ಉತ್ಕೃಷ್ಟತೆ ಕೌಶಲ್ಯ ಬಲವರ್ಧನೆ ಅಗತ್ಯ: ಕಮಿಷನರ್ ಸುಧೀರ್‌ ರೆಡ್ಡಿ

KannadaprabhaNewsNetwork |  
Published : Nov 13, 2025, 01:45 AM IST
11ಪೊಲೀಸ್ ಮಂಗಳೂರು ವಲಯ ಪೊಲೀಸ್ ಕರ್ತವ್ಯಕೂಟವನ್ನು ಸುಧೀರ್ ರೆಡ್ಡಿ ಉದ್ಘಾಟಿಸಿದರು. ನ | Kannada Prabha

ಸಾರಾಂಶ

ಡಾ. ಟಿ.ಎಂ. ಎ. ಪೈ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮಣಿಪಾಲ ಕೆಎಂಸಿ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ ಸೆಂಟರ್ ಸಹಯೋಗದಲ್ಲಿ ಮಂಗಳೂರು ವಲಯ ಮಟ್ಟದ 7ನೇ ಪೊಲೀಸ್ ಕರ್ತವ್ಯ ಕೂಟ ಸಂಪನ್ನಗೊಂಡಿತು.

ಮಣಿಪಾಲ: ಪೊಲೀಸ್ ಇಲಾಖೆಯಲ್ಲಿರುವ ಪ್ರತಿಯೊಬ್ಬರೂ ವೃತ್ತಿ ಸೇವೆಯಲ್ಲಿ ಶ್ರೇಷ್ಠತೆ, ಉತ್ಕೃಷ್ಠತೆಗಾಗಿ ಕೌಶಲ್ಯ ಬಲವರ್ಧನೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಡಾ. ಟಿ.ಎಂ. ಎ. ಪೈ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮಣಿಪಾಲ ಕೆಎಂಸಿ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ ಸೆಂಟರ್ ಸಹಯೋಗದಲ್ಲಿ ಮಂಗಳೂರು ವಲಯ ಮಟ್ಟದ 7ನೇ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೂ ವಹಿಸಿದ ಕೆಲಸ ಮಾಡಿಯೇ ತೀರುತ್ತೇನೆ, ನಿಜವಾದ ಅಪರಾಧಿ ಹಿಡಿಯುತ್ತೇನೆ ಎನ್ನುವ, ಗೆಲ್ಲುವ ಛಲ ಅಂತಿಮ ಕ್ಷಣದಲ್ಲೂ ಇರಬೇಕು. ಇದರಿಂದ ಮಾತ್ರ ಉತ್ತಮ ಪೊಲೀಸ್ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಮಣಿಪಾಲ ಕೆಎಂಸಿ ಡೀನ್ ಡಾ. ಅನಿಲ ಕೆ. ಭಟ್ ಮಾತನಾಡಿ, ಅನುಗುಣವಾಗಿ ಸಾಕ್ಷ್ಯ ಸಂಗ್ರಹ, ನಿರ್ವಹಣೆಗೆ ಅಧುನಿತ ತಂತ್ರಜ್ಞಾನ ಬಳಕೆ ಮುಖ್ಯ. ಸ್ಪರ್ಧೆಗಿಂತಲೂ ನಿರಂತರ, ನಿಖರ ಕಲಿಕೆ ಅತ್ಯಗತ್ಯ. ಕೌಶಲ್ಯ, ತರಬೇತಿ, ಆಸಕ್ತಿ ವ್ಯಕ್ತಿಯನ್ನು ರೂಪಿಸುತ್ತದೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ , ಮಂಗಳೂರು ಆರ್. ಎಫ್.ಎಸ್. ಎಲ್. ಉಪನಿರ್ದೇಶಕಿ ಸುಜಾತಾ ಕೆ.ಎಂ. ಉಪಸ್ಥಿತರಿದ್ದರು. ಉದಯ ಕುಮಾರ್ ಪ್ರಾರ್ಥಿಸಿದರು. ಉಡುಪಿ ಉಪವಿಭಾಗದ ಉಪ ಅಧೀಕ್ಷಕ ಡಿ. ಟಿ. ಪ್ರಭು ಸ್ವಾಗತಿಸಿದರು. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!