ ರೈತರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಜತೆಗೆ ಈ ಸರ್ಕಾರದ ಸ್ಪಂದನೆ ಕಾಣುತ್ತಿಲ್ಲ.ಪಂಚಾಯಿತಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಹದಿನಾರು ಹಣಕಾಸು ಅನುದಾನ ಸಿಕ್ಕಿಲ್ಲ, ಇದರಿಂದ ಪಂಚಾಯ್ತಿ ಸಿಬ್ಬಂದಿಗೆ ಸಂಬಳ ಕೊಡಲು ಇವರ ಬಳಿ ಹಣ ಇಲ್ಲ ಎಂದು ಮೂದಲಿಸಿದರು. ಎನ್‌ಡಿಆರ್‌ಎಫ್ ಅಡಿಯಲ್ಲಿ ೮ ಸಾವಿರದಿಂದ ೨೫ ಸಾವಿರ ಪರಿಹಾರ ಕೊಡಲು ಗೈಡ್‌ಲೈನ್ಸ್ ಇದೆ. ಆದರೆ ರಾಜ್ಯ ಸರ್ಕಾರ ಕೇವಲ ೨೫೦೦ ರು. ಘೋಷಣೆ ಮಾಡಿದ್ದಾರೆ, ಘೋಷಣೆ ಮಾಡಿರುವ ೧೨೦೦ ಕೋಟಿ ರು. ಇನ್ನೂ ಬಿಡುಗಡೆ ಆಗಿಲ್ಲ, ಬರಿ ಇನ್ನೂ ಘೋಷಣೆಯಲ್ಲಿದೆ, ಹಣ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು. ೩೫ ವಾರಕ್ಕೆ ಮೇವು ಇದೆ ಅಂತೀರಾ, ಅಧಿಕಾರಿಗಳು ಹೇಗೆ ಹೇಳಿದ್ರು ಅಂಥ ಚರ್ಚೆ ಮಾಡುತ್ತಿದಾರೆ. ಸಂಕಷ್ಟಕ್ಕೆ ಸಲುಕಿದ ನಮ್ಮ ರೈರು ಕಡಿಮೆ ಹಣಕ್ಕೆ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಸರ್ಕಾರಕ್ಕೆ ಇದ್ಯಾವುದರ ಬಗ್ಗೆ ಗಮನ ಇಲ್ಲ ಎಂದರು. ಬರಗಾಲಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿವೆ, ಅತ್ಯಂತ ಧಾರುಣವಾಗಿ ಜನರು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.ಹುಡುಗಾಟಿಕೆ ರಾಜಕಾರಣ ಮಾಡಿಕೊಂಡಿದ್ದೀರಾ?:
ಬಾಕ್ಸ್::: ಬರಗಾಲದ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಎಚ್ಚರಿಕೆ ಕೊಡಬೇಕಿತ್ತು:
ಒಬ್ಬ ಮುಖ್ಯಮಂತ್ರಿ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಸಕರು ಇಲ್ಲಿ ಬಂದು ಎರಡನೇ ಮದುವೆ ಮಾಡಿಕೊಂಡು ಊರಿಗೆ ಹೋಗಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಒಬ್ಬ ಮುಖ್ಯಮಂತ್ರಿ ಹೇಳ್ತಾರೆ ಅಂದರೆ, ಅದನ್ನು ಸಹಿಸಿಕೊಂಡು ಕಾಂಗ್ರೆಸ್‌ನವರು ಇದ್ದಾರೆ ಅಂದರೆ, ಅವರ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿಕೊಂಡಿದ್ದಾರೆ. ಈ ಒಂದು ವಾತಾವರಣ ನಿರ್ಮಾಣ ಮಾಡಲು ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಪಕ್ಷ ಕಾರಣ ಎಂದರು.