ಕನಕಪುರ: ವಿಶೇಷಚೇತನ ಮಕ್ಕಳು ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡುವುದರಿಂದ ಅವರು ದೈಹಿಕ ಹಾಗೂ ಮಾನಸಿಕ ಸದೃಢರಾಗಬಹುದು ಎಂದು ದಯಾನಂದ ಸಾಗರ್ ಆಸ್ಪತ್ರೆಯ ಡಾ.ರೇಖಾ ತಿಳಿಸಿದರು.
ನಗರದ ಎಸ್‌ಆರ್‌ಪಿ ಕಚೇರಿಯಲ್ಲಿ ದಯಾನಂದ ಸಾಗರ್ ಆಸ್ಪತ್ರೆ ಫಿಸಿಯೋ ಸೆಂಟರ್ ವಿಭಾಗ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ವಿಶೇಷಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಕ್ಷದಲ್ಲಿ 2 ಅಥವಾ 3 ಮಕ್ಕಳಿಗೆ ಅಂಗವಿಕಲತೆ ಕಾಣಿಸಿಕೊಳ್ಳುತ್ತದೆ. ಫಿಜಿಯೋಥೆರಪಿಯಿಂದ ವಿಶೇಷ ಚೇತನ ಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ದೈಹಿಕ ಮತ್ತು ಮಾನಸಿಕ ಶಕ್ತಿ ಸಿಗಲಿದೆ ಎಂದರು.ವಿಶೇಷಚೇತನ ಮಕ್ಕಳು ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಮಕ್ಕಳ ವೈಕಲ್ಯವಿರುವ ಮೂಳೆ ಮಾಂಸಗಳಲ್ಲಿ ಶಕ್ತಿ ಬರಲಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಜೊತೆಗೆ ಏಕಾಗ್ರತೆ ಹೆಚ್ಚಾಗುತ್ತದೆ. ಮಕ್ಕಳಿಗೆ ಸಂಪೂರ್ಣ ಚಿಕಿತ್ಸೆ ಕೊಡಿಸುವುದರಿಂದ ಮಕ್ಕಳು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯ ಎಂದರು.
ಡಾ. ವಿಜಯಕುಮಾರ್ ಮಾತನಾಡಿ, ತಾಯಂದಿರು ವಿಶೇಷಚೇತನ ಮಕ್ಕಳನ್ನು ಹೆಚ್ಚಿನ ಮುತುವರ್ಜಿಯಿಂದ ನೋಡಿಕೊಳ್ಳಬೇಕು. ಆ ಮಕ್ಕಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು. ಈ ಮಕ್ಕಳನ್ನು ಕಡೆಗಣಿಸಬಾರದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬಿಆರ್ ಸಿ ಶಿವಣ್ಣ, ಬಿ ಆರ್ ಪಿ ಪವಿತ್ರ, ಬಿಐಇಆರ್‌ಟಿ ಜಗದೀಶ್, ಉಮೇಶ್‌ಬಾಬು, ಎಸ್.ಬಿ.ಗೌಡ, ಲಯನ್ಸ್ ಮರಸಪ್ಪ ರವಿ, ಲಯನ್ಸ್ ಹರೀಶ್, ಲಯನ್ಸ್ ಗೋಪಾಲ್, ವೆಂಕಟೇಶ್, ಬಸವರಾಜ್, ದಯಾನಂದ ಸಾಗರ್ ಆಸ್ಪತ್ರೆ ಫಿಜಿಯೋಥೆರಪಿ ಡಾ.ಕಂಚನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ01:
ಕನಕಪುರದಲ್ಲಿ ವಿಶೇಷ ಚೇತನರ ದಿನಾಚರಣೆ ಅಂಗವಾಗಿ ನಡೆದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಿಕ್ಷಣ ಇಲಾಖೆ, ದಯಾನಂದ್ ಸಾಗರ್ ಆಸ್ಪತ್ರೆ ಹಾಗೂ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.