ಶಿಕ್ಷಕರ ಭಡ್ತಿಗೆ ಪರೀಕ್ಷೆ ಅರ್ಥಹೀನ: ಭೋಜೇಗೌಡ

KannadaprabhaNewsNetwork |  
Published : Sep 06, 2025, 01:01 AM IST
ಶಿಕ್ಷಕರದಿನ | Kannada Prabha

ಸಾರಾಂಶ

ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮ ದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಬೆಳ್ತಂಗಡಿ: ಸಮಾಜದಲ್ಲಿ ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ಸರ್ಕಾರಿ ವೃತ್ತಿಗೆ ನೇಮಕವಾಗುವುದೇ ಅರ್ಹತೆಯಡಿಯಲ್ಲಿ. ಕೇವಲ ಶಿಕ್ಷಕರ ಭಡ್ತಿಗಾಗಿ ಪರೀಕ್ಷೆ ಮಾಡುವುದು ಅರ್ಥವಿಲ್ಲದ ನಡೆಯಾಗಿದೆ. ಇದನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ.

ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮ ದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ಅನೇಕ ಸಮಸ್ಯೆಗಳ ಮಧ್ಯೆಯೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ರಾಜ್ಯವನ್ನು ಶಾಂತಿಯ ತೋಟ ಮಾಡುವಲ್ಲಿ ತಮ್ಮ ಸಂಪೂರ್ಣ ಶ್ರಮ ವಿನಿಯೋಗ ಮಾಡುವಲ್ಲಿ ಶ್ರಮಿತರಾದ ಶಿಕ್ಷಕಿರಿಗೆ ನೆಮ್ಮದಿ ಹಾಗೂ ಸಕಲ ಸೌಲಭ್ಯ ನೀಡಬೇಕಾದುದು ಸರ್ಕಾರದ ಅಧ್ಯ ಕರ್ತವ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಶಾಲೆ -ಶಿಕ್ಷಕ- ಸಂಸ್ಕಾರ ಇವುಗಳ ಮಧ್ಯೆ ಇರುವ ಸಂಬಂಧ ದೂರವಾಗಿದೆ. ಮನೆ ಮನೆಯಲ್ಲಿ ಭಾಷೆಯ ಹೆಸರಿನಲ್ಲಿ ನಮ್ಮತನ ಕಳೆದುಕೊಳ್ಳುತ್ತಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ನಿವೃತ್ತಿಗೆ ಸರಿ ಸಮಾನವಾಗಿ ನೇಮಕಾತಿ ಆಗುತ್ತಿಲ್ಲ. ನಲಿಕಲಿ ಶಿಕ್ಷಣ ವ್ಯವಸ್ಥೆ ದೂರವಾಗಿ ಪ್ರತಿ ತರಗತಿಗೆ ಓರ್ವ ಶಿಕ್ಷಕರನ್ನು ನೇಮಕ ಮಾಡಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜೇಶ್ವರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಯಾನಂದ ಸುವರ್ಣ, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಜ್ಞಾನೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಭುವನೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಮನೋರಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಯರಾಜ್ ಜೈನ್, ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಸದಾನಂದ ಪೂಂಜ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ, ಸರ್ವ ಶಿಕ್ಷಣ ಅಭಿಯಾನದ ಬಸವಲಿಂಗಪ್ಪ, ತಾಲೂಕು ಅಕ್ಷರ ದಾಸೋಹ ಯೋಜನೆಯ ನಿರ್ದೇಶಕ ರಾಜೇಂದ್ರ ಕೃಷ್ಣ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಲಿಲ್ಲಿ ಫಯಾಸ್, ಮುಖ್ಯೋಪಾಧ್ಯಯರ ಸಂಘದ ಜಿಲ್ಲಾಧ್ಯಕ್ಷ ಲಿಂಗರಾಜು, ಚಿತ್ರಕಲಾ ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ, ಜಿಪಿಟಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್, ಪ್ರೌಢಶಾಲಾ ಸಂಘದ ಕಾರ್ಯದರ್ಶಿ ಮಾರ್ಕ್, ತಾಲ್ಲೂಕು ದೈಹಿಕ ಶಿಕ್ಷಕರ ಪರಿವೀಕ್ಷಣಾಧಿಕಾರಿ ಸುಜಯಾ, ಗ್ರೇಡ್ 1 ಮತ್ತು ಗ್ರೇಡ್ 2 ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರುಗಳಾದ ಕರುಣಾಕರ ಹಾಗೂ ರವಿರಾಜ್, ಅನುದಾನಿತ ಪದವಿಪೂರ್ವ ಕಾಲೇಜುಗಳ ಜಿಲ್ಲಾಧ್ಯಕ್ಷ ಸೋಮಶೇಖರ ನಾಯಕ್ ಇದ್ದರು.

ಪ್ರಶಸ್ತಿ ಪುರಸ್ಕೃತರು:ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಾಂಡೇಶ್ವರ ಶಾಲೆಯ ಶಾಲಿನಿ ಎಚ್.ಕೆ., ತಿಪ್ಪಬೆಟ್ಟು ಶಾಲೆಯ ವೀಣಾ ಮೇರಿ ರೇಗೊ, ಮೂಡುಬಿದಿರೆ ಮಾರ್ಪಾಡಿ ನಡ್ಯೋಡಿ ಶಾಲೆಯ ಉಷಾಲತಾ ಹೆಗ್ಡೆ , ಬಂಟ್ವಾಳ ಪಡೂರು ದೇವಸ್ಯ ಶಾಲೆಯ ಶಾಂತಿ ಲೀನಾ, ಸುರ್ಯ ಶಾಲೆಯ ಜಯಾ ಕೆ., ಪುತ್ತೂರು ಅರೆಡಿ ಶಾಲೆಯ ಜಗನ್ನಾಥ ಎಸ್., ಅಮೈ, ಸುಳ್ಯ ಬೆಂಡೋಡಿ ಶಾಲೆಯ ಲಲಿತಾ ಕುಮಾರಿ ಎಸ್. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬೈಕಂಪಾಡಿ ಶಾಲೆಯ ಜಯಲಕ್ಷ್ಮಿ, ಸೋಮೇಶ್ವರ ಉಚ್ಚಿಲಗುಡ್ಡ ಶಾಲೆಯ ಚಂದ್ರಶೇಖರ ಸಿ.ಎಚ್. , ಮೂಡಬಿದಿರೆ ನೆಲ್ಲಿಕಾರು ಶಾಲೆಯ ಹರೀಶ ಕೆ.ಎಂ., ಬಂಟ್ವಾಳ ನೀರ್ಕಜೆ ಕೇವು ಶಾಲೆಯ ಬಾಬು ನಾಯ್ಕ ಬಿ, ಬೆಳ್ತಂಗಡಿ ನಿಟ್ಟಡೆ ಶಾಲೆಯ ಆರತಿ ಕುಮಾರಿ, ಪುತ್ತೂರು ವೀರಮಂಗಲ ಶಾಂತಿಗೋಡು ಶಾಲೆಯ ತಾರಾನಾಥ, ಸುಳ್ಯ ದೇವಚಳ್ಳ ಶ್ರೀಧರ ಗೌಡ, ಪ್ರೌಢಶಾಲಾ ವಿಭಾಗದಲ್ಲಿ ಮಂಗಳೂರು ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ವಿಲ್ಮಾ ಪಿ. ಲೋಬೊ, ಮಂಗಳೂರು ಪೆರ್ಮನ್ನೂರು ಶಾಲೆಯ ದುರ್ಗಾಲತಾ, ಮೂಡಬಿದಿರೆ ಪ್ರಾಂತ್ಯ ಶಾಲೆಯ ರತ್ನಾವತಿ ಆಚಾರ್ ಕೆ. ಬಂಟ್ವಾಳ ಸರಪಾಡಿ ಶಾಲೆಯ ಆದಂ, ಬೆಳ್ತಂಗಡಿ ಪೆರ್ಲ ಬೈಪಾಡಿ ಶಾಲೆಯ ವಿಜಯ ಕುಮಾರ್ ಎಂ., ಸುಳ್ಯ ಎಣ್ಮೂರು ಶಾಲೆಯ ಮೋಹನ ಎ. ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2024ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ್ ಕೆ.ವಿಟ್ಲ ಹಾಗೂ ಯಮುನಾ ಕೆ.,ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಡ ಪ್ರೌಢ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮೋಹನ್ ಬಾಬು, ಸವಣಾಲು ಅನುದಾನಿತ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಜಿ. ಹಾಗೂ ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ., ಮತ್ತು ಕಳೆದ ಸಾಲಿನಲ್ಲಿ ನಿವೃತ್ತಿ ಹೊಂದಿದ 29ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪೈಕಿ ನಿಟ್ಟಡೆ ಶಾಲೆಯ ಆರತಿ ಕುಮಾರಿ ದೈಹಿಕ , ಸನ್ಮಾನಿತ ನಿವೃತ್ತ ಶಿಕ್ಷಕಿ ರಾಜಶ್ರೀ ಅನಿಸಿಕೆ ವ್ಯಕ್ತಪಡಿಸಿದರು.ಬಿ. ರಾಜಶೇಖರ ಆಜ್ರಿ ದತ್ತಿ ನಿಧಿ ಸಮರ್ಪಣೆ ಮಾಡಿದರು. ಅನಸೂಯ ಪಾಟಕ್ ಮತ್ತು ಬಳಗದವರು ನಾಡಗೀತೆ ಹಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಸ್.ಶಶಿಧರ್ ಪ್ರಸ್ತಾವಿಸಿ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ದಿನಾಚರಣೆಯ ನೋಡಲ್ ಅಧಿಕಾರಿ ಲಕ್ಷ್ಮೀ ನಾರಾಯಣ ಸಂದೇಶ ವಾಚಿಸಿದರು. ಸರ್ಕಾರಿ ಪ್ರೌಢಶಾಲೆ ಗೇರುಕಟ್ಟೆಯ ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ವಂದಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ದಕ್ಷಿಣ ಕನ್ನಡ, ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಬೆಳ್ತಂಗಡಿ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!