ಜನ ಮನದಲ್ಲಿ ಉಳಿಯುವ ಕಾರ್ಯ ಮುಖ್ಯ: ಯುವರಾಜ್ ಜೈನ್

KannadaprabhaNewsNetwork |  
Published : Sep 09, 2026, 02:45 AM IST
ಯುವರಾಜ್ ಜೈನ್ ಅವರಿಗೆ ಕೃಷ್ಣೋತ್ಸವ ಪ್ರಶಸ್ತಿ' ಪ್ರದಾನ | Kannada Prabha

ಸಾರಾಂಶ

ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆದ ಬೆದ್ರದ ಕೃಷ್ಣೋತ್ಸವ-2026 ಕಾರ್ಯಕ್ರಮದಲ್ಲಿ 2026ನೇ ಸಾಲಿನ ಕೃಷ್ಣೋತ್ಸವ ಪ್ರಶಸ್ತಿ

ಮೂಡುಬಿದಿರೆ: ನಾವು ಎಷ್ಟು ಕಾಲ ಬದುಕಿದ್ದೇವೆ ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಸದಾ ಉಳಿಯುವಂತ ಬದುಕು ಸಾಗಿಸುವುದು ಮುಖ್ಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.

ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆದ ಬೆದ್ರದ ಕೃಷ್ಣೋತ್ಸವ-2026 ಕಾರ್ಯಕ್ರಮದಲ್ಲಿ 2026ನೇ ಸಾಲಿನ ಕೃಷ್ಣೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಮೃಣ್ಮಯಮೂರ್ತಿ ರಚಿಸುತ್ತಿರುವ ಜಗನ್ನಾಥ ಪ್ರಭು, ಯುವ ವಾಹಿನಿಯ ಪ್ರಮುಖ ಜಗದೀಶ್ ಚಂದ್ರ ಡಿ.ಕೆ. ಹಾಗೂ ಪರಿಸರ ಸ್ನೇಹಿ ಕಾರ್ಯಕರ್ತೆ ಸಂಧ್ಯಾ ಭಟ್ ಅವರನ್ನು ಸಮ್ಮಾನಿಸಲಾಯಿತು.ಚೌಟರ ಅರಮನೆಯ ಕುಲದೀಪ ಎಂ. ಶ್ರೀಪತಿ ಭಟ್, ಜಗದೀಶ ಅಧಿಕಾರಿ, ವಕೀಲ ಶರತ್ ಡಿ. ಶೆಟ್ಟಿ ಕೆ. ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ| ಅಮರಶ್ರೀ ಶೆಟ್ಟಿ ಇರುವೈಲ್ ಬಿಲ್ಲವ ಸಂಘನೆ ಅಧ್ಯಕ್ಷ ಕುಮಾರ್ ಪೂಜಾರಿ, ಮಯೂರಿ ಸಿಲ್ಸ್‌ನ ರಾಜೇಂದ್ರ, ಕುಮಾರ್, ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಎಚ್. ಸುರೇಶ್ ಪ್ರಭು, ದೇವಸ್ಥಾನದ ಮೊಕ್ತಸರ ಗುರುಪ್ರಸಾದ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಅಮ‌ರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯ್ಕ ಸಹಿತ ಪದಾಧಿಕಾರಿಗಳಿದ್ದರು.ಸಂಚಾಲಕ ರಂಜಿತ್ ಶೆಟ್ಟಿ ಸ್ವಾಗತಿಸಿದರು. ಅಕ್ಷಯ ಪ್ರಸ್ತಾವನೆಗೈದರು. ಸಂದೀಪ್ ಶೆಟ್ಟಿ ಪಿಲಿಗೊಬ್ಬು ದಿವ್ಯನಿಧಿ ರೈ ಎರುಂಬು ಮತ್ತು ಬಳಗದವರಿಂದ ಸರ ಸಮರ್ಪಣೆ ಸಂಗೀತ ಮೊಸರು ಕುಡಿಕೆ ಉತ್ಸವ ಜರಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ್ ಜೋಡೋದಿಂದ ಹೊಸ ಅವಕಾಶ ಸೃಷ್ಟಿ: ಸೊರಕೆ
ಭಾರತೀಯ ಅಧ್ಯಾತ್ಮ ನೈಜ ಜಾತ್ಯತೀತವಾದ: ಪೇಜಾವರ ಶ್ರೀ