ಮಂಗಳೂರು: ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಾಗಿ ಬ್ಯಾರೀಸ್ ಗ್ರೂಪ್ ಕ್ರೆಡಾಯಿ ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಪಾತ್ರವಾಗಿದೆ. ಇತ್ತೀಚೆಗೆ ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ನಡೆದ ಕ್ರೆಡಾಯಿ ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ೨೦೨೫ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ದೇಶದಾದ್ಯಂತ ೫೦೦ಕ್ಕೂ ಹೆಚ್ಚು ಖ್ಯಾತ ಡೆವಲಪರ್‌ಗಳು ಭಾಗವಹಿಸಿದ್ದು, ೮೦೦ಕ್ಕೂ ಹೆಚ್ಚು ಯೋಜನೆಗಳನ್ನು ಪರಿಗಣನೆಗೆ ಸಲ್ಲಿಸಲಾಗಿತ್ತು. ಮೌಲ್ಯಮಾಪನದ ಬಳಿಕ ೧೭೫ ಯೋಜನೆಗಳನ್ನು ಶಾರ್ಟ್‌ಲೀಸ್ಟ್ ಮಾಡಲಾಗಿದ್ದು, ಅವುಗಳಲ್ಲಿ ೨೫ ಯೋಜನೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಉಪ ಆಡಳಿತ ನಿರ್ದೇಶಕ ಸಿದ್ದೀಕ್ ಬ್ಯಾರಿ, ಕ್ರೆಡಾಯಿ ರಾಷ್ಟ್ರೀಯ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲೇ ತೀವ್ರ ಸ್ಪರ್ಧೆಯಲ್ಲಿ ಲಭಿಸಿದ ಈ ಗೌರವ ಬ್ಯಾರೀಸ್ ಗ್ರೂಪ್‌ಗೆ ಮಹತ್ವದ ಮೈಲಿಗಲ್ಲು. ಸುಸ್ಥಿರ ಅಭಿವೃದ್ಧಿ ಹಾಗೂ ಶ್ರೇಷ್ಠ ಇಂಜಿನಿಯರಿಂಗ್ ಹಾಗೂ ಜವಾಬ್ದಾರಿಯುತ ನಿರ್ಮಾಣಕ್ಕೆ ಸಂಸ್ಥೆ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಮನ್ನಣೆ ಎಂದು ಹೇಳಿದ್ದಾರೆ.