ಅನುಭವ ಮಂಟಪ ಜಗತ್ತಿನ ಮೊದಲ ಸೌಹಾರ್ದ ಕೇಂದ್ರ: ಸತ್ಯಂಪೇಟ

KannadaprabhaNewsNetwork |  
Published : Jan 20, 2024, 02:01 AM IST
ಫೋಟೋ- 19ಜಿಬಿ16 | Kannada Prabha

ಸಾರಾಂಶ

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಶುಕ್ರವಾರ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಜಗವೇ ಕೂಡಲಸಂಗಮವಾಗಿಸುವ ಪರಿ ಮೊದಲ ಗೋಷ್ಠಿ ಆಯೋಜಿಸಲಾಗಿತ್ತು.

ಕಲಬುರಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ಸ್ಥಾಪಿಸಲಾಗಿರುವ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲ ಸೌಹಾರ್ದ ಕೇಂದ್ರವಾಗಿತ್ತೆಂದು ಸಾಹಿತಿ- ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಜಗವೇ ಕೂಡಲಸಂಗಮವಾಗಿಸುವ ಪರಿ ಮೊದಲ ಗೋಷ್ಠಿಯಲ್ಲಿ ಸೌಹಾರ್ದ ಸಾರಿದ ಶರಣ ಸಂಸ್ಕೃತಿ ವಿಷಯ ಕುರಿತು ಮಾತನಾಡಿದ ಅವರು, ಇವನಾರವ ಎಂಬುದು ಜಾತಿ, ಇವ ನಮ್ಮವ ಎಂಬುದು ಧರ್ಮ. ನಮ್ಮೆಲ್ಲರ ಧರ್ಮ ಸಕಲ ಜೀವಾತ್ಮರಿಗೆ ಲೇಸು ಬಯಸುವಂತಿರಬೇಕು ಎಂದು ಅವರು ತಿಳಿಸಿದರು.

ವಚನ ಸಾಹಿತ್ಯ ಮತ್ತು ಜಾತಿ ವಿನಾಶ ಕುರಿತು ಅಫಜಲಪುರ ಭಾರತೀಯ ಬಸವ ಬಳಗ ಸಂಚಾಲಕ ಅಮೃತ ಪಾಟೀಲ ಮಾತನಾಡಿ, ಶರಣರಿಗೆ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ವ್ಯವಸ್ಥೆ ಹೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದು ತಿಳಿಸಿದರು. ಶರಣರ ದೃಷ್ಟಿಯಲ್ಲಿ ಭಕ್ತನೊಂದು ಕುಲ, ಭವಿಯೊಂದು ಕುಲ ಎಂದು ಹೇಳುವ ಮೂಲಕ ಜಾತಿ ವಿನಾಶಕ್ಕೆ ಮುನ್ನುಡಿ ಬರೆದರು ಎಂದು ಹೇಳಿದರು. ಡಾ. ಶಿವಶರಣಪ್ಪ ಮೋತಕಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಡಿ.ಎನ್. ಪಾಟೀಲ ದಿಕ್ಸೂಚಿ ನುಡಿಗಳನ್ನಾಡಿದರು. ಅನುಪಮಾ ಸುಲೇಕರ್ ವೇದಿಕೆಯಲ್ಲಿದ್ದರು. ರವೀಂದ್ರಕುಮಾರ ಭಂಟನಳ್ಳಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ