ಎಕ್ಸೆಲ್ ಕಾಲೇಜು ನೀಟ್ ಟಾಪರ್ ಮೌರ್ಯಗೆ ಸನ್ಮಾನ

KannadaprabhaNewsNetwork |  
Published : Jul 21, 2026, 03:00 AM IST
ಸನ್ಮಾನ | Kannada Prabha

ಸಾರಾಂಶ

ರಾಷ್ಟ್ರ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್-2026’, ರಾಜ್ಯ ಮಟ್ಟದ ‘ಕೆ-ಸಿಇಟಿ’ ಹಾಗೂ ‘ಜೆಇಇ ಮೇನ್ಸ್’ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿ ಮೌರ್ಯ ವೈ.ಡಿ. ಅವರನ್ನು ⁠ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.

ಬೆಳ್ತಂಗಡಿ: ರಾಷ್ಟ್ರ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್-2026’, ರಾಜ್ಯ ಮಟ್ಟದ ‘ಕೆ-ಸಿಇಟಿ’ ಹಾಗೂ ‘ಜೆಇಇ ಮೇನ್ಸ್’ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿ ಮೌರ್ಯ ವೈ.ಡಿ. ಅವರನ್ನು ⁠ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.ಮೌರ್ಯ ನೀಟ್ ಪರೀಕ್ಷೆಯಲ್ಲಿ ಒಟ್ಟು 720 ಅಂಕಗಳಿಗೆ 673 ಅಂಕಗಳನ್ನು ಗಳಿಸಿ, 99.6691 ಪರ್ಸೆಂಟೈಲ್ ನೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 271 ನೇ ರ್‍ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ. ಕೆ-ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 75 ನೇ ರ್‍ಯಾಂಕ್‌ ಪಡೆದಿದ್ದಾರೆ. ಜೆ ಇ ಇ ಮೇನ್ಸ್ ಪ್ರವೇಶ ಪರೀಕ್ಷೆಯಲ್ಲೂ 99.6691ಪರ್ಸೆಂಟೈಲ್ ಗಳಿಸಿ ಜಿಲ್ಲಾ ಟಾಪರ್ ಆಗಿದ್ದಾರೆ.ಕೃತಜ್ಞತೆ ಸಲ್ಲಿಸಿದ ಸಾಧಕ: ಸನ್ಮಾನ ಸ್ವೀಕರಿಸಿ ಮಾತನಾಡಿದ ಮೌರ್ಯ, ಕ್ಸೆಲ್ ಸಂಸ್ಥೆಯ ಕಟ್ಟುನಿಟ್ಟಾದ ಶಿಸ್ತುಬದ್ಧ ವಾತಾವರಣ, ಪರಿಣಿತ ಉಪನ್ಯಾಸಕರು ತಡರಾತ್ರಿಯವರೆಗೂ ಲಭ್ಯವಿದ್ದು ನಮ್ಮ ಕಲಿಕೆಯಸಂಶಯ ಪರಿಹರಿಸುತ್ತಿದ್ದ ಪ್ರವೃತ್ತಿ ಮತ್ತು ನಿರಂತರ ಮಾದರಿ ಪರೀಕ್ಷೆಗಳೇ ನನ್ನ ಈ ಬಹುಮುಖ ಯಶಸ್ಸಿಗೆ ಭದ್ರ ಬುನಾದಿ ಎಂದರು.ವಿವಿಧ ವಿಭಾಗಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚಿದ ಎಕ್ಸೆಲ್ ಸಾಧಕರನ್ನು ಶ್ಲಾಘಿಸಿ, ಗೌರವಿಸಲಾಯಿತು.

ಎಕ್ಸೆಲ್ ಕಾಲೇಜಿನ 470ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಅವಕಾಶ ಗಳಿಸಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಸಂದ ಜಯ ಎಂದು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ಪ್ರಜ್ವಲ್, ನೀಟ್ ಸಂಯೋಜಕ ಶ್ರೀನಿಧಿ ರಾಜ್ ಶೆಟ್ಟಿ, ನಿಲಯ ಪಾಲಕ ಅಭಿಜಿತ್, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮೌರ್ಯ ವೈ.ಡಿ. ಅವರ ತಂದೆ ದರ್ಶನ್ ವೈ.ಎಂ., ತಾಯಿ ಎ.ಜೆ. ಸುವರ್ಣ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತಪರ ಯೋಜನೆ ಸ್ಥಗಿತ ಖಂಡಿಸಿ ಪ್ರತಿಭಟನೆ
ಶೇ.33ರಷ್ಟು ಮಹಿಳಾ ಮೀಸಲಾತಿಗೆ ಇಂದು ರಾಜಭವನ ಚಲೋ