ಎಕ್ಸ್‌ಪರ್ಟ್‌ ಕಾಲೇಜು ಹೊಸ ಸಾಧನೆ: ನರೇಂದ್ರ ನಾಯಕ್‌

KannadaprabhaNewsNetwork | Published : Jun 6, 2024 12:30 AM

ಸಾರಾಂಶ

ಶೈಕ್ಷಣಿಕ ಹಬ್‌ ಎಂದು ಗುರುತಿಸಿಕೊಂಡಿರುವ ಮಂಗಳೂರಿನ ಪಾಲಿಗೆ ಈ ಸಾಧನೆ ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಖಿಲ ಭಾರತ ಮಟ್ಟದ ನೀಟ್‌ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್‌ ಕಿಶೋರ್‌ ಅಖಿಲ ಪ್ರಥಮ ರಾಂಕ್‌ ಪಡೆಯುವ ಮೂಲಕ, ಎಕ್ಸ್‌ಪರ್ಟ್‌ ಕಾಲೇಜು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್‌. ನಾಯಕ್‌ ಹೇಳಿದ್ದಾರೆ.ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ರಾಂಕ್‌ ಪಡೆದ ವಿದ್ಯಾರ್ಥಿ ಅರ್ಜುನ್‌ ಕಿಶೋರ್‌ ಅವರನ್ನು ಸನ್ಮಾನಿಸಿ ಮಾತನಾಡಿದರು.

ಶೈಕ್ಷಣಿಕ ಹಬ್‌ ಎಂದು ಗುರುತಿಸಿಕೊಂಡಿರುವ ಮಂಗಳೂರಿನ ಪಾಲಿಗೆ ಈ ಸಾಧನೆ ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.

ಎಕ್ಸ್‌ಪರ್ಟ್‌ ಕಾಲೇಜಿನ 1551 ವಿದ್ಯಾರ್ಥಿಗಳಲ್ಲಿ ಶೇ. 97ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹದಿನಾಲ್ಕು ವಿದ್ಯಾರ್ಥಿಗಳು 700 ಹಾಗೂ ಅದಕ್ಕಿಂತ ಅಧಿಕ ಪಡೆದರೆ, 55 ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ, 109 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 176 ವಿದ್ಯಾರ್ಥಿಗಳು 625 ಅಂಕಕ್ಕಿಂತ ಅಧಿಕ, 271 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ, 359 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ, 451 ವಿದ್ಯಾರ್ಥಿಗಳು 550 ಅಂಕಕ್ಕಿಂತ ಅಧಿಕ, 534 ವಿದ್ಯಾರ್ಥಿಗಳು 525 ಅಂಕಕ್ಕಿಂತ ಅಧಿಕ, 628 ವಿದ್ಯಾರ್ಥಿಗಳು 500 ಅಂಕಕ್ಕಿಂತ ಅಧಿಕ, 731 ವಿದ್ಯಾರ್ಥಿಗಳು 475 ಅಂಕಕ್ಕಿಂತ ಅಧಿಕ, 815 ವಿದ್ಯಾರ್ಥಿಗಳು 450 ಅಂಕಕ್ಕಿಂತ ಅಧಿಕ, 895 ವಿದ್ಯಾರ್ಥಿಗಳು 425 ಅಂಕಕ್ಕಿಂತ ಅಧಿಕ, 977 ವಿದ್ಯಾರ್ಥಿಗಳು 400 ಅಂಕಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದರು.

ಅಖಿಲ ಭಾರತ ಮಟ್ಟದಲ್ಲಿ ನೀಟ್‌ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟುವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ಶೇ. 97ರಷ್ಟುವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ನರೇಂದ್ರ ನಾಯಕ್ ತಿಳಿಸಿದರು.

ಎಕ್ಸ್‌ಪರ್ಟ್‌ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್‌. ನಾಯಕ್‌, ಐಟಿ ನಿರ್ದೇಶಕ ಅಂಕುಶ್‌ ಎನ್‌. ನಾಯಕ್‌, ವಳಚ್ಚಿಲ್‌ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಪ್ರಾಂಶುಪಾಲ ಎನ್‌.ಕೆ. ವಿಜಯನ್‌, ಶೈಕ್ಷಣಿಕ ಪ್ರಾಂಶುಪಾಲ ಪ್ರೊ. ಸುಬ್ರಹ್ಮಣ್ಯ ಉಡುಪ, ಕೊಡಿಯಾಲ್‌ ಬೈಲ್‌ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಪ್ರೊ.ರಾಮಚಂದ್ರ ಭಟ್‌, ಎಐಸಿ ವಿಭಾಗದ ಸಂಯೋಜಕ ಪ್ರೊ. ಶ್ಯಾಮ್‌ ಪ್ರಸಾದ್‌, ಕೋರ್‌ ಕಮಿಟಿ ಸಮಿತಿ ಸದಸ್ಯ ಪ್ರೊ. ವಿನಯ್‌ ಕುಮಾರ್‌, ಕೋಚಿಂಗ್‌ ವಿಭಾಗದ ಕೋ ಆರ್ಡಿನೇಟರ್‌ ಗುರುದತ್‌, ಕರುಣಾಕರ ಬಳ್ಕೂರು ಜತೆಗೆ ರಾಂಕ್‌ ವಿಜೇತ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಇದ್ದರು.

Share this article