ಸಿಎ/ಸಿಎಸ್‌ನಲ್ಲಿ ಕುಂದಾಪುರ ಎಕ್ಸಲೆಂಟ್‌ ಪಿಯು ಕಾಲೇಜು ಉತ್ತಮ ಸಾಧನೆ

KannadaprabhaNewsNetwork |  
Published : Feb 15, 2024, 01:34 AM IST
ಎಕ್ಸಲೆಂಟ್ | Kannada Prabha

ಸಾರಾಂಶ

ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯು ತರಗತಿಯಿಂದಲೇ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ನೆರವಾಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಉತ್ತಮ ಶಿಕ್ಷಣ ಉಜ್ವಲ ಭವಿಷ್ಯದ ಅಡಿಪಾಯ ಎನ್ನುವ ಧ್ಯೇಯ ವಾಕ್ಯದಂತೆ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಸುಣ್ಣಾರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾಗಿರುವ ಎಕ್ಸಲೆಂಟ್‌ ಪಿ.ಯು. ಕಾಲೇಜು ಸುಣ್ಣಾರಿ ಸುಜ್ಙಾನ್‌ ಎಜ್ಯುಕೇಶನಲ್‌ ಟ್ರಸ್ಟ್‌ನ ನೂತನ ಸಾರಥ್ಯದೊಂದಿಗೆ ಮುನ್ನಡೆಯುತ್ತಿದೆ.

ವಾಣಿಜ್ಯ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳಾದ ಹೃತಿಕ್‌ ಎಂ.‌ (೨೩೭), ಆಯುಷ್‌ (೨೩೬), ದೀಕ್ಷಾ ಎ. ಶೆಟ್ಟಿ (೨೨೩), ಸಮೃದ್ಧಿ ಎಸ್.‌ ಶೆಟ್ಟಿ (೨೧೮) ಮತ್ತು ಅಮೋಘ್‌ (೨೦೨) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವೈಷ್ಣವಿ (೧೩೭), ಸಹನಾ (೧೧೮) ಮತ್ತು ಭೂಮಿಕಾ (೧೧೨) ಅಂಕಗಳೊಂದಿಗೆ ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿಎ ಫೌಂಡೇಶನ್, ಸಿಎಸ್ ಫೌಂಡೇಶನ್ (ಸಿಎಸ್‌ಇಇಟಿ ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ಹಂತದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ.

ವೃತ್ತಿಪರ ಕೋರ್ಸುಗಳಿಗೆ ಸಿದ್ಧತೆ: ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯು ತರಗತಿಯಿಂದಲೇ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ನೆರವಾಗಿದೆ. ಸಿಎ/ಸಿಎಸ್ ಫೌಂಡೇಶನ್ ಕೋರ್ಸುಗಳಿಗೆ ದೇಶದ ವಿವಿಧ ಭಾಗಗಳ ಅನುಭವಿ ಶಿಕ್ಷಕರು, ಅನುಭವಿ ಲೆಕ್ಕಪರಿಶೋಧಕರ ಜೊತೆಗೆ ಅನುಭವಿ ಕಂಪನಿ ಸೆಕ್ರೆಟರಿ ಅವರು ಕೂಡ ಬೋಧಕರಾಗಿ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಉನ್ನತಿಗೆ ಅವರು ಸಹಕಾರಿಯಾಗಲಿದ್ದಾರೆ . ಪದವಿಪೂರ್ವ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸುಗಳ ತರಬೇತಿಯನ್ನು ನೀಡಿ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಜೆ.ಇ.ಇ. ಮೈನ್ಸ್: ಕ್ರಿಯೇಟಿವ್‌ನ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

ಕಾರ್ಕಳ: ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ವಿಭಾಗಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ. ಮೈನ್ಸ್‌ನ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಕಾಲೇಜಿನ 26 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳಿಸಿದ್ದಾರೆ. 81 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಪ್ರಣವಿ ಎಂ. (98.6313), ಯುವರಾಜ್ ಬಿ.ಕೆ. (98.2878), ಸತೀಶ ಗೌಡ (97.9123), ಆನ್ಯಾಡಿ ಜೆ. ಗೌಡ (97.7325), ಕಾರ್ತಿಕ್ ಎ.ಎಸ್. (97.4489), ಕದಂಬ ಸಿದ್ದಾಂತ್ ಎಸ್. (97.3435), ಸುಜಿತ್ ಡಿ.ಕೆ. (97.2340) ಹಾಗೂ ಪ್ರೇಮ್‌ ಸಾಗರ್ ಪಾಟೀಲ್ (97.1615) ಪರ್ಸಂಟೈಲ್ ಗಳಿಸಿದ್ದಾರೆ.

ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನುಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ.ಇ.ಇ. ಸಂಯೋಜಕ ನಂದೀಶ್ ಎಚ್.ಬಿ. ಶ್ಲಾಘಿಸಿ ಅಭಿನಂದಿಸಿದ್ದಾರೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ