ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಕೃಷಿ ಚಟುವಟಿಕೆಗಳು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದ್ದಾರೆ.
ಯಾವುದೇ ಕೋಣೆಯಿಂದ ಹೊರಡುವಾಗ ಲೈಟ್, ಫ್ಯಾನ್ ಮತ್ತು ಎಸಿಗಳನ್ನು ಕಡ್ಡಾಯವಾಗಿ ಬಂದ್ ಮಾಡಿ. ಹಗಲಿನಲ್ಲಿ ಮನೆಯ ಕಿಟಕಿಗಳನ್ನು ತೆರೆದಿಟ್ಟು ಸ್ವಾಭಾವಿಕ ಬೆಳಕು ಮತ್ತು ಗಾಳಿಯನ್ನು ಹೆಚ್ಚಾಗಿ ಬಳಸಿ. ಟಿವಿ, ಕಂಪ್ಯೂಟರ್ ಮತ್ತು ಮೊಬೈಲ್ ಚಾರ್ಜರ್‌ಗಳನ್ನು ಬಳಸದಿದ್ದಾಗ ಸ್ವಿಚ್ ಆಫ್ ಮಾಡುವುದಲ್ಲದೆ ಪ್ಲಗ್‌ನಿಂದ ಹೊರತೆಗೆಯಿರಿ. ಬರಗಾಲದ ಕಠಿಣ ಸಮಯದಲ್ಲಿ ಪ್ರತಿಯೊಬ್ಬ ನಾಗರಿಕರ ಸಣ್ಣ ಉಳಿತಾಯವೂ ಕೂಡ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತದೆ. ಪ್ರತಿ ಹನಿ ನೀರು ಮತ್ತು ಪ್ರತಿ ಯೂನಿಟ್ ವಿದ್ಯುತ್ ಅಮೂಲ್ಯ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದ್ದಾರೆ.
ಮಂತ್ರಿ ಫಸಲ್ ಬಿಮಾ ಯೋಜನೆ ನೋಂದಣಿಗೆ ಸಲಹೆಬೆಳೆ ವಿಮೆ- ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಇಲಾಖೆಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅದರಂತೆ, ಜಿಲ್ಲೆಯ ರೈತರು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟ ಪರಿಹಾರ ಪಡೆಯಲು ನಿಗದಿತ ಕೊನೆಯ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಮುಂಗಾರು ಬೆಳೆಗಳಿಗೆ ವಿಮಾ ಮೊತ್ತದ ಕೇವಲ ಶೇ.2 ರಷ್ಟು ಮಾತ್ರ ರೈತರು ಪ್ರೀಮಿಯಂ ಪಾವತಿಸಬೇಕು. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.