ಶಿವಕುಮಾರ ಕುಷ್ಟಗಿ
ಜಿಲ್ಲಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನಿತ್ಯವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವೇ ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ.
ಮದ್ಯ ಮಾರಾಟ ಹೆಚ್ಚಳದಿಂದಾಗಿ ದಿನೇ ದಿನೇ ಮದ್ಯಪ್ರಿಯರ ಸಂಖ್ಯೆಯೇನೋ ಹೆಚ್ಚಳವಾಗಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಆದರೆ, ಇದು ಮದ್ಯಪ್ರಿಯರ ಕುಟುಂಬಗಳಿಗೆ ಕಂಟಕ ಪ್ರಾಯವಾಗಿದ್ದರೆ, ಬಾರ್ ಅಂಗಡಿಗಳಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯ ಇಡೀ ಸಮಾಜಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಸರ್ಕಾರದ ನಿಯಮಗಳ ಪ್ರಕಾರ ಕೆಲವೊಂದು ಬಾರ್‌ಗಳು ಕೇವಲ ಮದ್ಯ ಮಾರಾಟ ಮಾತ್ರ ಮಾಡಬೇಕು, ಆದರೆ, ಅಲ್ಲಿಯೇ ಕುಡಿಯಲು ಅವಕಾಶ ಕಲ್ಪಿಸುತ್ತಾರೆ. ಇದಕ್ಕಾಗಿ ಈಗ ಪ್ರತಿಯೊಂದು ಅಂಗಡಿಗಳು ಮೊರೆ ಹೋಗಿರುವುದು ಪ್ಲಾಸ್ಟಿಕ್ ಗ್ಲಾಸ್‌ಗಳಿಗೆ. ಇದರಿಂದಾಗಿ ನಿತ್ಯವೂ ಅತಿಯಾದ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇನ್ನು ರೆಸ್ಟೋರೆಂಟ್‌ಗಳಲ್ಲಿಯೂ ಪ್ಲಾಸ್ಟಿಕ್ ಗ್ಲಾಸ್‌ಗಳ ಬಳಕೆ ವಿಪರೀತ ಹೆಚ್ಚಳವಾಗಿರುವುದು ಸಮಸ್ಯೆಯನ್ನು ದುಪ್ಪಟ್ಟು ಮಾಡಿದೆ.
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 19 ಎಂಎಸ್ಐಎಲ್ ಸೇರಿದಂತೆ ವಿವಿಧ ಹಂತದ 200ಕ್ಕೂ ಹೆಚ್ಚು ಮದ್ಯ ಮಾರಾಟ ಅಂಗಡಿಗಳಿವೆ. ಪ್ರತಿಯೊಂದು ಅಂಗಡಿಯಿಂದ ಕನಿಷ್ಠ ದಿನಕ್ಕೆ 100 ಗ್ಲಾಸ್ ಬಳಕೆ ಮಾಡುವುದು ಸಾಮಾನ್ಯ. ಇದರಿಂದಾಗಿ ವ್ಯಾಪಕ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ನಿತ್ಯ ಗದಗ-ಬೆಟಗೇರಿ ಅವಳಿ ನಗರದಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ಬಳಕೆಯಾದ ಗ್ಲಾಸ್‌ಗಳ ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಇದರ ಸರಿಯಾದ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಅವಳಿ ನಗರದ ಚರಂಡಿಗಳೆಲ್ಲ ತ್ಯಾಜ್ಯ ಗ್ಲಾಸ್‌ಗಳಿಂದಲೇ ತುಂಬಿ ಹೋಗಿವೆ.
ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯಪ್ರಿಯರು ಕುಡಿಯಲು ಬಳಸುವ ಪ್ಲಾಸ್ಟಿಕ್ ಗ್ಲಾಸ್‌ಗಳೊಟ್ಟಿಗೆ, ನಿತ್ಯವೂ ಬಳಕೆಯಾಗುವ ಸಣ್ಣ ಸಣ್ಣ ಮದ್ಯ ಸಂಗ್ರಹಣೆ ಮಾಡುವ ಟೆಟ್ರಾ ಪ್ಯಾಕ್‌ಗಳಿಂದಲೂ ಕಸ ಉತ್ಪತ್ತಿಯಾಗುತ್ತಿದೆ. ಪ್ರತಿಯೊಂದು ಬಾರ್ ಅಕ್ಕಪಕ್ಕದಲ್ಲಿನ ಕಸದ ರಾಸಿಯಲ್ಲಿ ಟೆಟ್ರಾ ಪ್ಯಾಕ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ. ಹೆಚ್ಚಿನ ದರಕ್ಕೆ ಮಾರಾಟ
ಅಗತ್ಯ ಕ್ರಮ
ಲಕ್ಷ್ಮೀನಾಯಕ ಅಬಕಾರಿ ಉಪಆಯುಕ್ತರು, ಗದಗ