ಎಸ್ಸೆಸ್‌ ಕೇರ್ ಟ್ರಸ್ಟ್ ಸೇವೆ ವಿಸ್ತರಣೆ: ಸಂಸದೆ ಡಾ.ಪ್ರಭಾ

KannadaprabhaNewsNetwork |  
Published : Jun 24, 2025, 12:32 AM IST
23ಕೆಡಿವಿಜಿ1, 2-ದಾವಣಗೆರೆಯಲ್ಲಿ ಎಸ್‌ಎಸ್‌ಸಿಟಿ ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೈಫ್ ಟ್ರಸ್ಟಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ................23ಕೆಡಿವಿಜಿ3, 4-ದಾವಣಗೆರೆಯಲ್ಲಿ ಎಸ್‌ಎಸ್‌ಸಿಟಿ ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗೋಷ್ಟಿಯ ವೇಳೆ ಲೈಫ್ ಟ್ರಸ್ಟಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ಟ್ರಸ್ಟ್‌ನಿಂದ ಪುನರ್ಜನ್ಮ ಪಡೆದ ಬಾಲಕನ ಪಾಲಕರ ಜೊತೆಗೆ. | Kannada Prabha

ಸಾರಾಂಶ

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಒತ್ತಾಸೆಯಂತೆ 2019ರಲ್ಲಿ ಆರಂಭವಾದ ಎಸ್ಎಸ್ ಕೇರ್‌ ಟ್ರಸ್ಟ್‌ 15ಕ್ಕೂ ಹೆಚ್ಚು ಕಾರ್ಯಕ್ರಮದ ಮೂಲಕ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ತಲುಪಿ, ಇದೀಗ ತನ್ನ ಸೇವೆ ವಿಸ್ತರಿಸುತ್ತಿದೆ ಎಂದು ಟ್ರಸ್ಟ್‌ನ ಲೈಫ್ ಟ್ರಸ್ಟಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ಶಾಸಕ ಶಾಮನೂರರಿಂದ 2019ರಲ್ಲಿ ಸ್ಥಾಪನೆ । ಆರೋಗ್ಯ, ಶಿಕ್ಷಣ, ಔದ್ಯೋಗಿಕ ಕ್ಷೇತ್ರಗಳಲ್ಲಿ ಟ್ರಸ್ಟ್‌ ಸೇವೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ತಮ್ಮ ಕುಟುಂಬದ ಹಿರಿಯರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಒತ್ತಾಸೆಯಂತೆ 2019ರಲ್ಲಿ ಆರಂಭವಾದ ಎಸ್ಎಸ್ ಕೇರ್‌ ಟ್ರಸ್ಟ್‌ 15ಕ್ಕೂ ಹೆಚ್ಚು ಕಾರ್ಯಕ್ರಮದ ಮೂಲಕ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ತಲುಪಿ, ಇದೀಗ ತನ್ನ ಸೇವೆ ವಿಸ್ತರಿಸುತ್ತಿದೆ ಎಂದು ಟ್ರಸ್ಟ್‌ನ ಲೈಫ್ ಟ್ರಸ್ಟಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದ ಜೆಜೆಎಂಎಂಸಿ ಹೊಸ ಶೈಕ್ಷಣಿಕ ಕಟ್ಟಡದಲ್ಲಿ ಎಸ್ಎಸ್ ಕೇರ್ ಟ್ರಸ್ಟ್‌ನ ನೂತನ ಕಚೇರಿ ಉದ್ಘಾಟಿಸಿದ ನಂತರ ಟ್ರಸ್ಟ್‌ನ ಶಿಕ್ಷಣ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕ, ಆರೋಗ್ಯ, ಔದ್ಯೋಗಿಕ, ಸಾಮಾಜಿಕ ಹೀಗೆ ನಾನಾ ರೂಪದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಇದೀಗ ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ತನ್ನ ಸೇವೆ ವಿಸ್ತರಿಸುತ್ತಿರುವುದು ಗಮನಾರ್ಹ ಎಂದರು.

ಟ್ರಸ್ಟ್ ಸ್ಥಾಪನೆಯಾದಾಗಿನಿಂದಲೂ ಬಡ, ಮಧ್ಯಮ ವರ್ಗದ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಸಮುದಾಯದ ಜನರಿಗೂ ಸ್ಪಂದಿಸಿ, ಆರೋಗ್ಯ ಸೇವೆ ಒದಗಿಸುತ್ತಿವೆ. ಟ್ರಸ್ಟ್‌ ಸೇವೆ, ಕಾರ್ಯಾಚರಣೆಗೆ ಆಡಳಿತ ಕೇಂದ್ರವಾಗಿ ನೂತನ ಕಚೇರಿ ಸ್ಥಾಪಿಸಿದ್ದೇವೆ. ಮಹಿಳೆಯರ ಆರೋಗ್ಯ, ಮಕ್ಕಳ ಪಾಲನೆ, ಪೋಷಣೆ, ಹದಿಹರೆಯದವರ ಸಬಲೀಕರಣ, ಎನ್‌ಸಿಡಿ ಆರೈಕೆ, ಆರೋಗ್ಯ ತಂತ್ರಜ್ಞಾನ ಹೀಗೆ 15ಕ್ಕೂ ಹೆಚ್ಚು ಕಾರ್ಯಕ್ರಮದಮೂಲಕ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಟ್ರಸ್ಟ್ ತಲುಪಿದೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪನವರ ಒತ್ತಾಸೆಯಂತೆ 16 ಡಯಾಲಿಸಿಸ್ ಯಂತ್ರ ಅಲ್ಲಿ ಒದಗಿಸಿದ್ದು, ಈವರೆಗೆ 20 ಸಾವಿರಕ್ಕೂ ಅದಿಕ ಸೈಕಲ್‌ ಗಳು ಉಚಿತವಾಗಿ ಮಾಡಲಾಗಿದೆ. ರಕ್ತದಲ್ಲಿನ ಸಕ್ಕರೆ, ಹಿಮೋಗ್ಲೋಬಿನ್, ಮೂತ್ರಪಿಂಡದ ಕಾರ್ಯ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಗಳಂತಹ ಮೂಲಭೂತ ಪ್ರಯೋಗಾಲಯ ಪರೀಕ್ಷೆ ಸಹ ಅಲ್ಲಿ ಶುರುವಾಗಿವೆ ಎಂದು ತಿಳಿಸಿದರು.

ಇದೇ ವೇಳೆ 2 ವರ್ಷದ ಹಿಂದೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಟ್ರಸ್ಟ್‌ನಿಂದ ಆರೈ

ಕೆ, ಚಿಕಿತ್ಸೆ ನಂತರ ಬಾಲಕ ಲವಲವಿಕೆಯಿಂದ ಇದ್ದು, ಆ ಮಗುವಿನ ಪಾಲಕರು ತಮ್ಮ ಇಬ್ಬರು ಮಕ್ಕಳ ಸಮೇತ ಬಂದು ಟ್ರಸ್ಟ್‌ನ ಪದಾಧಿಕಾರಿಗಳು, ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಕೃತಜ್ಞತೆ ಸಲ್ಲಿಸಿದರು.

ಟ್ರಸ್ಟ್‌ನ ಕೋರ್ ಕಮಿಟಿ ಸದಸ್ಯರಾದ ಡಾ.ಮೂಗನಗೌಡ ಪಾಟೀಲ, ಡಾ.ಶುಕ್ಲಾ ಶೆಟ್ಟಿ, ಡಾ.ಬಿ.ಎಸ್.ಪ್ರಸಾದ್‌, ಡಾ.ಕುಮಾರ, ಡಾ.ಅರುಣಕುಮಾರ ಅಜ್ಜಪ್ಪ, ಡಾ.ಎಸ್.ಲತಾ, ಡಾ.ಎ.ಶಾಂತಲಾ, ಡಾ.ಡಿ.ಬಿ.ಶುಭಾ, ಡಾ.ಅನುರೂಪ, ಗೋಪಾಲಕೃಷ್ಣ ಇತರರು ಇದ್ದರು.

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಶ್ರಮಿಸುತ್ತಿದೆ. ವೈದ್ಯಕೀಯ, ಎಂಜಿನಿಯರಿಂಗ್, ಎಂಬಿಎ ಸೇರಿದಂತೆ ವಿವಿಧ ಕೋರ್ಸ್ ಮಾಡಿದ, ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಾಯಕತ್ವ, ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಮಾರ್ಗದರ್ಶನ ನೀಡುವ ಕೆಲಸವನ್ನೂ ಟ್ರಸ್ಟ್ ಮಾಡಲಿದೆ. ಟ್ರಸ್ಟ್‌ನಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ